ಧಾರವಾಡ ಜ.30: ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆ ನಿಮಿತ್ಯ ಇಂದು ಬೆಳಿಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಹುತಾತ್ಮ ದಿನ ಆಚರಣೆ ಮಾಡಲಾಯಿತು. ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ನಮನ ಸಲ್ಲಿಸಿದರು. ನಂತರ ಗಾಂಧಿಜಿಯವರ ಹುತಾತ್ಮ ದಿನದ ಅಂಗವಾಗಿ ಮೌನಾಚರಣೆ ಮಾಡಲಾಯಿತು.ಹೇಮಂತ್ ಲಮಾಣಿ ಹಾಗೂ ಮೋಹನ್ ಗರಗ ತಂಡಗಳಿಂದ ವೈಷ್ಣವೋ ಜಯತೇ, ರಘುಪತಿ ರಾಘವ ರಾಜಾರಾಮ, ಎ ಮೇರಿ ವತನ ಸೇರಿದಂತೆ ಗಾಂಧೀ ಪ್ರಿಯ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಗಾಂಧಿಜಿಯವರ ಜೀವನದ ಸಂದೇಶ ಸಾರಿದರು.
ಜಿಲ್ಲಾ ನ್ಯಾಯಾಧೀಶರಾದ ಎಚ್.ಸಿ ಶ್ಯಾಮಪ್ರಸಾದ, ಗಂಗಾಧರ ಸಿ.ಎಂ., ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ, ಮುಖ್ಯ ನ್ಯಾಯಿಕ ದಂಡಾಧಿಕಾರಿ ಶ್ರೀಕಾಂತ ಎಸ್.ವ್ಹಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿ.ಕಾ.ಸೇ.ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿನ್ನಣ್ಣವರ ಆರ್.ಎಸ್., ಹಿರಿಯ ಸಿವಿಲ್ ನ್ಯಾಯಾಧೀಶರಾದ ಇಂದಿರಾ ಚಟ್ಟಿಯಾರ್, ರವೀಂದ್ರ ಅರಿ, ಮಮತಾ ಡಿ, ನೀತಿನ್ ಯಶವಂತರಾವ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿಜಯಲಕ್ಷ್ಮೀ ಘಾನಾಪುರ, ಸಿವಿಲ್ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡಬಸವರಾಜಪ್ಪ, ಕುರಣಿಕಾಂತ ಡಾಕು, ಪರಿಮಳಾ ತುಬಾಕಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಘೋಡಸೆ ಸೇರಿದಂತೆ ಪ್ಯಾನಲ್ ವಕೀಲರು, ನ್ಯಾಯವಾದಿಗಳು, ಕಕ್ಷಿದಾರರು, ಸಾರ್ವಜನಿಕರು ಭಾಗವಹಿಸಿದ್ದರು.