ಮಲ್ಲಿಕಾಜರ್ು ಯಾಳವರಿಗ ವಚನಶ್ರೀ ಪ್ರಶಸ್ತಿ

ಬಾಗಲಕೋಟೆ 15: ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು, ಹುಬ್ಬಳ್ಳಿಯಲ್ಲಿ 2018 ಅಕ್ಟೋಬರ 10 ಹಾಗೂ 11 ರಂದು ಹಮ್ಮಿಕೊಂಡ 6 ನೇ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಬಾಗಲಕೋಟೆಯ ಸಾಹಿತಿಯಾದ ಶ್ರೀ ಮಲ್ಲಿಕಾಜರ್ುನ ಯಾಳವಾರ ಇವರು ಸಲ್ಲಿಸಿದ ಸಾಹಿತ್ಯಿಕ ಅನುಪಮ ಸೇವೆಯನ್ನು ಪರಿಗಣಿಸಿ ವಚನಶ್ರೀ 2018 ಪ್ರಶಸ್ತಿ ನೀಡಿ ಗೌರವಿಸಿದೆ. ಈ ನಿಮಿತ್ಯ ಸಾಹಿತಿಗಳಾದ ಡಾ. ವ್ಹಿ.ಎಸ್. ಕಟಗಿಹಳ್ಳಿಮಠ, ಶ್ರೀಶೈಲ ಕರಿಶಂಕರಿ, ಎ.ಎಸ್. ಪಾವಟೆ, ಡಾ. ಶಶಿಕಲಾ ಮೊರಬದ, ಕಮಲಾ ರುದ್ರಾಕ್ಷಿ, ಡಾ. ಜಿ. ಆಯ್. ನಂದಿಕೋಲಮಠ, ಡಾ. ಎಸ್. ಡಿ. ಕೆಂಗಲಗುತ್ತಿ, ಚಂದ್ರಶೇಖರ ಶೆಟ್ಟರ, ಶಿವಕರಣಿ ಯಾದವಾಡ, ಅಶೋಕ ಯಾಳಗಿ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.