ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ವಿತರಿಸಿದ ಶಾಸಕ ಬಾಬಾಸಾಹೇಬ ಪಾಟೀಲ

MLA Babasaheb Patil distributes Rs 5 lakh compensation to family of lightning victim

ನೇಸರಗಿ 17: ಸಮೀಪದ ಮೇಕಲಮರಡಿ ಗ್ರಾಮದ ಶಾನೂರ ಹುಸೇನಸಾಬ್ ಶಾಬಾಹಿ ಇತನು ಕೆಲವು ದಿನಗಳ ಹಿಂದೆ ಹಲಕಿ ಕ್ರಾಸ ಹತ್ತಿರ ಸಿಡಿಲು ಬಡಿದು ಮೃತಪಟ್ಟ  ಹಿನ್ನಲೆಯಲ್ಲಿ ಶನಿವಾರದಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಮೃತರ ತಾಯಿ ದಿಲಶಾನ ಶಾಬಾಹಿ ಇವರಿಗೆ 5 ಲಕ್ಷ ರೂಪಾಯಿಗಳ ಚೆಕ್ ನ್ನು  ವಿತರಿಸಿದರು.

ಈ ಸಂದರ್ಭದಲ್ಲಿ ಬೈಲಹೊಂಗಲ ತಹಶೀಲ್ದಾರ ಹಣಮಂತ ಶಿರಹಟ್ಟಿ, ಕಂದಾಯ ಅಧಿಕಾರಿ ಸರ್ಕಲ್ ಜಗದೀಶ ಚೂರಿ,   ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಗ್ರಾ ಪಂ ಉಪಾಧ್ಯಕ್ಷ ಕಾಶಿಮ್ ಜಮಾದಾರ, ಮಂಜುನಾಥ ಹುಲಮನಿ, ಸಿದ್ದಪ್ಪ ಕಡಕೋಳ, ರಾಜು ಹಣ್ಣಿಕೇರಿ, ಚಂದ್ರಯ್ಯ ಹಿರೇಮಠ, ಪಿ ಡಿ ಓ ಸವಿತಾ ನಿಂಗವ್ವಗೋಳ, ಬಾಳಪ್ಪ ಮದನಬಾವಿ, ಕುಟುಂಬಸ್ಥರು, ಸೇರಿದಂತೆ ಗ್ರಾ ಪಂ ಸದಸ್ಯರು, ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.