ಲೋಕದರ್ಶನ ವರದಿ
ಕಾರವಾರ: ನಗರದಲ್ಲಿ ಇವತ್ತು ಗಾಂಧಿಜೀ ರೂಪಧಾರಿ ಮತ್ತು ಮೋದಿ ಕಾಣಿಸಿಕೊಂಡರಲ್ಲದೇ ಬಿಜೆಪಿ ಅಭ್ಯಥರ್ಿಗಳ ಪರ ಮನೆ ಮನೆಗೆ ತೆರಳಿ ಮತಯಾಚಿಸಿದ ಘಟನೆ ನಡೆದಿದೆ. ಕಾರವಾರ ನಗರಸಭೆಯಲ್ಲಿ ಅಧಿಕಾರ ಹಿಡಿಯುವ ಕನಸುಕಾಣುತ್ತಿರುವ ಬಿಜೆಪಿ ಹತ್ತು ಹಲವು ತಂತ್ರಗಳನ್ನು ಬಳಸಿದೆ. ಮುಸ್ಲಿಂ ಮಹಿಳೆಗೆ ವಾರ್ಡವೊಂದರಲ್ಲಿ ಟಿಕೆಟ್ ನೀಡಿದ್ದು ಅಲ್ಲದೇ ಮೋದಿಯಂತೆ ಕಾಣುವ ವ್ಯಕ್ತಿಯನ್ನು ಕಾರವಾರಕ್ಕೆ ಕರೆಯಿಸಿ ತನ್ನ ತಂತ್ರಗಾರಿಕೆ ಮೆರೆದಿದೆ.
ಗೋವಾದಿಂದ ಗಾಂಧಿಜೀಯನ್ನು ಹೋಲುವ ಕ್ರಿಶ್ಚಿಯನ್ನ ವ್ಯಕ್ತಿಯನ್ನು ಕರೆಯಿಸಿ ಬಿಜೆಪಿ ಪರ ಪ್ರಚಾರ ಮಾಡಿಸಿದೆ. ರಾಹುಲ್ ಗಾಂಧಿಯನ್ನು ಅವಮಾನಿಸುವ ಮಾತುಗಳನ್ನು ಅಗಸ್ಟೇನ್ ಡಿ.ಅಲ್ಮೇಡಾ ಅವರಿಂದ ಮಾಡಿಸಿದೆ. ಇದು ಎಷ್ಟರಮಟ್ಟಿಗೆ ಮತಗಳನ್ನು ಸೆಳೆಯಲು ಎಂಬುದನ್ನು ಸೆ. 3 ರಂದೇ ನೋಡಬೇಕಿದೆ.
ಉಡುಪಿಯ ಹಿರಿಯಡ್ಕದ ಸದಾನಂದ ನಾಯಕ ಮಾಧ್ಯಮಗಳ ಜೊತೆ ಮಾತನಾಡಿ ಮೋದಿಯಂತೆ ಕಾಣುವ ನನಗೆ ಜನರು ಹೆಚ್ಚು ಗೌರವ ಕೊಡುತ್ತಾರೆ. ಹಾಗಾಗಿ ನಾನು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದೇನೆ. ಒಂದು ದಿನ ನಿಜವಾದ ಮೋದಿಯನ್ನು ಭೇಟಿಯಾಗುವ ಆಸೆ ಇದೆ ಎಂದರು. ಮೋದಿ ಕೆಲಸಗಳನ್ನು ವಿವರಿಸಿ ಮತಯಾಚಿಸುತ್ತೇನೆ. ಇದು ನನ್ನ ಕೆಲಸವಾಗಿದೆ ಎಂದರು,
ಗಾಂಧೀ ವೇಷಧಾರಿ ಗೋವಾದ ಡಿ.ಅಲ್ಮೇಡಾ ಮಾತನಾಡಿ ಗಾಂಧಿಜೀ ಬದುಕಿದ್ದರೆ ಬಿಜೆಪಿ ಸೇರುತ್ತಿದ್ದರು. ಹಾಗಾಗಿ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೇನೆ. ರಾಹುಲ್ ಗಾಂಧಿ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ ಎಂದರು. ಅವರಿಗೆ ಮಾತನಾಡಲು ಬರುವುದಿಲ್ಲ ಎಂದರು. ಇಂದಿರಾ ಗಾಂಧಿ 1971ರಲ್ಲಿ ಪಾಕಿಸ್ತಾನ ಜೊತೆ ಯುದ್ಧ ಮಾಡಿ ಬಾಂಗ್ಲಾ ವಿಭಜನೆ ಯಾಗುವಂತೆ ಮಾಡಿದರು. ಇದು ಒಳ್ಳೆಯ ನಿಧರ್ಾರವಾಗಿತ್ತು. ಆಗ 3 ರೂಪಾಯಿಗೆ 1 ಡಾಲರ್ ಸಮವಾಗಿತ್ತು. ನಂತರ 11 ರೂ.ಗಳು 1 ಡಾಲರ್ಗೆ ಸಮವಾಗಿತ್ತು ಎಂದರು. ಮನೆ ಮನೆಗೆ ತೆರಳಿ ಬಿಜೆಪಿ ಪರ ಮತಯಾಚಿಸಲು ಅವಕಾಶ ಇರುವ ಕಾರಣ ಬಂದಿರುವುದಾಗಿ ಹೇಳಿದರು.