ಧಾರವಾಡ 23: ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಸಂಗೀತ ಚಿಕಿತ್ಸೆ ವಿಭಾಗ ಡಿಮ್ಹಾನ್ಸ್ ಹಾಗೂ ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಹಯೋಗದಲ್ಲಿ ವಿಶ್ವ ಸಂಗೀತಚಿಕಿತ್ಸೆ ದಿನಾಚರಣೆ ನಿಮಿತ್ತ “ಸಂಗೀತಕಾರ್ಯಕ್ರಮ” ವನ್ನು ದಿನಾಂಕ:21ರಂದು ಡಿಮ್ಹಾನ್ಸ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ ರವರು ಹಾಗೂ ವೇದಿಕೆಯ ಮೇಲೆ ಇರುವಎಲ್ಲಾ ಮುಖ್ಯ ಅತಿಥಿಗಳೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.“ಸಂಗೀತವು ಮನಸ್ಸಿಗೆ ಇರುವ ಒಳ್ಳೆಯ ಓಷಧಿ” ಯೆಂದರು. ಇತ್ತೀಚಿನ ದಿನಗಳಲ್ಲಿ ಅನೇಕ ವ್ಯಕ್ತಿಗಳಿಗೆ ಕಾಡುವಆತಂಕ, ಖಿನ್ನತೆ, ಏಕಾಂಗೀತನ ಇವುಗಳಿಗೆ ಸಂಗೀತದಲ್ಲಿಇರುವರಾಗ, ತಾಳ ಮತ್ತು ಭಾವ ಇವುಗಳು ಪರಿಣಾಮಕಾರಿಯಾಗಿದ್ದು, ಇಂತಹ ಕಾಯಿಲೆಗಳ ಲಕ್ಷಣಗಳನ್ನು ಕಡಿಮೆ ಮಾಡುವ ಶಕ್ತಿ ಸಂಗೀತದಲ್ಲಿ ಇದೆಯೆಂದರು. ಡಿಮ್ಹಾನ್ಸ್ ಸಂಸ್ಥೆಯಲ್ಲಿ ಸಂಗೀತಚಿಕಿತ್ಸೆ ವಿಭಾಗದಅಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸಂಗೀತಚಿಕಿತ್ಸೆ ವಿಭಾಗದ ಕಾರ್ಯಚಟುವಟಿಕೆಗಳಿಗೆ ಅಭಿನಂದಿಸಿದರು.ಡಿಮ್ಹಾನ್ಸ್ ಸಂಸ್ಥೆಯಓ.ಪಿ.ಡಿ ವಿಭಾಗದಲ್ಲಿ 10 ನಿಮಿಷಗಳ ಇಂಪಾದ ಸಂಗೀತವನ್ನು ರೋಗಿಗಳಿಗೆ, ಸಿಬ್ಬಂದಿಗಳಿಗೆ ಆಲಿಸಲು ಸೂಕ್ತ ವ್ಯವಸ್ಥೆಯನ್ನು ಮಾಡುವಚಿಂತನೆ ನಡೆದಿದೆಯೆಂದರು.
ಡಿಮ್ಹಾನ್ಸ್ ಸಂಸ್ಥೆಯ ಸೈಕಿಯಾಟ್ರಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮಂಜುನಾಥ ಭಜಂತ್ರಿರವರುಕಾರ್ಯಕ್ರಮದಕುರಿತು ಪ್ರಾಸ್ತಾವಿಕ ಮಾತನಾಡಿದರು.ಡಿಮ್ಹಾನ್ಸ್ ಸಂಸ್ಥೆಯಲ್ಲಿ ಸಂಗೀತಚಿಕಿತ್ಸೆ ವಿಭಾಗದಅಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.ಇದರಿಂದ ಅನೇಕ ರೋಗಿಗಳಿಗೆ ಮತ್ತುಅವರಆರೈಕೆದಾರರಿಗೆ ಒಳ್ಳೆಯ ಪ್ರಯೋಜನಗಳು ಕೂಡ ಆಗಿವೆ. ಭಾರತದಇತಿಹಾಸದಲ್ಲಿ ಸಂಗೀತದ ಪರಂಪರೆಯನ್ನು ತಿಳಿದುಕೊಂಡಾಗ ಸಂಗೀತದಲ್ಲಿಅಗಾಧವಾದ ಶಕ್ತಿಯಿದ್ದು, “ಸಾಮವೇದ”ದಲ್ಲಿಕೂಡ ಸಂಗೀತದ ಬಗ್ಗೆ ಉಲ್ಲೇಖವಿರುವುದನ್ನು ವಿವರವಾಗಿ ತಿಳಿಸಿದರು. ಪ್ರತಿಕುಟಂಬವು ಕೂಡ ಸುಮಧುರವಾದ ಸಂಗೀತವನ್ನು ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಡಾ.ಶ್ರೀಧರಕುಲಕರ್ಣಿಇವರು ಮಾತನಾಡಿ ಸಂಗೀತದಲ್ಲಿಇರುವ ವಿವಿಧ ರಾಗಗಳ ಬಗ್ಗೆ ಮತ್ತು ಮಾನಸಿಕ ಕಾಯಿಲೆಗಳಿಗೆ ಸಂಗೀತದಿಂದ ಆಗುವ ಪ್ರಯೋಜನಗಳ ಬಗ್ಗೆ ಸಂಕ್ಷೀಪ್ತವಾಗಿ ತಿಳಿಸಿದರು.
ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಮುಖ್ಯ ಆಡಳಿತ ಅಧಿಕಾರಿಗಳು, ಡಿಮ್ಹಾನ್ಸ್‌ಧಾರವಾಡಇವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮಾತನಾಡುವುದಕ್ಕಿಂತ ಒಳ್ಳೆಯ ಸಂಗೀತವನ್ನು ಕೇಳುವುದೇ ಒಂದುಆನಂದ, ಇಂತಹ ಕಾರ್ಯಕ್ರಮಗಳು ಸಿಬ್ಬಂದಿಗಳ, ವಿದ್ಯಾರ್ಥಿಗಳ ಹಾಗೂ ರೋಗಿಗಳ ಮನಸ್ಸನ್ನು ಸಂತೋಷಗೋಳಿಸುತ್ತವೆ, ದೈನಂದಿನ ಕಾರ್ಯಚಟುವಟಿಕೆಗಳನ್ನು ಉತ್ಸುಕತೆಯಿಂದ ಕೆಲಸ ಮಾಡಲು ನೆರವಾಗುತ್ತವೆಂದರು.
ಪ್ರವೀಣಕುಮಾರಎಸ್, ಉಪ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯಸ್ಥರು, ಶಿಕ್ಷಣ ವಿಭಾಗ, ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಮೈಸೂರುಇವರುಮಾತನಾಡಿ ಸಂಗೀತದಲ್ಲಿಇರುವ ಸಪ್ತ ಸ್ವರಗಳಲ್ಲಿ ವಿಶೇಷವಾದ ಶಕ್ತಿಯಿದೆ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದ ಹವ್ಯಾಸಗಳನ್ನು ರೂಢಿಮಾಡಿಕೊಳ್ಳಲು ಅವರಪಾಲಕರುಉತ್ತಮ ಮಾರ್ಗದರ್ಶನ ಮಾಡಬೇಕೆಂದರು. ಮನಸ್ಸಿಗೆ ಬರುವ ನಕರಾತ್ಮಕ ಯೋಚನೆಗಳನ್ನು ಇಂಪಾದ ಸಂಗೀತ ಕೇಳುವುದರಿಂದ ಉಪಶಮನ ಮಾಡಿಕೊಳ್ಳಬಹುದೆಂದರು.
ಡಾ.ಶ್ರೀಹರಿ ದಿಗ್ಗಾವಿ, ಅತಿಥಿಉಪನ್ಯಾಸಕರು, ಸಂಗೀತ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡಇವರು ಮಾತನಾಡಿ, ಸಂಗೀತವನ್ನು ಪ್ರಕೃತಿಯಿಂದ ಪಡೆದಿದ್ದೇವೆ, ಪ್ರಕೃತಿಯಲ್ಲಿ ಸಂಗೀತವಿದೆಯೆಂದರು.ಸಂಗೀತವನ್ನು ಕೇಳಲು ನಮ್ಮ ಮನಸ್ಸಿನಲ್ಲಿ ಅಂತರ್ಮುಖವಾದಕಣ್ಣುಇರಬೇಕು.ಸಂಗೀತವನ್ನು ಕೇಳಲು ನಮ್ಮನ್ನು ಸರಿಯಾದರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಬೇಕು, ಇದನ್ನುಕಲಿಯಲು ತಾಳ್ಮೆ ಬೇಕೆಂದು ಸಲಹೆ ನೀಡಿದರು.
ಡಾ.ಬದ್ರಿ ನಾರಾಯಣ ಶೆಟ್ಟಿ, ಚಿಕ್ಕಳ ಮಕ್ಕಳ ತಜ್ಞರು, ಮನಸಾಲಿ ಮಕ್ಕಳ ಆಸ್ಪತ್ರೆ, ಹುಬ್ಬಳ್ಳಿ ಇವರುಮಾತನಾಡಿ ನನ್ನ ವೃತ್ತಿಜೀವನದಲ್ಲಿ ಸಂಗೀತವನ್ನು ಒಳ್ಳೆಯ ಹವ್ಯಾಸವಾಗಿ ಮಾಡಿಕೊಂಡಿದ್ದು, ಇದರಿಂದ ವೃತ್ತಿಜೀವನವುಕೂಡ ಪ್ರಗತಿ ಹೊಂದಿದೆಯೆಂದರು. ನಮ್ಮ ಸುತ್ತಮುತ್ತಲಿನ ಪರಿಸರವು ಸುಂದರವಾಗಿರಬೇಕಾದರೆ ಒಳ್ಳೆಯ ಸಂಗೀತ ಕೇಳುವ ಮನಸ್ಸುಇರಬೇಕು ಮತ್ತುಅದನ್ನು ನಿರ್ಮಾಣ ಮಾಡಬೇಕೆಂದರು.ಸಂಗೀತದ ಬಗ್ಗೆ ತಾತ್ಸಾರ ಮನೋಭಾವನೆ ಇಟ್ಟುಕೊಳ್ಳಬಾರದೆಂದರು.
