ಲೋಕದರ್ಶನವರದಿ
ರಾಣೇಬೆನ್ನೂರು: ತಾಲೂಕಿನಲ್ಲಿ ಅನೇಕ ರೀತಿಯಲ್ಲಿ ರೈತಪರ ಸಮಸ್ಯೆಗಳು ಇದ್ದರೂ ತಾಲೂಕಾ ಮತ್ತು ಜಿಲ್ಲಾಡಳಿತವು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಂಡು ಅವುಗಳ ಪರಿಹಾರಕ್ಕೆ ಮುಂದಾಗದೇ ರೈತ ವಿರೋಧಿ ಧೋರಣೆ ಅನುಸರಿಸುತ್ತಲಿದೆ ಎಂದು ಉತ್ತರ ಕನರ್ಾಟಕ ಪ್ರದೇಶ ರೈತ ಹಾಗೂ ರೈತ ಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಲಮಾಣಿ ಆಗ್ರಹಿಸಿದರು.
ಅವರು ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ, ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಸ್ಯೆಗಳ ಕುರಿತಂತೆ ತಮ್ಮ ಸಂಘಟನೆಯು ಅನೇಕ ಬಾರಿ ತಾಲೂಕಾಡಳಿತದ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದರ ಮೂಲಕ ಗಮನಕ್ಕೆ ತರಲಾಗಿದ್ದರೂ ಅವುಗಳಲ್ಲಿ ಕೆಲವಾದರೂ ಪರಿಹಾರ ಕಾಣದೇ ಇರುವುದು ರೈತರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಕೃಷ್ಣಮೂತರ್ಿ ವಿಷಾಧಿಸಿದರು.
ತುಂಗಾಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡು ತಮ್ಮ ತ್ಯಾಗವನ್ನು ಮೆರೆದ ಬಹುತೇಕ ರೈತರಿಗೆ ಇದುವರೆಗೂ ಪರಿಪೂರ್ಣ ಪರಿಹಾರ ಕಂಡಿಲ್ಲ. ಆ ರೈತರು ಕಛೇರಿಗೆ ಅಲೆದಲೆದು ಸುಸ್ತಾಗಿ ಆಡಳಿತದ ಬಗ್ಗೆ ರೋಸಿಹೋಗಿದ್ದಾರೆ. ಅದರಲ್ಲಿ ಹಣ ಬಾರದೇ ಕೊನೆಯವರೆಗೂ ಮಾನಸಿಕವಾಗಿ ನೊಂದು ಸಾವು ಕಂಡವರೂ ಸಹ ಇದ್ದಾರೆ. ಕೂಡಲೇ ಜಿಲ್ಲಾಡಳಿತ ರೈತ ವಿಳಂಬ ಧೋರಣೆ ಅನುಸರಿಸಿದೇ, ಅವರಿಗೆ ಬರಬೇಕಾದ ಬಾಕಿ ಹಣವನ್ನು ವಿತರಿಸಲು ಆದೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಆಡಳಿತ ಹೊಂದಿರುವ ಕಛೇರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಯೋವೃದ್ಧರ, ಅಂಗವಿಕಲರ ವೇತನ ಸೇರಿದಂತೆ ಸರ್ಕಾರಿ ದ ಮತ್ತಿತರೆ ಯೋಜನೆಗಳಿಗಾಗಿ ಅಜರ್ಿ ಸಲ್ಲಿಸಿ ಜಾತಕ ಪಕ್ಷಿಯಂತೆ ಕಾಯುವಂತಾಗಿದೆ. ಕೆಲವರು ಅದರ ಪ್ರಯೋಜನ ಪಡೆಯುತ್ತಿದ್ದರೇ, ಶೇ.40ರಷ್ಟು ಫಲಾನುಭವಿಗಳು ಅಜರ್ಿಗಳ ವಿಲೇ ಕಾರಣದಿಂದಾಗಿ ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಇದು ವಿಪಯರ್ಾಸದ ಸಂಗತಿ. ತಹಶೀಲ್ದಾರರು, ಈ ಕುರಿತು ಗಮನ ಹರಿಸಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ. ಪ್ರತಿಭಟನೆಯ ಮುಂಚೂಣಿಯಲ್ಲಿ ವೆಂಕಟೇಶಪ್ಪ ಹೊಸಮನಿ, ಚಂದ್ರಪ್ಪ ಬೇಡರ, ರವೀಂದ್ರಗೌಡ ಪಾಟೀಲ, ಸುಶೀಲಮ್ಮ ಮಕರಿ, ಸದಾನಂದ ಮರಿಯಮ್ಮನವರ, ಡಾ|| ನಾಗರಾಜ ಚಳಗೇರಿ, ಡಿ.ಕೆ.ಕಟಗಿ, ವಿನೋದಕುಮಾರ ಲಮಾಣಿ, ಬಸವರಾಜ ಚೌಡಣ್ಣನವರ , ಸೈಯದ್ಸಫೀಕ್, ಸುರೇಶ ಗಸ್ತೇರ ಸೇರಿದಂತೆ ಸಂಘಟನೆಯ ಮತ್ತಿತರೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.