ಇಂದು ಮೋದಿ-ಕ್ಸಿ ಜಿನ್ಪಿಂಗ್ ಮಹತ್ವದ ಮಾತುಕತೆ

 ಮಾಮಲ್ಲಪುರಂ, ತಮಿಳುನಾಡು, ಅಕ್ಟೋಬರ್ 12:  ಇಲ್ಲಿನ ಐತಿಹಾಸಿಕ ಬಂದರು ನಗರ ಮಾಮಲ್ಲಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್  ಅವರೊಂದಿಗೆ ಶನಿವಾರ ಮಾತುಕತೆ ನಡೆಸಲಿದ್ದು, ಇದು ಉಭಯ ದೇಶಗಳ ನಡುವೆ ಸಂಬಂಧ ಸುಧಾರಣೆಯಲ್ಲಿ ಹೆಚ್ಚಿನ ಭರವಸೆ ಮೂಡಿಸಿದೆ.ಇದೇ ವೇಳೆ ಉಭಯ ದೇಶಗಳ ನಡುವೆ ನಿಯೋಗ ಮಟ್ಟದ ಮಾತುಕತೆಯೂ ನಡೆಯಲಿದೆ. ಶುಕ್ರವಾರದ ಅನೌಪಚಾರಿಕ ಮಾತುಕತೆಯಲ್ಲಿ ಉಭಯ ನಾಯಕರು ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಪ್ರಬುದ್ಧ ಮಾದರಿಯಲ್ಲಿ ನಡೆದುಕೊಂಡಿದ್ದರು. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಲು ಅನುಮತಿಸಬಾರದು ಎಂದು 2018 ರಲ್ಲಿ ವುಹಾನ್ನಲ್ಲಿ ಉಭಯ ನಾಯಕರು ಒಪ್ಪಿಕೊಂಡಿದ್ದರು. ಇದಾದ ಒಂದೂವರೆ ವರ್ಷದ ಬಳಿಕ ಏಷ್ಯಾದ ಇಬ್ಬರು ಉನ್ನತ ನಾಯಕರ ನಡುವಿನ ಅನೌಪಚಾರಿಕ ಶೃಂಗಸಭೆಯ ಮೊದಲ ದಿನದಂದು ಉಭಯ ದೇಶಗಳ ನಡುವೆ ಒಮ್ಮತ ಕಂಡುಬಂದಿದೆ. "ಭೋಜನದ ಕುರಿತಾದ ಚರ್ಚೆಯು 150 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಇದು ಸಂಭಾಷಣೆಗೆ ನಿಗದಿತ ಸಮಯಕ್ಕಿಂತಲೂ ಹೆಚ್ಚಾಗಿತ್ತು. ಚರ್ಚೆಗಳು ಬಹಳ ಸೌಹಾರ್ದಯುತವಾಗಿತ್ತು. ಇದು ಉಭಯ ನಾಯಕರು ಕಳೆದಿರುವ ಉತ್ತಮ ಸಮಯ" ಎಂದು ವಿದೇಶಾಂಗ ಕಾರ್ಯದಶರ್ಿ ವಿಜಯ್ ಗೋಖಲೆ ನಂತರ ಸುದ್ದಿಗಾರರಿಗೆ ತಿಳಿಸಿದರು " ಪ್ರಧಾನ ಮೋದಿ ಹೊಸ ಜನಾದೇಶವನ್ನು ಪಡೆದಿದ್ದಾರೆ ಎಂದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದರು.  ಮುಂದಿನ ನಾಲ್ಕು ಮತ್ತು ನಾಲ್ಕೂವರೆ ವರ್ಷಗಳಲ್ಲಿ ಎಲ್ಲಾ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಅವರು ಹೇಳಿದರು" ಎಂದು ಗೋಖಲೆ ತಿಳಿಸಿದರು.