ಕಾರ್ಯಕ್ರಮದಲ್ಲಿಡಿಮ್ಹಾನ್ಸ್ ಸಂಸ್ಥೆಯ ಶೂಶ್ರುಷಾಧೀಕ್ಷಕರಾದ ಲವ್ಲಿ ಮ್ಯಾಥೂಸ್‌ರವರು ವೇದಿಕೆಯ ಮೇಲೆ ಉಪಸ್ಥಿತಿರಿದ್ದರು. ಕಾರ್ಯಕ್ರಮವನ್ನುಡಿಮ್ಹಾನ್ಸ್ ಸಂಸ್ಥೆಯ ಸೈಕಿಯಾಟ್ರಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಡಾ.ಮೇಘಮಾಲಾತಾವರಗಿಇವರು ನಿರೂಪಿಸಿದರು. ಡಾ.ಶ್ರೀನಿವಾಸ ಕೊಸಗಿ ಸ್ವಾಗತಿಸಿದರು. ಅಶೋಕ ಎಸ್.ಕೋರಿಇವರು ವಂದಿಸಿದರು.
ವೇದಿಕೆಯಕಾರ್ಯಕ್ರಮ ಮುಕ್ತಾಯಗೊಂಡ ನಂತರ ಡಾ.ಶ್ರೀಹರಿ ದಿಗ್ಗಾವಿ ಮತ್ತು ಶೃತಿ ದಿಗ್ಗಾವಿ ಇವರ ಶಿಷ್ಯ ವೃದಂದವರಿಂದಸೀತಾರ್ ಹಾಗೂ ತಬಲಾ ಸಂಗೀತಕಾರ್ಯಕ್ರಮನಡೆಸಿಕೊಟ್ಟರು. ಡಾ.ಬದ್ರಿ ನಾರಾಯಣ ಶೆಟ್ಟಿ, ಡಾ.ಮಂಜುನಾಥ ಭಜಂತ್ರಿ, ಡಾ.ಶ್ರೀಧರ ಕುಲಕರ್ಣಿ, ಡಿಮ್ಹಾನ್ಸ- ಸಂಸ್ಥೆಯ ಆಸಕ್ತ ಸಿಬ್ಬಂದಿಗಳು ಹಾಗೂ ಅವರ ಮಕ್ಕಳು ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತಕಾರ್ಯಕ್ರಮ ನಡೆಸಿಕೊಟ್ಟ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಸವಿ ನೆನಪಿನ ಕಾಣಿಕೆಗಳನ್ನು ನೀಡಿಗೌರವಿಸಲಾಯಿತು. ಸಂಗೀತಕ್ಷೇತ್ರದಲ್ಲಿ ಒಳ್ಳೆಯ ಸೇವೆಯನ್ನು ಮಾಡುತ್ತಿರುವ ಡಾ.ಶ್ರೀಹರಿ ದಿಗ್ಗಾವಿ ಮತ್ತು ಶೃತಿ ದಿಗ್ಗಾವಿ ಹಾಗೂ ಡಾ.ಬದ್ರಿ ನಾರಾಯಣ ಶೆಟ್ಟಿಇವರನ್ನು ಈ ಕಾರ್ಯಕ್ರಮದಲ್ಲಿಆತ್ಮೀಯವಾಗಿ ಸನ್ಮಾನಿಸಲಾಯಿತು.
ಡಾ.ಅರುಣಕುಮಾರ ಸಿ, ನಿರ್ದೇಶಕರು, ಡಿಮ್ಹಾನ್ಸ್‌ಧಾರವಾಡಇವರು ಸುಮಧರವಾದ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾ ಬಿ.ಎನ್, ಸುಷ್ಮಾ ಸಿ, ಅಶ್ವೀನಿ ಆರ್, ಡಾ.ಶಿವರುದ್ರ್ಪ, ಡಾ.ಮಹೇಶ ಮಹದೇವಯ್ಯ, ಡಾ.ತೇಜಸ್ವಿ ಟಿ, ಡಾ.ಸುಶೀಲ ಕುಮಾರರೋಣದ, ಡಾ.ಮೋಹನ ಕುಮಾರಥಂಬದ, ಜಯಂತಕೆ.ಎಸ್, ಡಿಮ್ಹಾನ್ಸ್ ಸಂಸ್ಥೆಯ ವಿವಿಧ ವಿಭಾಗದ ಸಿಬ್ಬಂದಿಗಳು ವಿದ್ಯಾರ್ಥಿಗಳು, ರೋಗಿಗಳ ಆರೈಕೆದಾರರುಪಾಲ್ಗೊಂಡಿದ್ದರು.