ಮಧ್ಯಪ್ರದೇಶ: ವಿಧಾನಸಭಾ ಸ್ಪೀಕರ್ ರಿಂದ ಬಿಜೆಪಿ ಶಾಸಕನ ರಾಜೀನಾಮೆ ಅಂಗೀಕಾರ

ಭೋಪಾಲ್, ಮಾರ್ಚ್ 20, ಮಧ್ಯಪ್ರದೇಶದ ಶಹಡೋಲ್ ಜಿಲ್ಲೆಯ ಬಿಯೊಹರಿ ಪ್ರತಿನಿಧಿಸುತ್ತಿದ್ದ ಭಾರತೀಯ ಜನತಾ ಪಕ್ಷದ ಶಾಸಕ ಶರದ್ ಕೋಲ್ ಅವರ ರಾಜೀನಾಮೆಯನ್ನು ವಿಧಾನಸಭೆ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಶುಕ್ರವಾರ ಅಂಗೀಕರಿಸಿದ್ದಾರೆ‘ಕೋಲ್ ಅವರ ರಾಜೀನಾಮೆಯನ್ನು ಲಿಖಿತವಾಗಿ ಸ್ವೀಕರಿಸಿದ್ದೇನೆ. ರಾಜೀನಾಮೆ ಪತ್ರದ ಪರಿಗಣನೆಯ ನಂತರ ಅದನ್ನು ಅಂಗೀಕರಿಸಿದ್ದಾನೆ. ಸ್ಪೀಕರ್ ಸ್ಥಾನದಲ್ಲಿದ್ದು ಅನೇಕ ಶಾಸಕರ ರಾಜೀನಾಮೆ ಅಂಗೀಕರಿಸಿರುವುದಕ್ಕೆ ವಿಷಾದಿಸುತ್ತೇನೆ’ ಎಂದು ರಾಜ್ಯ ರಾಜಧಾನಿಯಲ್ಲಿ ಸುದ್ದಿ ಮಾಧ್ಯಮಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಜಾಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.