ರಾಯಬಾಗ, 20 ; ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಯಿಂದ ರೈತರಿಗೆ, ಪ್ರಯಾಣಿಕರಿಗೆ ತ್ವರಿತವಾಗಿ ಸಾಗಲು ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವುದು ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಮಂಗಳವಾರ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ 60 ಲಕ್ಷ ರೂ. ಅನುದಾನದಲ್ಲಿ ಜಲಾಲಪೂರ-ರಾಯಬಾಗ ರಸ್ತೆ ಡಾಂಬರೀಕರಣ ಹಾಗೂ ಚಿಂಚಲಿ ರೈಲ್ವೆ ಸ್ಟೇಷನ್ ಹತ್ತಿರ 1 ಕೋಟಿ ರೂ. ಅನುದಾನದಲ್ಲಿ ರೈಲ್ವೆ ಸ್ಟೇಷನ್‌ದಿಂದ ರೈಲ್ವೆ ಗೇಟ್‌ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಗುತ್ತಿಗೆದಾರರು ಗುಣಮಟ್ಟದಿಂದ ರಸ್ತೆ ಕಾಮಗಾರಿ ಮಾಡಬೇಕೆಂದರು.
ಎಇಇ ಆರ್.ಬಿ.ಮನವಡ್ಡರ, ಸದಾಶಿವ ಘೋರೆ್ಡ, ರಾಜು ಜಾಧವ, ಮೌಲಾನಾ ನದಾಫ, ಅಂಕುಶ ಜಾಧವ, ಸುಭಾಷ ಕೋರೆ, ನಾಮದೇವ ಕಾಂಬಳೆ, ಬಸು ಅವ್ವನ್ನವರ, ರಾಜು ಮುರಚಟ್ಟಿ, ರಮೇಶ ಹಾರೂಗೇರಿ, ಲಕ್ಷ್ಮಣ ತುಳಸಿಗೇರಿ, ಮಲ್ಲು ಜಗದಾಳೆ, ಕಿರಣ ಖನದಾಳೆ, ವಿನಾಯಕ ಪವಾರ, ಕುಮಾರ ಖೋತ, ಅಜೀತ ಈರಗಾರ, ಫಿರೋಜ ಮಕಾಂದಾರ, ಮಹೇಂದ್ರ ಗಾಣಿಗೇರ, ರಾಜು ಪೋಳ, ಅನೀಲ ಮೈಶಾಳೆ, ಪ್ರಕಾಶ ತೇರದಾಳ, ಮಲ್ಲಪ್ಪ ಕಮತೆ ಇದ್ದರು.