ಹಿರಣ್ಯಕೇಶಿ ಕಾರಖಾನೆಯ ಕಾರ್ಮಿಕರ ಪಾದಪೂಜೆ ಮಾಡಿದ ಜೊಲ್ಲೆ ದಂಪತಿಗಳು

The Jolle couple worshipped the feet of the Hiranyakeshi factory workers.

ಸಂಕೇಶ್ವರ : ಸ್ಥಳೀಯ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯಲ್ಲಿ ಜೊಲ್ಲೆ ದಂಪತಿಗಳು ಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ವಿಶಿಷ್ಠವಾದ ಕಾರ್ಮಿಕರ ದಿನ ಆಚರಣೆ ಮಾಡಲಾಯಿತು. 

     ರವಿವಾರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಯಲ್ಲಿ ಕಾರ್ಮಿಕರ ದಿನ  ಆಚರಣೆ ಆಯೋಜಿಸಲಾಗಿತ್ತು. ಹಿರಣ್ಯಕೇಶಿ ಕಾರ್ಖಾನೆಯ ಸಕ್ಕರೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾರ್ಮಿಕರ ದಿನಾಚರಣೆ ಅಂಗವಾಗಿ ಈ ನೂತನ ಕಾರ್ಯಕ್ರಮಕ್ಕೆ ಜೊಲ್ಲೆ ದಂಪತಿಗಳು ನಾಂದಿ ಹಾಡಿದರು.

   ಇದೇ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕಾರಖಾನೆಯ ಅದ್ಯಕ್ಷ, ಉಪಾಧ್ಯಕ್ಷ ಇವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. 

   ಈ ಸಂದರ್ಭದಲ್ಲಿ ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕ ಶಿವನಾಯಕ ನಾಯ್ಕ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಸುರೇಂದ್ರ ದೊಡಲಿಂಗಣ್ಣನವರ, ಮಲ್ಲಿಕಾರ್ಜುನ ಪಾಟೀಲ, ಬಸಪ್ಪ ಮರ್ಡಿ, ಶಾರದಾ ಸುರೇಶಗೌಡ ಪಾಟೀಲ, ಭಾರತಿ, ಪರಗೌಡ ಪಾಟೀಲ, ಒಕ್ಕೂಟದ ಮುಖಂಡರಾದ ಕೋಠಿವಾಲೆ ಸೇರಿದಂತೆ ಕಾರ್ಮಿಕರು ಅನೇಕ ಗಣ್ಯರು ಉಪಸ್ಥಿತರಿದ್ದರು.