ರಾಣೇಬೆನ್ನೂರು14: ಕರೋನಾ ವೈರಾಣು ರಾಜ್ಯಕ್ಕೂ ಕಾಲಿಟ್ಟಿದ್ದು, ಇದೊಂದು ಗಂಭೀರ ಸಮಸ್ಯೆಯಾಗಿ ಕಾಡುತ್ತಲಿದೆ. ಈಗಾಗಲೇ, ರಾಜ್ಯ ಸಕರ್ಾರದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮುಂಜಾಗೃತಾ ಕ್ರಮವಾಗಿ ವಾರಗಳ ಕಾಲ ಸಭೆ , ಸಮಾರಂಭ, ಮದುವೆ-ಮಹೋತ್ಸವ, ಉತ್ಸವಗಳು ಸೇರಿದಂತೆ ಜನಸಂದಣಿಯಾಗುವ ಯಾವುದೇ ಕಾರ್ಯಕ್ರಮಗಳು ಆಯೋಜಿಸಬಾರದೆಂದು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕಾ ಕೇಂದ್ರಗಳಲ್ಲಿ ಎಲ್ಲ ಅಧಿಕಾರಿಗಳ ಸಭೆ ಆಯೋಜಿಸುವ ಮೂಲಕ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತಂತೆ ಸಲಹೆ ಸೂಚನೆ ಪಡೆದು ಕ್ರೀಯಾ ಯೋಜನೆ ರೂಪಿಸಲಾಗುತ್ತದೆ ಅದಕ್ಕೆ ನಾಗರೀಕರ ಸಂಘ-ಸಂಸ್ಥೆಗಳ, ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸದೇ, ಶ್ರಮಿಸಲು ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಕರೆ ನೀಡಿದರು.
ಅವರು ಶನಿವಾರ ಸಂಜೆ ಇಲ್ಲಿನ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಕರೋನಾ ವೈರಸ್ ತಡಗಟ್ಟುವ ಹಿನ್ನಲೆಯಲ್ಲಿ ಆಯೋಜನೆಗೊಂಡಿದ್ದ, ಅಧಿಕಾರಿಗಳ ಮತ್ತು ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಯಾವುದೇ ಕರೋನಾ ವೈರಸ್ ಹರಡಿರುವ ಯಾವುದೇ ಮಾಹಿತಿ ಇಲ್ಲ. ಅಲ್ಲಲ್ಲಿ ಉಹಾಪೂಹಗಳು ಹರಡಿದ್ದು, ವಾಸ್ತವಿಕ ಸತ್ಯ. ಅದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಎಲ್ಲಕಡೆಯೂ ಇಲಾಖೆಯಿಂದ ಮುಂಜಾಗೃತ ಕ್ರಮ ವಹಿಸಿದ್ದಾರೆ. ಅದಕ್ಕಾಗಿ ತಾಲೂಕಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಯಾರೂ ಹೆದರುವ ಅಥವಾ ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಉಹಾಪೂಹಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಮಾಧ್ಯಮದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು ಇಲ್ಲಿಯವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ. ಪ್ರವಾಸಕ್ಕೆಂದು ಹೋದವರು ಬಂದಿರುವ ಬಗ್ಗೆ ಮಾಹಿತಿ ಇದೆ. ಅದರಲ್ಲಿ ಕೆಲವರಿಗೆ ಈಗಾಗಲೇ ನಮ್ಮ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಯಾವುದೇ ಸೋಂಕು ಇದೆ ಎನ್ನುವುದು ಧೃಢಪಟ್ಟಿಲ್ಲ. ಯಾರೂ ಧೃತಿಗೆಡಬಾರದು. ತಾವು ಆರೋಗ್ಯ ಇಲಾಖೆಯ ವೈದ್ಯರ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದಿದ್ದೇನೆ. ಯಾವುದೇ ಶಂಕಿತ ವ್ಯಕ್ತಿಗಳು ಇಲ್ಲ ಎನ್ನುವುದು ಸ್ಪಷ್ಠವಿದೆ. ಆದರೂ ನಾಳೆ ಬೆಳಿಗ್ಗೆ ಮತ್ತೊಂದು ಬಾರಿ ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮತ್ತೊಂಮ್ಮೆ ಸೂಚಿಸುತ್ತೇನೆ ಎಂದರು.
ನಾಗರೀಕರು ಮತ್ತು ಅಧಿಕಾರಿಗಳು ಗ್ರಾಮೀಣ ಜನತೆ ತಾಲೂಕಾ ಆಡಳಿತದೊಂದಿಗೆ ಇದೊಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಬೇಕು. ಮತ್ತು ತಮ್ಮೊಂದಿಗೆ ಸದಾಕಾಲವೂ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಮಾಹಿತಿ ವದಗಿಸಬೇಕು. ಅದಕ್ಕಾಗಿ ತಾವು ಮನವಿ ಮಾಡುತ್ತಿರುವುದಾಗಿ ಶಾಸಕ ಅರುಣಕುಮಾರ ಪೂಜಾರ ಅವರು ಕೋರಿದರು. ಅಲ್ಲಲ್ಲಿ ಇರುವ ಕೊಳಚೆ ಪ್ರದೇಶದಲ್ಲಿ ನೀರು ಹರಿಯುವುದು ಸಾಮಾನ್ಯ ಅಂಥಹ ಕೊಳಚೆ ಪ್ರದೇಶದಲ್ಲಿ ವಾಸವಾಗಿರುವ ನಾಗರೀಕರು ಕೂಡಲೇ ಜಾಗೃತರಾಗಿ ಅತ್ಯಂತ ಸ್ವಚ್ಛತೆಯಿಂದ ಇಲಾಖೆಯ ಕ್ರಮವನ್ನು ವಹಿಸಿ ಪರಿಪಾಲಿಸಿ ತಮ್ಮ ಬದುಕನ್ನು ತಾವು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ಕರೋನಾ ವೈರಾಣು ಯಾವುದೇ ಕಾರಣಕ್ಕೂ ನಮ್ಮ ಭಾಗದಲ್ಲಿ ಹರಡಬಾರದು ಎನ್ನುವ ಆಶಯ ನನ್ನದಾಗಿದ್ದು, ಈಗಾಗಲೇ ತಾವು ಗ್ರಾಮದೇವತೆಗಳು, ನಗರದೇವತೆಗಳು ಮತ್ತಿತರೆ ಧಾಮರ್ಿಕ ದೇವಾಲಯಗಳಿಗೆ ಭೇಟಿ ನೀಡಿ ಭಾವನಾತ್ಮಕ ಪ್ರಾರ್ಥನೆ ಸಲ್ಲಿಸಿರುವುದಾಗಿ ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಾಲೂಕಾ ಪಂಚಯತ್ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ನಗರಸಭಾ ಪೌರಾಯುಕ್ತ ಡಾ|| ಎನ್.ಮಹಾಂತೇಶ, ತಾಪಂ ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಉಪಾಧ್ಯಕ್ಷ ಕಸ್ತೂರವ್ವ ಹೊನ್ನಾಳಿ, ನಗರಸಭಾ ಸದಸ್ಯ ಮಲ್ಲಣ್ಣ ಅಂಗಡಿ, ಆರೋಗ್ಯಾಧಿಕಾರಿ ಸಂತೋಷ ಸೇರಿದಂತೆ ಮತ್ತಿತರೆ ಇಲಾಖೆಯ ಅಧಿಕಾರಿಗಳು, ಗಣ್ಯರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.