ಶಂಕುಸ್ಥಾಪನೆ ಅಷ್ಟೇ ಅಲ್ಲ, ಪ್ರಗತಿ ಪರೀಶೀಲನೆಗೂ ಸ್ವತಃ ಫೀಲ್ಡಿಗಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್!

Minister Lakshmi Hebbalkar not only laid the foundation stone but also went to the field to review t

ಬೆಳಗಾವಿ 29: ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಕೈ ತೊಳೆದುಕೊಳ್ಳುವ ಜನಪ್ರತಿನಿಧಿಗಳೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾಮಗಾರಿಗಳ ಪ್ರಗತಿ ಮತ್ತು ಗುಣಮಟ್ಟ ಪರೀಶೀಲನೆಗೆ ಸ್ವತಃ ಫೀಲ್ಡ್‌ ಗೆ ಇಳಿದಿದ್ದಾರೆ.  

ಮೊನ್ನೆ ವಾಘವಾಡೆಯಲ್ಲಿ  ರಸ್ತೆ ಕಾಮಗಾರಿ ಪರೀಶೀಲಿಸಿದ್ದ ಸಚಿವರು ಇಂದು ಹಿಂಡಲಗಾ ವಿಜಯ ನಗರದ ಪೈಪ್ ಲೈನ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಗಣಪತಿ ಮಂದಿರದ ಕಟ್ಟಡ ಕಾಮಗಾರಿಗಳ ಪ್ರಗತಿ ಪರೀಶೀಲನೆ ನಡೆಸಿದರು. ಗ್ರಾಮಸ್ಥರ ಅಭಿಪ್ರಾಯಗಳನ್ನು ಪಡೆದ ಸಚಿವರು, ಅವರ ಸಲಹೆಯಂತೆ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಿದರು. ಜೊತೆಗೆ ಗುಣಮಟ್ಟದಲ್ಲಿ ಯವುದೇ ರಾಜಿ ಇಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿದರು. 

ಈ ವೇಳೆ ಸ್ಥಳೀಯ ನಿವಾಸಿಗಳು, ಮಂದಿರ ಸಮಿತಿಯ ಸದಸ್ಯರು, ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.