ಮಹಾರಾಷ್ಟ್ರ: ಸರ್ಕಾರಿ ಕಾಲೇಜುಗಳಲ್ಲಿ 19 ರಿಂದ ರಾಷ್ಟ್ರಗೀತೆ ಕಡ್ಡಾಯ

ಮುಂಬಯಿ, ಫೆ 13 :     ಛತ್ರಪತಿ ಶಿವಾಜಿ ಮಹಾರಾಜರ  ಜನ್ಮಶತಮಾನೋತ್ಸವ ದಿನವಾದ  19 ರಿಂದ  ಎಲ್ಲ ಸರ್ಕಾರಿ  ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ಮಾಡಿದೆ.

ಇದೇ  19 ರಿಂದ  ಹೊಸ ನಿಯಮ ಜಾರಿಗೆ ಬರಲಿದೆ ಎಂದೂ  ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಾಮಂತ್ ತಿಳಿಸಿದ್ದಾರೆ.

ಅದೇ ದಿನ ಛತ್ರಪತಿ ಶಿವಾಜಿ ಅವರ ಜನ್ಮಶತಮಾನೋತ್ಸವ ದಿನವೂ ಆಗಿದೆ ಎಂದಿರುವ ಅವರು, ಸಿನಿಮಾ ಆರಂಭವಾಗುವ ಮುನ್ನ ಸಿನಿಮಾ ಟಾಕಿಸ್ ಗಳಲ್ಲಿ  ರಾಷ್ಟ್ರಗೀತೆ ಹಾಡುವ ಮಾದರಿಯಲ್ಲೇ, ಕಾಲೇಜಿನ ಕಾರ್ಯಕ್ರಮಗಳ  ಆರಂಭಕ್ಕೆ ಮೊದಲು  ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡವುದನ್ನೂ ಕಡ್ಡಾಯ ಮಾಡಲಾಗುವುದು ಎಂದೂ ಸಚಿವರು  ಹೇಳಿದ್ದಾರೆ.