ಶಿಂದೊಳ್ಳಿಯಲ್ಲಿ 22ರಿಂದ 30ರವರೆಗೆ ಮಹಾಲಕ್ಷ್ಮೀ, ದುರ್ಗಾದೇವಿ, ಮಸಣಾದೇವಿ ಜಾತ್ರೆ15 ವರ್ಷಗಳ ನಂತರ ಗ್ರಾಮದಲ್ಲಿ ಜಾತ್ರೆ: ಪೂರ್ವ ಸಿದ್ದತೆ ನಡೆಸಿರುವ ಗ್ರಾಮಸ್ಥರು.
ಶಿಂದೊಳ್ಳಿ 18: ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿ ಏ. 22ರಂದ 30ರ ವರೆಗೆ ಮಹಾಲಕ್ಷ್ಮೀ, ದುರ್ಗಾದೇವಿ, ಮಸಣಾದೇವಿ ಜಾತ್ರೆಯನ್ನು ಗ್ರಾಮದ ಗುರು ಹಿರಿಯರು ನೇತೃತ್ವದಲ್ಲಿ ಜರಗುವುದು.
ಎಪ್ರೀಲ್ 22ರಂದು ಮುಂಜಾನೆ 9ಗಂಟೆಗೆ ಮಹಾಲಕ್ಷ್ಮೀ ಮಂದಿರ ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ ನೇರವೇರಿಸಲಿದ್ದಾರೆ. 9.35ಕ್ಕೆ ಗ್ರಾಮದ ಜನರಿಂದ ಉಡಿ ತುಂಬುವುದು, ಸಾಯಂಕಾಲ 4 ಗಂಟೆಗೆ ಮಹಾಲಕ್ಷ್ಮೀ ದೇವಿಯ ಹೊನ್ನಾಟ ನಂತರ ಮಹಾಲಕ್ಷ್ಮೀದೇವಿಯನ್ನು ರಥದಲ್ಲಿ ಕೂಡ್ರಿಸುವರು. ಶ್ರೀ ನಾಗಯ್ಯ ಮಹಾಸ್ವಾಮಿ ತಾರಿಹಾಳ, ಶ್ರೀ ರುದ್ರಯ್ಯಾ ಮಹಾಸ್ವಾಮಿ ಶರಣಮಟ್ಟಿ ಸಾನಿಧ್ಯ ವಹಿಸುವವರು. ರಾತ್ರಿ 8ಗಂಟೆಗೆ ಬೆಳಗಾವಿಯ ಭಾರತೀಯ ಗಾಯನ ಸಮಾಜದ ಮಹಿಳೆಯರಿಂದ ಭಜನಾ ಕಾರ್ಯಕ್ರಮ ಜರಗುವುದು.
ಬುಧವಾರ 23ರಂದು ಮುಂಜಾನೆ 8ಗಂಟೆಗೆ ಸಕಲ ವಾದ್ಯದೊಂದಿಗೆ ಸಂಭ್ರಮದಿಂದ ರಥೋತ್ಸವ ಕಾರ್ಯಕ್ರಮ. ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕರಂಜಿಮಠ ಬೆಳಗಾವಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಹುಕ್ಕೇರಿ ಸಾನಿಧ್ಯ ವಹಿಸುವರು. ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲಿಕರಣ ಸಚಿವರು ಜಾತ್ರೆಗೆ ಚಾಲನೆ ನೀಡುವರು. ಚನ್ನರಾಜ ಹಟ್ಟಹೊಳಿ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿರುವರು. ಸಂಜೆ ಮಹಾಲಕ್ಷ್ಮೀ ದೇವಿಯ ಹೊನ್ನಾಟ ನಂತರ ಗದ್ದುಗೆಗೆ ಕೂಡ್ರಿಸುವರು. ರಾತ್ರಿ 9ಗಂಟೆಗೆ ಬೆಳಗಾವಿಯ ಸಮೃದ್ಧ ಸಂಸ್ಥೆಯ ಅಂಧ, ಅಂಗವಿಕಲ ವಿದ್ಯಾರ್ಥಿಗಳಿಂದ ರಸಮಂಜರಿ ಕಾರ್ಯಕ್ರಮ ಜರಗುವುದು.
