ಅಣಬೆ ಅದರ ಉತ್ಪನ್ನಗಳ ಮಾರುಕಟ್ಟೆ ಅನಾವರಣ

Mushroom and its products market launch

ಬೆಳಗಾವಿ 23: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಅಃಖಖಇಖಿಋ) ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ, ಉದ್ಯೋಗಿನಿ ಯೋಜನೆಯ ಫಲಾನುಭವಿ ಅಶ್ವಿನಿ ಮಹಾಂತೇಶ್ ಹಲಗಿಮರ್ಡಿ, ನಮ್ಮ ಕೆನರಾ ಬ್ಯಾಂಕ್ ಆರ್‌ಸಿಟಿ ಬೆಳಗಾವಿಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ಪಡೆದು ಸದ್ಯ ತಮ್ಮದೇ ಆದ ಸುಮಾರು 31 ಆಹಾರ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಅದರಲ್ಲಿ ಸುಮಾರು 13 ಅಣಬೆಯ ಉಪ ಉತ್ಪನ್ನಗಳನ್ನು ಉತ್ಪಾದಿಸಿ ದಿ. 22ರಂದು ಮಧ್ಯಾಹ್ನ 1ಗಂಟೆಗೆ ಅಣಬೆ ಮತ್ತು ಅದರ ಉಪ ಉತ್ಪನ್ನಗಳ ಮಾರುಕಟ್ಟೆಗೆ ಅನಾವರಣ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಆರ್‌ಸಿಟಿ ಬೆಳಗಾವಿಯಲ್ಲಿ ಹಮ್ಮಿಕೊಂಡಿತ್ತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್, ಬೆಳಗಾವಿ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಪ್ರವೀಣ್ ಕೆ ಎಸ್ ಉದ್ಘಾಟಿಸಿದರು. 

ಅತಿಥಿಯಾಗಿ ಮರಾಠ ಮಂಡಳ ಡೆಂಟಲ್ ಸೈನ್ಸ್‌ ಮತ್ತು ರಿಸರ್ಚ್‌ ಸೆಂಟರ್ ಪ್ರೊಫೆಸರ್ ಡಾ. ಸುಜಾತಾ ಬ್ಯಾಹಟ್ಟಿ, ಉತ್ಪನ್ನಗಳ ಗುಣಮಟ್ಟ ಹಾಗೂ ಉಪಯೋಗಗಳ ಬಗ್ಗೆ ತಿಳಿಸಿದರು. 

ಬೆಳಗಾವಿ ತಾಲೂಕ್ ಪಂಚಾಯತ್ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮಾಸ್ತಮರ್ಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಅಃಖಖಇಖಿಋ) ಬೆಳಗಾವಿ ವತಿಯಿಂದ ಅಶ್ವಿನಿ ಮಹಾಂತೇಶ್ ಹಲಗಿಮರ್ಡಿ ಅವರಿಗೆ ಅಭಿನಂದನೆ ಸಲ್ಲಿಸಿ ಮತ್ತು ಮುಂದಿನ ಕಾರ್ಯಗತಿಯಲ್ಲಿ ಅವಶ್ಯವಿರುವ ಮಾರ್ಗದರ್ಶನ ಹಾಗೂ ಮಾಹಿತಿ ವಿನಿಯೋಗ ನೀಡುವುದಾಗಿ ತಿಳಿಸಿದರು.