ಸಿನ್ಸಿನಾಟಿ ಮಾಸ್ಟರ್ಸ್ ವಿಥ್ ಡ್ರಾ ಮಾಡಿಕೊಂಡ ನಡಾಲ್

ವಾಷಿಂಗ್ಟನ್, ಆ 12      ಭಾನುವಾರವಷ್ಟೆ ರೋಜರ್ಸ್ ಕಪ್ ಚಾಂಪಿಯನ್ ಆಗಿರುವ ಸ್ಪೇನ್ನ ರಫೆಲ್ ನಡಾಲ್ ಅವರು ಮುಂಬರುವ ಯುಎಸ್ ಓಪನ್ಗೆ ಪೂರ್ವ ತಯಾರಿ ನಡೆಸಲು ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯನ್ನು ವಿಥ್ ಡ್ರಾ ಮಾಡಿಕೊಂಡಿದ್ದಾರೆ.    ರೋಜರ್ಸ್ ಕಪ್ ಫೈನಲ್ ಹಣಾಹಣಿಯಲ್ಲಿ ರಷ್ಯಾದ ಡೆನಿಲ್ ಮೆಡ್ವೆಡೆವ್ ಅವರನ್ನು 6-3, 6-0 ಅಂತರದಲ್ಲಿ ಮಣಿಸಿದ ಕೆಲವು ಗಂಟೆಗಳ ಬಳಿಕ ಈ ವಿಷಯವನ್ನು ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಸ್ಪಷ್ಟಪಡಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.  "ಈ ವರ್ಷ ಸಿನ್ಸಿನಾಟಿ ಮಾಸ್ಟರ್ಸ್ ಆಡದೆ ಇರುವ ಬಗ್ಗೆ ಪ್ರಕಟಿಸಲು ವಿಷಾಧಿಸುತ್ತೇನೆ. ಇದಕ್ಕೆ ಬೇರೆ ಯಾವುದೇ ವೈಯಕ್ತಿಕ ಕಾರಣವಿಲ್ಲ. ಯುಎಸ್ ಓಪನ್ಗೆ ಆರೋಗ್ಯ ಹಾಗೂ ದೇಹವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.  ವಿಶ್ವದ ಎರಡನೇ ಶ್ರೇಯಾಂಕಿತ ನಡಾಲ್ ಅವರು ಯುಎಸ್ ಓಪನ್ ಗೆ ಪೂರ್ವ ತಯಾರಿ ನಡೆಸಲಿದ್ದಾರೆ. ಸ್ಪೇನ್ ಸ್ಟಾರ್ ಅನುಪಸ್ಥಿತಿಯಲ್ಲಿ ನೊವಾಕ್ ಜೊಕೊವಿಚ್ ಹಾಗೂ ರೋಜರ್ ಫೆಡರರ್ ಅವರು ಸಿನ್ಸಿನಾಟಿಯಲ್ಲಿ ಭಾಗವಹಿಸುತ್ತಿರುವ ಅಗ್ರ ಆಟಗಾರರಾಗಿದ್ದಾರೆ.  ಫೆಡರರ್ ಪಾಲಿಗೆ ಈ ಬಾರಿ ಎಂಟನೇ ಸಿನ್ಸಿನಾಟಿ ಆಗಲಿದ್ದು, ನೊವಾಕ್ ಜೊಕೊವಿಚ್ ಪಾಲಿಗೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವತ್ತ ಗಮನಹರಿಸಲಿದ್ದಾರೆ.