ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

MLAs perform Bhoomi Puja for various development works

ಚಿಮ್ಮಡದಲ್ಲಿ ಬಸ್ ತಂಗುದಾನ ನಿರ್ಮಾಣಕ್ಕೆ ಅಡಿಗಲ್ಲು 

ಮಹಾಲಿಂಗಪುರ 29: ಸಮೀಪದ ಚಿಮ್ಮಡ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ/ನಿಯರ ಬಹು ದಿನಗಳ ಬೇಡಿಕೆಯಾಗಿದ್ದ ಬಸ್ ತಂಗುದಾನ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು. 

ಸ್ಥಳಿಯ ಗ್ರಾಮ ಪಂಚಾಯತಿ ಆವರಣದ ಮುಂದೆ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯ ಸುಮಾರು ಹತ್ತು ಲಕ್ಷರೂಗಳ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಬಸ್ ತಂಗುದಾನಕ್ಕೆ ಶನಿವಾರ ಗುದ್ದಲಿಪೂಜೆ ನೆರವೇರಿಸಲಾಗಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಇದೇ ಸಂಧರ್ಬದಲ್ಲಿ ಗ್ರಾಮದ ಬೆಳಗಲಿ ರಸ್ತಗೆ ಹೊಂದಿಕೊಂಡಿರುವ ತೇಲಿ ತೋಟದ ಹತ್ತಿರಲ್ಲಿರುವ ಶ್ರೀ ಹನುಮಾನ ದೇವಸ್ಥಾನದ ಹತ್ತಿರ ಸುಮಾರು ಐದು ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನ ಕಾಮಗಾರಿಗೆ ಮತ್ತು ಸುಮಾರು ಐದು ಲಕ್ಷ ರೂಗಳ ವೇಚ್ಚದಲ್ಲಿ ನವೀಕರಣಗೊಳ್ಳಲಿರುವ ಗ್ರಾಮದ ಕುಂಬಾರ ಓಣಿಯಲ್ಲಿರುವ ಗದ್ದಿಗೆ ಗುಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸಿದ್ದು ಸವದಿಯವರಿಂದ ಶನಿವಾರ ಗುದ್ದಲಿಪೂಜೆ ನೆರವೇರಿಸಲಾಯಿತು.  

ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ, ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಶಂಕರ ಬಟಕುರ್ಕಿ, ಆನಂದ ಕವಟಿ, ಬೀರಾ​‍್ಪ ಹಳೆಮನಿ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮೂಧೋಳ, ಬಾಳೇಶ ಬ್ಯಾಕೋಡ, ಮಹಾಂತೇಶ ಜಾಲಿಕಟ್ಟಿ, ಸುರೇಶ ಪೂಜಾರಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.