ಬಸವಣ್ಣ ದೇವರ ಜಾತ್ರೆಯಂಗವಾಗಿ ಸಾಮೂಹಿಕ ಗುಗ್ಗುಳೋತ್ಸವ,

Mass Guggulotsava as part of the Basavanna Deva festival,

ಲೋಕದರ್ಶನ ವರದಿ 

ಬಸವಣ್ಣ ದೇವರ ಜಾತ್ರೆಯಂಗವಾಗಿ ಸಾಮೂಹಿಕ ಗುಗ್ಗುಳೋತ್ಸವ, 

ಉಳ್ಳಾಗಡ್ಡಿ-ಖಾನಾಪೂರ, 05 : ಹಿಂದೂ ಧರ್ಮದಲ್ಲಿನ ಲಿಂಗಾಯತರು ವಿಶೇಷವಾಗಿ ಆಚರಿಸುವ ಅಂಗದಲ್ಲಿರುವ ಲಿಂಗವನ್ನು ಬಹಿರಂಗವಾಗಿ ತೆಗೆ ತನ್ನ ್ಲಶಿಗೆಗ್ವೆ ಶಿರಕ್ಕೆ ಎರಿಸಿಕೊಂಡು ಹೊರಟವನೆ ಲಿಂಗದ ವೀರ ಎಂದು ಆಚರಣೆಯನ್ನು ಮಾಡುತ್ತ ಬಂದಿದ್ದು ಇಂದಿಗೂ ಈ ವೀಶೀಷ್ಠ ಆಚರಣೆ ಲಿಂಗಾಯತ ಧರ್ಮದಲ್ಲಿ ಪ್ರಚಲಿತದಲ್ಲಿದೆ, 

ಇಂಥ ಕಾರ್ಯಕ್ರಮವನ್ನು ಪ್ರಥಮವಾಗಿ ಸಾಮೂಹಿಕ ಗುಗ್ಗುಳೋತ್ಸವವನ್ನು ಶ್ರೀಬಸವಣ್ನ ದೇವರ ಜಾತ್ರೆಯಲ್ಲಿ ಹಮ್ಮಿಕೊಂಡಿದ್ದು ಈ ಸಾಮೂಹಿಕ ಕಾರ್ಯಕ್ರಮ ಎಲ್ಲ ಭಕ್ತರಿಗೂ ದುಂದುವೆಚ್ಚಗಳನ್ನ ನಿಗಿಸದೆ ಎಂದು ಶ್ರೀ ಮರುಳಸಿದ್ದೇಶ್ವರ ಬ್ರಹನ್ಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು, 

ಅವರು ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ಸಾಮೂಹಿಕ ಗುಗ್ಗುಳೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು, 

ಹತ್ತರಗಿ ಕಾರಿಮಠದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು, ಕಾರ್ಯಕ್ರಮದಲ್ಲಿ ವಲಯದ ಪುರವಂತರು, ವಾದ್ಯ ಕಲಾತಂಡಗಳು, ಹಾಗೂ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು, 

 ಈ ಕಾರ್ಯಕ್ರಮದೂದ್ದಕ್ಕೂ ನುಡಿ ಹೇಳುವುದು, ಒಡಪು ಹೇಳುವುದು, ಈ ಸಂದರ್ಭದಲ್ಲಿ ಕರಿಡಿಮಜಲು ವಾದ್ಯದ ನಿನಾದ ಮತ್ತಷ್ಟು ಮೆರಗು ತಂದಿತ್ತು, ಈ ವಿಶೇಷ ಗುಗ್ಗಳೋತ್ಸವದಲ್ಲಿ ಗ್ರಾಮದ ಸುತ್ತಮುತ್ತಲಿನ 200 ಕ್ಕೂ ಹೆಜ್ಜು ಜನ ಪಾಲ್ಗೊಂಡಿದ್ದರು, ಗುಗ್ಗುಳೋತ್ಸವವು ಮುಂಜಾನೆ ಶ್ರೀಮರುಳಸಿದ್ದೇಶ್ವರ ಬ್ರಹನ್ಮಠದಲ್ಲಿ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳ ನಡುವೆ ಸಾಗರೊಪಾದಿಯಲ್ಲಿ ಜನ ಸೇರಿ ನಡೆಯಿತು, ಶ್ರೀಮಾಟ ಬಸವಣ್ಣ ದೇವರ ಗುಡಿಗೆ ಗುಗ್ಗುಳೋತ್ಸವವು ಕೊನೆಗೊಂಡಿತು,