ರಂಗಭೂಮಿಗೆ ಎಂ ಪಿ ಪ್ರಕಾಶ್ ರಂಗಭೂಮಿ ಕೊಡುಗೆ ಅಪಾರ: ಮೇಟಿ ಕೊಟ್ರಪ್ಪ

MP Prakash's contribution to theater is immense: Meti Kotrappa

ಹೂವಿನ ಹಡಗಲಿ 02: ರಂಗಭೂಮಿ ಅಭಿವೃದ್ಧಿಗೆ ಎಂ ಪಿ ಪ್ರಕಾಶ್ ರವರ ಕೊಡುಗೆ ಅಪಾರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸಾಹಿತ್ಯ ಪರಿಚಾರಕ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೇಟಿ ಕೊಟ್ರಪ್ಪ ಹೇಳಿದರು. 

ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಗುರುವಾರ ರಂಗ ಒಕ್ಕಲು ಹುಗಲೂರು ಪರಿಪೂರ್ಣ ಎಜುಕೇಷನ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಕಲರವ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಹಿತ್ಯ, ಸಂಗೀತ, ನೃತ್ಯ,ನಾಟಕ, ಜಾನಪದ, ಬಯಲಾಟ ವಿವಿಧ ಕಲಾ ಪ್ರಕಾರಗಳಿಗೆ ರಂಗಭಾರತಿ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ.ಕಲೆ ಇದ್ದರೆ ಬದುಕು. ನಿಮ್ಮ ಮಕ್ಕಳ ನಾಳಿನ ಸುಂದರ ಭವಿಷ್ಯಕ್ಕಾಗಿ ಶಿಕ್ಷಣದ ಜೊತೆಗೆ ಸೃಜನಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡಿರಿ ಎಂದು ತಿಳಿಸಿದರು.ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್ ಅಂಕಗಳ ಬೆನ್ನು ಹತ್ತದೆ ಗ್ರಾಮೀಣ ಕಲೆಗಳಲ್ಲಿ ಆಸಕ್ತಿ ಪ್ರೇರೇಪಿಸುವ ನಿಟ್ಟಿನಲ್ಲಿ ಪಾಲಕರು ಪ್ರೋತ್ಸಾಹ ನೀಡಿರಿ ಎಂದು ಹೇಳಿದರು.ಸಾಹಿತಿ ಶಾಂತಮೂರ್ತಿ ಕುಲಕರ್ಣಿ ಎಂ ಪಿ ಪ್ರಕಾಶರ ರಂಗ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ನಿರಂತರವಾಗಿ ಆಗಬೇಕು ಎಂದು ತಿಳಿಸಿದರು. 

ಬಯಲಾಟ ಅಕಾಡೆಮಿ ಸದಸ್ಯ ಡಾ ಕೆ ರುದ್ರ​‍್ಪ ಸಿಂಚನ ಪ್ರಕಾಶನದ ಸುರೇಶ ಅಂಗಡಿ ಮಾತನಾಡಿದರು.ಲಿಟ್ಲ್‌ ಚಾಂಪ್ಸ್‌ ಶಾಲೆಯ ಮುಖ್ಯ ಗುರುಗಳಾದ ಜಿ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು.ರಂಗ ಒಕ್ಕಲು ಸಂಚಾಲಕ ಅಜಯ್ ಚ ಶಿಬಿರದ ಅನುಭವಗಳನ್ನು ಹಂಚಿಕೊಂಡರು.ದಾನಪ್ಪ ಟಿ ರಮ್ಯ ಅರಸಿ,ರೇಣುಕಾ ಕರ್ಜಗಿ ನಿವೇದಿತಾ, ನಂದೀಶ್ ನವಲಿ ಬಸವರಾಜ ಹಡಗಲಿ ನಿರ್ವಹಿಸಿದರು. 

ಅಜಯ್ ಚ ನಿರ್ದೇಶನದ ಜಾನಪದ ಕಥೆ ಆಧಾರಿತ "ಸಂಚರಿಸುವ ಮರ"ದಾನಪ್ಪ ಟಿ ನಿರ್ದೇಶನದ "ಗೌಡರ ಮಗಳ ಮದುವೆ"ನಾಟಕಗಳ ಮುದ್ದು ಮಕ್ಕಳ ಅಭಿನಯ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.ನಾಟಕಗಳಿಗೆ ಸಂಗೀತದ ನೆರವು ಕೆ ಎಂ ಶಶಿಧರ, ಪರಿಕರ ಜೋಡಣೆ ಚಿತ್ರಕಲಾ ಶಿಕ್ಷಕರಾದ ನಾಗರಾಜ್ ಎಂ,ಮಧು ಸೊಪ್ಪಿನ ಪೂರಕ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದರು.ಬಸವರಾಜ ಮಲಶೆಟ್ಟಿ ಬಯಲಾಟ ಅಕಾಡೆಮಿ ವತಿಯಿಂದ ಗಿರಿಜಾ ಕಲ್ಯಾಣದಬಯಲಾಟದ ಒಂದು ಪ್ರಸಂಗವನ್ನು ಕಲಾವಿದರು ಮನೋಜ್ಞವಾಗಿ ಪ್ರದರ್ಶಿಸಿದರು.