ಮೋದಿ, ಅಮಿತ್ ಶಾ ಮಹಾಭಾರತದ ಕೃಷ್ಣ, ಅರ್ಜುನರಂತೆ: ರಜನಿಕಾಂತ್

ಚೆನ್ನೈ, ಆಗಸ್ಟ್ 11      370ನೇ ವಿಧೇಯಕ  ರದ್ದು ಮತ್ತು ಕಾಶ್ಮೀರ ಪುನರ್ ವಿಂಗಡಣೆಯ ಕೇಂದ್ರದ ನಿರ್ಧಾರವನ್ನು ಭಾನುವಾರ ಸ್ವಾಗತಿಸಿರುವ ನಟ ರಜನಿಕಾಂತ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾಭಾರತದ ಕೃಷ್ಣ, ಅರ್ಜುನರಂತೆ ಎಂದು ಹಾಡಿಹೊಗಳಿದ್ದಾರೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಎರಡು ವರ್ಷಗಳ ಕಚೇರಿ ಅನುಭವದ ಪುಸ್ತಕವನ್ನು ಅಮಿತ್ ಶಾ ಬಿಡುಗಡೆ ಮಾಡಿದ ಸಮಾರಂಭದಲ್ಲಿ ರಜನಿ ಮಾತನಾಡಿ,  ಮಿಷನ್ ಕಾಶ್ಮೀರ ಕಾಯರ್ಾಚರಣೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು.  ಕಾಶ್ಮೀರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಶಾ ಮಾಡಿದ ಭಾಷಣ ಅದ್ಭುತವಾಗಿತ್ತು. ಸಂಸತ್ತಿನಲ್ಲಿ, ವಿಶೇಷವಾಗಿ ಕಾಶ್ಮೀರದ ಕುರಿತು ನಿಮ್ಮ ಭಾಷಣ ಅದ್ಭುತ ಸರ್ ಅದ್ಭುತ. ಅಭಿನಂದನೆಗಳು ನಿಮಗೆ ಎಂದು ರಜನಿಕಾಂತ್ ಹೇಳಿದರು.  ಅಮಿತ್ ಶಾ ಮತ್ತು ಮೋದಿ ಮಹಾಭಾರತದ ಕೃಷ್ಣಾರ್ಜುನರಂತೆ. ಇಬ್ಬರಲ್ಲಿ ಕೃಷ್ಣ ಅಥವಾ ಅರ್ಜುನ ಯಾರು ಎಂದು ನಮಗೆ ತಿಳಿದಿಲ್ಲ. ಅವರಿಗೆ ಮಾತ್ರ ಗೊತ್ತು ಎಂದು ರಜನಿಕಾಂತ್ ಶ್ಲಾಘಿಸಿದರು.