ಗದಗ 17: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ , ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರ ಆರೋಗ್ಯ ಕೇಂದ್ರ ರೆಹಮತ್ ನಗರ ಗದಗ, ಗದಗ-ಬೆಟಗೇರಿ ನಗರಸಭೆ ಸಂಯುಕ್ತ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗದಗನ ಗಂಗಾಪೂರ ಪೇಟೆ, ದುರ್ಗಾದೇವಿ ದೇವಸ್ಥಾನ ಹತ್ತಿರ ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಜಿಲ್ಲಾ ಮಟ್ಟದ ಜಾಥಾ ಮತ್ತು ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಜಿಲ್ಲಾ ಮಟ್ಟದ “ರಾಷ್ಟ್ರೀಯ ಡೆಂಗೀ ದಿನ” ಜಾಥಾ ಮತ್ತು ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಗದಗ ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣ ಮಾಡಲು ಗುಣಮಟ್ಟದ ಲಾರ್ವಾ ಸಮೀಕ್ಷೆ ಹಾಗೂ ಜ್ವರ ಸಮೀಕ್ಷೆ ಮಾಡಿ ಖಚಿತ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಸೂಕ್ತ ಆರೈಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರಿಗೆ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್ ನೀಲಗುಂದ ಇವರು ಮಾತನಾಡಿ ಜಿಲ್ಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಗುಣಮಟ್ಟದ ಲಾರ್ವಾ ಸಮೀಕ್ಷೆ ಮಾಡಲು ಗ್ರಾಮೀಣ / ಶಹರ ಮಟ್ಟದಲ್ಲಿ ಹೆಚ್ಚಿನ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಡೆಂಗೀ ಪ್ರಕರಣಗಳು ಕಂಡು ಬರಲಾರದ ಹಾಗೇ ನೋಡಿಕೊಳ್ಳಲು ತಿಳಿಸಿದರು.
ಡಾ. ಹೆಚ್.ಎಲ್ ಗಿರಡ್ಡಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಗದಗ, ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಡೆಂಗೀ ನಿವಾರಣೆ ನಿಟ್ಟಿನಲ್ಲಿ ಸಮುದಾಯ ಪಾತ್ರವು ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಅಗ್ಯತ ಸಾರ್ವಜನಿಕರ ಸಹಕಾರವು ದೊರೆತಾಗ ಮಾತ್ರವೇ ಗುರಿ ಸಾಧನೆಯು ಸುಲಭ ಸಾಧ್ಯವಾಗುತ್ತದೆ. ಈ ವರ್ಷದ ಸರ್ಕಾರದ ಘೋಷ ವಾಕ್ಯವಾದ “ಅಜಛಿಞ, ಅಟಜಚಿಟಿ, ಅಠಜಡಿ: ಖಣಜಠಿ ಣಠ ಆಜಜಿಜಚಿಣ ಆಜಟಿರಣಜ” / “ಡೆಂಗೀ ಸೋಲಿಸಲು ಹೆಜ್ಜೆಗಳು: ಪರೀಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ” ಉತ್ತೇಜನ ನೀಡೋಣ ಎಂದರು.
ಡಾ. ಪ್ರೀತ್ ಖೊನಾ, (ಪ್ರಭಾರಿ) ತಾಲ್ಲೂಕಾ ಆರೋಗ್ಯ ಅಧಿಕಾರಿಗಳು, ಗದಗ ಹಾಗೂ ಶ್ರೀಮತಿ ಅನ್ನಪೂರ್ಣ ಶೆಟ್ಟರ, ಸಹಾಯಕ ಕೀಟಶಾಸ್ತ್ರಜ್ಞರು, ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ. ಸ್ಪರ್ಷಾ, ವೈದ್ಯಾಧಿಕಾರಿಗಳು ಯು.ಪಿ.ಹೆಚ್.ಸಿ ರೆಹಮತ ನಗರ, ಶ್ರೀಮತಿ ಪುಷ್ಪಾ ಪಾಟೀಲ ಡಿ.ವಾಯ್.ಹೆಚ್.ಇ.ಓ, ಶ್ರೀಮತಿ ಗೀತಾ ಡಿ.ವಾಯ್.ಹೆಚ್.ಇ.ಓ, ಇಬ್ರಾಹೀಂ ಮಕಾಂದಾರ, ಆನಂದ ಬದಿ, ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಕ್ಷೇತ್ರ ಮಟ್ಟದ ಅಧಿಕಾರಿಗಳ ವೃಂದ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ರೋಪಸೇನ ಚವ್ಹಾಣ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು ಸ್ವಾಗತಿಸಿದರು. ಅಜಯಕುಮಾರ ಕಲಾಲ ಆರೋಗ್ಯ ನೀರೀಕ್ಷಣಾಧಿಕಾರಿಗಳು ವಂದಿಸಿದರು.