ಗುರುವಿನ ಕೃಪೆಯಿಂದ ಜೀವನದ ಸಾರ್ಥಕತೆ ಸಾಧ್ಯ: ಬಸಯ್ಯ ಶಾಸ್ತ್ರಿ

Meaningfulness in life is possible through the grace of a Guru: Basaiah Shastri

ಗುರುವಿನ ಕೃಪೆಯಿಂದ ಜೀವನದ ಸಾರ್ಥಕತೆ ಸಾಧ್ಯ: ಬಸಯ್ಯ ಶಾಸ್ತ್ರಿ  

ತಾಳಿಕೋಟಿ 02: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ಹೇಮರೆಡ್ಡಿ ಮಲ್ಲಮ್ಮ ತನ್ನ ಗುರು ಶ್ರೀಶೈಲ ಮಲ್ಲಿಕಾರ್ಜುನನ್ನು ಭಕ್ತಿಯಿಂದ ವಲಸಿಕೊಂಡು ಮಹಾನ್ ಶಿವರಣೆಯಾದಳು, ಮಬ್ಬು ಗಂಡನನ್ನು ಮಹಾದೇವನೆಂದು ಮನ್ನಿಸಿ, ಮತಿಗೇಡಿ ಮೈದುನನ್ನು ವೇಮನನ್ನಾಗಿ ಮಾಡಿದಳು ಇದೆಲ್ಲವೂ ಅವಳಿಗೆ ಗುರುವಿನ ಕೃಪೆಯಿಂದಲೇ  ಸಾಧ್ಯವಾಯಿತು ಎಂದು ವೇದಮೂರ್ತಿ ಬಸಯ್ಯ ಶಾಸ್ತ್ರಿಯಾಳಗಿ ಹೇಳಿದರು. ಪಟ್ಟಣದ ಎಸ್ ಕೆ ಬಡಾವಣೆಯ  ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಮಲ್ಲಮ್ಮನ 603 ನೇ ಜಯಂತೋತ್ಸವದ ಅಂಗವಾಗಿ ಬುಧವಾರ ಸಂಜೆ ಹಮ್ಮಿಕೊಂಡ ಹೇಮರೆಡ್ಡಿ ಮಲ್ಲಮ್ಮ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಮಕ್ಕಳಿಗೆ ವೇದ, ಉಪನಿಷತ್ತು ಹಾಗೂ ವಚನ ಸಾಹಿತ್ಯದ ಅಧ್ಯಯನ ಮಾಡಿಸುವುದು ಅವಶ್ಯವಾಗಿದೆ ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳು ಬೆಳೆಯುತ್ತವೆ ಎಂದರು. ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಜಗತ್ತಿಗೆ ಬಂದ ಮಹಾಪುರುಷರ ಸಂತರ ಶರಣ-ಶರಣೇಯರ ಬದುಕಿನ ಆದರ್ಶಗಳನ್ನು ತಿಳಿಸಿಕೊಡಲು ಪುರಾಣ ಪ್ರವಚನಗಳನ್ನು ನಡೆಸಲಾಗುತ್ತದೆ ಇಲ್ಲಿ 10 ದಿನಗಳ ಕಾಲ ಬಸಯ್ಯ ಶಾಸ್ತ್ರಿಗಳು ಪುರಾಣ ನಡೆಸಿಕೊಡಲಿದ್ದಾರೆ, ಇದರ ಸದುಪಯೋಗ ಮಾಡಿಕೊಳ್ಳಿ ಎಂದರ. ಕಾರ್ಯಕ್ರಮದಲ್ಲಿ ಕುಮಾರಿ ಗೌರಿ ಹಜೇರಿ ಭರತನಾಟ್ಯ,ಕುಮಾರಿ ಸಾನ್ವಿ ಪಾಟೀಲ ಹೇಮರೆಡ್ಡಿ ಮಲ್ಲಮ್ಮನ ಪಾತ್ರ ಹಾಗೂ ಕುಮಾರ ಸದ್ಭವ ಪಾಟೀಲ ಬಸವಣ್ಣನ ಪಾತ್ರ ಪ್ರದರ್ಶಿಸಿದರು. ಮುಖಂಡ ಸಂಗನಗೌಡ ಅಸ್ಕಿ ಪ್ರಸಾದ ವ್ಯವಸ್ಥೆ ಮಾಡಿದರು.ಮುಖ್ಯ ಶಿಕ್ಷಕಿ ಸುಮಂಗಲಾ ಕೋಳೂರ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಪುರಾಣಿಕ ಸಿ.ಎನ್‌.ಹಿರೇಮಠ, ಎಸ್‌.ಎಂ.ಬೇನಾಳ ಮಠ,  ಶರಣೆ ಶಾಂತಮ್ಮ ಕೋಳೂರ, ಕಾಶಿಬಾಯಿ ಅಮ್ಮನವರು, ಹೇಮರೆಡ್ಡಿ ಮಲ್ಲಮ್ಮ ಅಸೋಸಿಯೇಷನ್ ಉಪಾಧ್ಯಕ್ಷ ಎಚ್‌.ಎಸ್‌.ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ ನಾವದಗಿ, ಬಿ.ಎನ್‌.ಹಿಪ್ಪರಗಿ, ಚಿನ್ನಪ್ಪ ಮಾಳಿ, ಬಿ.ಆರ್‌.ಪೊಲೀಸ್ ಪಾಟೀಲ, ಹಾಗೂ ಸಮಾಜದ ಗಣ್ಯರು ಹಿರಿಯರು ಇದ್ದರು.