ಲೋಕದರ್ಶನ ವರದಿ
ಕಂಗ್ರಾಳಿ (ಕೆಎಚ್) ನಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ
ಕಾಗವಾಡ 25: ಬೆಳಗಾವಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಮತ್ತು ಕೆಎಲ್‌ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ಸೇವಾ ಯೋಜನೆಯ ಕ್ಲಸ್ಟರ ಮಟ್ಟದ 2024-25 ನೇ ವಾರ್ಷಿಕ ವಿಶೇಷ ಶಿಬಿರವನ್ನು ಮಂಗಳವಾರ ದಿ. 22 ರಂದು ಕಂಗ್ರಾಳಿ (ಕೆಎಚ್)ನಲ್ಲಿ ಹಮ್ಮಿಕೊಳ್ಳಲಾಯಿತು.
ರಾಷ್ಟೀಯ ಸೇವಾ ಯೋಜನೆ ಕ್ಲಸ್ಟರ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಕಂಗ್ರಾಳಿ (ಕೆಎಚ್) ಗ್ರಾಮದ ಮಹಾತ್ಮಾಪುಲೆ ಮಂಗಲ ಕಾರ್ಯಾಲಯದಲ್ಲಿ ಜರುಗಿತು. ಗ್ರಾ.ಪಂ. ಉಪಾಧ್ಯಕ್ಷ ಕಲ್ಲಪ್ಪಾ ಪಾಟೀಲ ಶಿಬಿರವನ್ನು ಉದ್ದೇಶಿಸಿ, ಮಾತನಾಡುತ್ತ ಶಿಬಿರಾರ್ಥಿಗಳು ಕ್ರಿಯಾಶೀಲರಾಗಿ ಶಿಬಿರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಜೊತೆಗೆ ಪಂಚಾಯತಿ ವತಿಯಿಂದ ಶಿಬಿರಕ್ಕೆ ಬೇಕಾಗುವಂತಹ ಎಲ್ಲ ರೀತಿಯ ನೆರವು ಹಾಗೂ ಸಹಕಾರ ಕೊಡುವದಾಗಿ ಭರವಸೆ ನೀಡಿದರು.
ಅಧ್ಯಕ್ಷರಾಗಿ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೇಣುಗೋಪಾಲ ಜಾಲಿಹಾಳ ಪಾಲ್ಗೊಂಡು, ಮಾತನಾಡಿ, ಕ್ಲಸ್ಟರ ಶಿಬಿರವನ್ನು ಹಮ್ಮಿಕೊಂಡಿರುವದರ ಕುರಿತು ಎರಡು ಮಹಾವಿದ್ಯಾಲಯಗಳ ಅಧಿಕಾರಿಗಳಿಗೆ ಹಾಗೂ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು. ಮತ್ತು ಶಿಬಿರದ ಎಲ್ಲ ಚಟುವಟಿಕೆಗಳಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ರವಿ ದಂಡಗಿ ಮಾತನಾಡಿದರು.
ಮಹಾತ್ಮಾ ಫುಲೆ ಮಂಡಳಿಯ ಅಧ್ಯಕ್ಷ ಎಂ.ಜಿ. ಪಾಟೀಲ, ಕಾರ್ಯದರ್ಶಿ ಬಾಳು ಬಸರಿಕಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಟಿ.ಡಿ. ಪಾಟೀಲ, ಗ್ರಾ.ಪಂ. ನ ಮಾಜಿ ಅಧ್ಯಕ್ಷರು, ಸದಸ್ಯೆಯರಾದ ಲತಾ ಪಾಟೀಲ, ಕಮಲಾ ಪಾಟೀಲ, ಮರಾಠಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಮೀನಾಕ್ಷಿ ಮುತಗೇಕರ, ಮಾರ್ಕಂಡೇಯ ಶಿಕ್ಷಣ ಸಂಘದ ಅಧ್ಯಕ್ಷ ಬಿ.ಡಿ. ಮೊಹಂಗೇಕರ, ಶಿಬಿರಾಧಿಕಾರಿ ಬಿ.ಎಸ್. ಪಾಟೀಲ, ಸಹ ಶಿಬಿರಾಧಿಕಾರಿ ಮಹೇಶ ಪೂಜಾರಿ ಸೇರಿದಂತೆ ಗಣ್ಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.