ಮಹಾನಗರ ಪಾಲಿಕೆ ಉಪ ಚುನಾವಣೆ : ವಾರ್ಡ ನಂ.29ಕ್ಕೆ ಬಿಜೆಪಿಯ ಗೀರಿಶ ಪಾಟೀಲ ಆಯ್ಕೆ

ಗೀರಿಶ ಪಾಟೀಲ ಆಯ್ಕೆ

ವಿಜಯಪುರ ನ.26: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ ನಂ.29ಕ್ಕೆ ನಡೆದ ಉಪ ಚುನಾವಣೆಯಲ್ಲಿ  ಭಾರತೀಯ ಜನತಾ ಪಾರ್ಟಿ ಪಕ್ಷದ ಗೀರಿಶ ವಿಜಯಕುಮಾರ ಪಾಟೀಲ ಅವರು 2754 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ ಎಂದು ಉಪ ಚುನಾವಣೆ ಚುನಾವಣಾಧಿಕಾರಿಗಳಾದ ವಿನಯಕುಮಾರ ಪಾಟೀಲ ಅವರು ತಿಳಿಸಿದ್ದಾರೆ.  

ವಾರ್ಡ ನಂ.29ಕ್ಕೆ ನಡೆದ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಭಾಗಪ್ಪ ಏಳಗಂಟಿ 1762 ಮತಗಳನ್ನು ಪಡೆದಿದ್ದು, 38 ನೋಟಾ ಮತಗಳು ಚಲಾವಣೆಯಾಗಿವೆ.