ಪುರುಷ, ಮಹಿಳೆಯರ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ

Men's, Women's National Level Kabaddi Tournament

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ನ ರಜತ ಮಹೋತ್ಸವ  

ಬೀಳಗಿ 23: ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ತತ್ವದಡಿಯಲ್ಲಿ ನಡೆಯುತ್ತಾ ಬಂದಿರುವ ಮಾಜಿ ಸಚಿವ ಎಸ್‌.ಆರ್‌. ಪಾಟೀಲರ ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕದ ಹಾಗೂ ಮುಳುಗಡೆ ಸಂತ್ರಸ್ಥರ ಬದುಕಿಗೆ ಆಶಾಕಿರಣವಾಗಿ ಬೆಳೆಗಿದವರು ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ಆರ್‌.ನಿರಾಣಿ ಹೇಳಿದರು. 

ಪಟ್ಟಣದ ಪ್ರತಿಷ್ಠಿತ  ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆವರಣದಲ್ಲಿ ಗುರುವಾರ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಇದರ ರಜತ ಮಹೋತ್ಸವ-2025ರ ಅಂಗವಾಗಿ ಹಮ್ಮಿಕೊಂಡ ಪುರುಷರ ಹಾಗೂ ಮಹಿಳೆಯರ ರಾಷ್ಟ್ರ ಮಟ್ಟದ ಕಬಡ್ಡಿ ವೈಭವ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. 

25 ವರ್ಷಗಳ ಹಿಂದೆ ಬೀಳಗಿ ಪಟ್ಟಣದಲ್ಲಿ ಪ್ರಥಮವಾಗಿ ಸಹಕಾರಿ ಕ್ಷೇತ್ರದ ಬ್ಯಾಂಕನ್ನು ತರೆದು ಇಂದು ಸಾವಿರಾರು ಕೃಷಿಕರಿಗೆ ಆರ್ಥಿಕವಾಗಿ ಸಹಾಯ, ಸಹಕಾರ ನೀಡುತ್ತಿರುವ ಧೀಮಂತ ನಾಯಕರು. ತಮ್ಮ ಜನ್ಮ ನೀಡಿದ ಗ್ರಾಮೀಣ ಪ್ರದೇಶವಾದ ಬಾಡಗಂಡಿ ಪುಣ್ಯ ನೆಲದಲ್ಲಿ ಅವರು ದಿಟ್ಟ ನಿರ್ಧಾರ ಮಾಡಿ ಈ ಭಾಗದ ಸಂತ್ರಸ್ಥ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಗುಣಮಟ್ಟದ ಸುಸಜ್ಜಿತವಾದ ಶಿಕ್ಷಣ ಸಂಸ್ಥೆ ತೆಗೆದಿದ್ದಾರೆ. ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆ ನೀಡುತ್ತಾ ಶಿಕ್ಷಣ, ನಿರುದ್ಯೋಗಿಗಳಿಗೆ ಹಾಗೂ ಕೃಷಿಕ ಜನರ ಕಲ್ಯಾಣಕ್ಕಾಗಿ ಮತ್ತು ಯುವ ಜನತೆಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಹಾಗೂ ಸಕ್ಕರೆ ಕಾರ್ಖಾನೆ, ಮೆಡಿಕಲ್ ಕಾಲೇಜು ಪ್ರಾರಂಭ ಮಾಡುವ ಮೂಲಕ ಬಾಡಗಂಡಿ ಮತ್ತು ಬೀಳಗಿ ಹೆಸರು ಇತಿಹಾಸದ ಪುಟದಲ್ಲಿ ಬರುವಂತೆ ಮಾಡಿದ ಮಹಾನ್ ಸಾಧಕರು ಎಸ್‌.ಆರ್‌.ಪಾಟೀಲರು. ಬ್ಯಾಂಕಿನ ರಜತ ಮಹೋತ್ಸವ ನಿಮಿತ್ಯವಾಗಿ ಬೀಳಗಿ ಪಟ್ಟಣದಲ್ಲಿ ಒಂದು ತಿಂಗಳು ಹಬ್ಬದ ವಾತಾವರಣವಾಗಿ ನಿರ್ಮಾಣವಾಗಿದೆ. ಬೀಳಗಿ ಹಾಗೂ ಬಾಪೂಜಿ ಬ್ಯಾಂಕ್‌ವು ಇಂದು ಸಾವಿರಾರೂ ಕೋಟಿ ವಹಿವಾಟು ಮಾಡುತ್ತಾ ರಾಜ್ಯದ ತುಂಬೆಲ್ಲ ತನ್ನದೇ ಶಾಖೆಗಳನ್ನು ಹೊಂದಿದೆ. ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವುದು ಅಷ್ಟೆ ಮುಖ್ಯವಾಗಿದೆ ಎಂದರು. 

ಮಾಜಿ ಸಚಿವರು ಹಾಗೂ ಬೀಳಗಿ ಪಟ್ಟಣ ಬ್ಯಾಂಕಿನ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಆರ್‌.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎನ್‌.ಪಾಟೀಲ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಸ್‌.ಟಿ.ಪಾಟೀಲ, ಮಾಜಿ ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಜಿಲ್ಲಾ ನೋಂದಣಾಧಿಕಾರಿ  ಎಸ್‌.ಜಿ.ನ್ಯಾಮಗೌಡ, ಸಿಪಿಐ ಎಚ್‌.ಬಿ.ಸಣ್ಣಮನಿ, ಎಸ್‌.ಎಸ್‌.ರಂಗನಗೌಡರ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್‌.ಬಿ.ಕುರ್ತಕೋಟಿ, ನಿರ್ದೇಶಕ ಎಂ.ಎನ್‌.ಕೆಂಪಲಿಂಗನ್ನವರ, ಕೆ.ಎಸ್‌.ಪತ್ರಿ, ರಾಜೇಂದ್ರ ಬಾರಕೇರ, ಎಚ್ ಎ.ಕೊಪ್ಪಳ, ಎ.ಎಚ್‌.ಬೀಳಗಿ, ಉಪಪ್ರಧಾನ ವ್ಯವಸ್ಥಾಪಕ ಜಿ.ಎಸ್‌.ಬನಹಟ್ಟಿ, ದೊಡ್ಡಣ್ಣಗೌಡ ದೇಸಾಯಿ, ವೆಂಕನಗೌಡ ಪಾಟೀಲ, ಉಸಮಾನ್ ಪಟೇಲ್, ಸಿದ್ದು ಸಾರಾವರಿ, ಬಸು ಹಳ್ಳದಮನಿ, ಯಮನಪ್ಪ ರೊಳ್ಳಿ,. ರಸೂಲ ಮುಜಾವರ ಹಾಗೂ ಇತರರು ಇದ್ದರು.