ಬ್ಯಾಡಗಿ12: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಪುರಸಭೆಯ ವತಿಯಿಂದ ಕೊರೋನಾ ವೈರಸ್ ಸೋಂಕು ನಿವಾರಕ ಸುರಂಗವನ್ನು ನಿಮರ್ಿಸಿದ್ದು, ರವಿವಾರ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಸೊಂಕು ನಿರೋಧಕ ಸುರಂಗವನ್ನು ಪ್ರವೇಶಿಸುವ ಮೂಲಕ ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಸ್ಪತ್ರೆಗೆ ಬರುವ ಪ್ರತಿಯೊಬ್ಬರನ್ನು ಈ ಸುರಂಗದ ಮೂಲಕವೇ ಹಾಯ್ದು ಬರುವಂತೆ ವೈದ್ಯಾಧಿಕಾರಿಗಳು ಸೂಚಿಸಬೇಕು. ಜೊತೆಗೆ ಕೊರೋನಾ ವೈರಸ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರಲ್ಲದೆ ಕೇಂದ್ರ ಸಕರ್ಾರದಿಂದ ಬಿಡುಗಡೆಗೊಂಡಿರುವ "ಆರೋಗ್ಯ ಸೇತು" ಎನ್ನುವ ಆ್ಯಪನ್ನು ಬಳಸಿ ಸಾರ್ವಜನಿಕರು ತಮ್ಮ ಆರೋಗ್ಯ ಸ್ಥಿತಿಯನ್ನು ತಿಳಿಯಬಹುದಾಗಿದೆ ಎಂದು ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ವಿ. ಎಂ. ಪೂಜಾರ ಮಾತನಾಡಿ, ಪುರಸಭೆ ನಿಧಿಯ ಅನುದಾನದಡಿ ಪ್ರಾರಂಭಿಕ ಹಂತದಲ್ಲಿ ಹೆಚ್ಚು ಜನದಟ್ಟಣೆ ಇರುವ ಸಕರ್ಾರಿ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ನಿವಾರಕ ಸುರಂಗವನ್ನು ಅಳವಡಿಸಲು ಕ್ರಮ ವಹಿಸಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದರೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬೇರೆ ಪ್ರದೇಶದಲ್ಲಿಯೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೋಂಕು ನಿವಾರಕ ಸುರಂಗವನ್ನು ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪುಟ್ಟರಾಜ ಮಾತನಾಡಿ, ಕೋರೋನಾ ವೈರಸ್ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ಸಾರ್ವಜನಿಕ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಸೋಂಕು ನಿವಾರಕ ಸುರಂಗವನ್ನು ಅಳವಡಿಸಲು ಮುಂದಾಗಿರುವ ಪುರಸಭೆಯ ಕಾರ್ಯ ಸ್ವಾಗತಾರ್ಹವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಬಾಲಚಂದ್ರ ಪಾಟೀಲ, ವೀರೇಂದ್ರ ಶೆಟ್ಚರ, ಸಂಜೀವ ಮಡಿವಾಳರ, ಪರಶುರಾಮ ಉಜನಿಕೂಪ್ಪ, ಶಿವಯೋಗಿ ಗಡಾದ, ಮಂಜುನಾಥ ಪೂಜಾರ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.