ಗುರುವಾರ 24ರಂದು ಮುಂಜಾನೆ 9 ಗಂಟೆಗೆ ಗ್ರಾಮಸ್ಥರು ಹಾಗು ಸದ್ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮ, ವಿಶೇಷ ಸಮಾರಂಭದಲ್ಲಿ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸುವರು. ರಾತ್ರಿ 10 ಗಂಟೆಗೆ ಶಿಂದೊಳ್ಳಿ ಗ್ರಾಮದ ಕಲಾವಿದರಿಂದ ಗರುಡ ರಾಜ್ಯದಲ್ಲಿ ಘಟಸರ್ ನಾಟಕ. ಶುಕ್ರವಾರ 25ರಂದು ಮುಂಜಾನೆ 8 ಗಂಟೆಗೆ ಊರ ಹಿರಿಯರಿಂದ ಲಕ್ಷ್ಮೀ ದೇವಿಗೆ ಮತ್ತು ದುರ್ಗಾದೇವಿ ಹಾಗು ಮಸಣಾದೇವಿಗೆ ಉಡಿ ತುಂಬುವರು. ಸಂಜೆ 4 ಗಂಟೆಗೆ ವಿಶೇಷ ಸಮಾರಂಭದಲ್ಲಿ ಸತೀಶ ಜಾರಕಿಹೊಳಿ ಲೋಕೋಪಯೋಗಿ ಇಲಾಖೆ ಸಚಿವರು ಭಾಗವಹಿಸುವರು. ರಾತ್ರಿ 9 ಗಂಟೆಗೆ ಹಾಸ್ಯ ಕಾರ್ಯಕ್ರಮ, ಕಲಾವಿದರಾದ ಜಿ.ಕೆ ಕುಲಕರ್ಣಿ, ಎಂ.ಬಿ ಹೊಸಳ್ಳಿ, ಜಿ.ಎಸ್ ಸೋನಾರ ಇವರಿಂದ ಜರಗುವುದು.
ಶನಿವಾರ 26ರಂದು ರಾತ್ರಿ 10 ಗಂಟೆಗೆ ಶಿಂದೊಳ್ಳಿ ಗ್ರಾಮದ ಕಲಾವಿದರಿಂದ ಗುಂಡೇಟಿಗೆ ಬಗ್ಗದ ಗಂಡು ನಾಟಕ, 27ರಂದು ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮನರಂಜನ ಕಾರ್ಯಕ್ರಮ, 28ರಂದು ರಾತ್ರಿ 10ಗಂಟೆಗೆ ಶ್ರೀ ಕೃಷ್ಣ ಪಾರಿಜಾತ ಬಯಲಾಟ, ಮಂಗಳವಾರ 29ರಂದು 3ಗಂಟೆಗೆ ನೇಮಕ ಮಾಡಿದ ಕುಸ್ತಿಗಳು, ರಾತ್ರಿ 8ಗಂಟೆಗೆ ಶ್ರೀ ಬಸವಗುರು ಸೇವಾ ಭಜನಾ ಸಂಘದಿಂದ ಭಜನೆ ಮತ್ತು ಕರಿಶಿದ್ಧೇಶ್ವರ ಸಂಘದಿಂದ ಡೊಳ್ಳಿನ ಪದಗಳ ಕಾರ್ಯಕ್ರಮ. 30ರಂದು ಸಾಯಂಕಾಲ 5ಗಂಟೆಗೆ ಮಹಾಲಕ್ಷ್ಮೀದೇವಿ ಹೊನ್ನಾಟದೊಂದಿಗೆ ಸೀಮೋಲ್ಲಘನ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲ ಭಕ್ತಾದಿಗಳು, ಗುರು ಹಿರಿಯರು ಭಾಗವಹಿಸುವರು.