ರಾಷ್ಟ್ರೀಯ ಡೆಂಗ್ಯೂ ದಿನಾಚಾರಣೆ: ಪುರಸಭೆ ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ

National Dengue Day: Training workshop for municipal civil servants

ಗದಗ 14: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ,ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಧಿಕಾರಿಗಳು ಗದಗ ತಾಲೂಕ ಆಡಳಿತ, ತಾಲೂಕ ಪಂಚಾಯತಿ, ಪುರಸಭೆ ಮುಂಡರಗಿ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಮುಂಡರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ರಾಷ್ಟ್ರೀಯ ಡೆಂಗ್ಯೂ ದಿನಾಚಾರಣೆ ಅಂಗವಾಗಿ ಪುರಸಭೆ ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ ಮೇ 14 ರಂದು ಪುರಸಭೆ ಸಭಾಭವನ ಮುಂಡರಗಿಯಲ್ಲಿ  ಮುಂಡರಗಿ ತಾಲೂಕ ಮಟ್ಟದ ರಾಷ್ಟ್ರೀಯ ಡೆಂಗ್ಯೂ ದಿನಾಚಾರಣೆ ಅಂಗವಾಗಿ ಪುರಸಭೆ ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ ವನ್ನು ಆಚರಿಸಲಾಯಿತು. 

ಕಾರ್ಯಕ್ರಮದ ಪು​‍್ಪಾಸಮರೆ್ಪಣಯ ನಂತರ ಪ್ರಾಸ್ತಾವಿಕ ಭಾಷಣವನ್ನು ಶ್ರೀಮತಿ ಎಮ್‌.ಎಸ್‌.ಸಜ್ಜನರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮುಂಡರಗಿ  ಇವರು ಡೆಂಗ್ಯೂ ರೋಗವು ಇದು ಒಂದು. ಡೆಂಗ್ಯೂ, ಚಿಕುಂಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಈ ಸೊಳ್ಳೆಯು ಸ್ವಚ್ಛವಾದ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು, ತನ್ನ ವಂಶಾಭಿವೃದ್ದಿಯನ್ನು ಮಾಡುತ್ತವೆ ಈ ರೋಗದ ಲಕ್ಷ-ಣವು ವಿತರೀತ ಜ್ವರ ಮೈ-ಕೈ ನೋವು, ತೆಲೆ ನೋವು ಹಾಗೂ ಕಣ್ಣುಗಳು ಕೆಂಪಾಗುವುಕೆ ಇರುವವು ಅದಕ್ಕಗಿ ಈ ರೋಗವು ಹರಡದಂತೆ ಮುನ್ಯಚರಿಕೆವಾಗಿ ಮನೆಯಲ್ಲಿ ಶೇಖರಿಸುವ ನೀರಿನ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ನೀರನ್ನು ಶೇಖರಿಸಿ ಮೇಲೆ ಮುಚ್ಚಬೇಕು ಮತ್ತು ಮನೆಯ ಸುತ್ತ-ಮುತ್ತ ಪರಿಸರವನ್ನು ಸ್ಚಚ್ಛವಾಗಿಟ್ಟುಕೊಳ್ಳಬೇಕು. ಸೋಳ್ಳೆ ಬತ್ತಿ, ಬೇವಿನ ಸೊಪ್ಪನ ಹೊಗೆ, ಸೊಳ್ಳೆ ಪರದೆಯನ್ನು ಉಪಯೋಗ ಎಂದು ಹೇಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಈ ವರ್ಷದ ಘೋಷವಾಕ್ಯ “ಡೆಂಗಿ ಸೋಲಿಸಲು ಹೆಜ್ಜೆಗಳು: ಪರೀಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ” ಮತ್ತು ಸಾರ್ವಜನಿಕರಿಗೆ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕಸದ ವಾಹನದಲ್ಲಿ ಆಡಿಯೋ ಕ್ಲಿಪಂಗ್‌ಗಳನ್ನು ಹಾಕಿ ಹೆಚ್ಚಿನ ಜಾಗೃತಿ ಮೂಡಸಬೇಕೆಂದು, ಹೇಳಿದರು. 

ಡಾ ಲಕ್ಷ್ಮಣ ಪೂಜಾರ ತಾಲೂಕಾ ಆರೋಗ್ಯಾಧಿಕಾರಿಗಳು ಮುಂಡರಗಿ ಇವರು ಮಾತನಾಡಿ ಡೆಂಗ್ಯೂ ಜ್ವರದಲ್ಲಿ 3 ವಿಧಗಳು ಇವೆ ಅವು ಯಾವವು ಎಂದರೆ 1.ಡೆಂಗ್ಯೂ ಜ್ವರ 2.ಡೆಂಗ್ಯೂ ರಕ್ತ ಸ್ರಾವ 3. ಡೆಂಗ್ಯೂ ಶಾಕ ಸಿಡ್ರೋಮ್ ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲಾ ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು ಅದಕ್ಕಾಗಿ ಈ ಒಂದು ರೋಗದ ಬಗ್ಗೆ ಜನರಿಗೆ ಹೆಚ್ಚಿಗೆ ಅರಿವನ್ನು ಮೂಡಿಸಬೇಕು ಎಂದರು ಈ ರೋಗ ಬರದ ಹಾಗೇ ಮುನ್ನೇಚರಿಕೆ ಕ್ರಮಗಳು ಯಾವುವೆದಂರೇ, ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಚವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೇಗಳನ್ನು ಬಳಸಬೇಕು ಮತ್ತು ಸಾಯಂಕಾಲ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು ಎಂದು ಮತ್ತು ಯಾವುದೇ ಜ್ವರವಿರಲ್ಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿ ಎಂದು ಹೇಳಿದರು. ಪುರಸಭೆಯ ಪೌರಸಭೆಯ ಪೌರ ಕಾರ್ಮಿಕರು ತಮ್ಮ ದೈನಂದಿನ ಕಾರ್ಯಗಳಲ್ಲಿ ಟೈಯರ್‌ಗಳು, ಪ್ಲಾಸ್ಟಿಕ್ ತ್ಯಾಜ ವಿಲೇವಾರಯನ್ನು ಸರಿಯಾದ ವಿಧಾನದಲ್ಲಿ ಮಾಡಬೇಕು ಹಾಗೂ ಎಲ್ಲಾ ವಾರ್ಡಗಳಲ್ಲಿ ಮಳೆಯ ನೀರು ನಿಲ್ಲದ ಹಾಗೇ ಸರಗವಾಗಿ ಹರಿಯುವಂತೆ ಮಾಡುವುದು, ಚರಂಡಿ ಸ್ವಚ್ಚಗೊಳಿಸುವುದು, ಮೋಡಕಾ ವಸ್ತುಗಳಾದ ಬಕೆಟ್, ಡಬ್ಬಿ, ಕೊಡ ಮುಂತಾದ ಘನತ್ಯಾಜ ವಸ್ತುಗಳನ್ನು ಗುಜರಿ ಅಂಗಡಿ ಮಾಲಿಕರಿಗೆ ಸೂಕ್ತ ಸ್ಥಳಗಳಲ್ಲಿ ಸ್ಥಳಾಂತರಿಸಲು ಸೂಚಿಸಬೇಕು ಎಂದು ಹೇಳಿದರು. 

ನಾಗೇಶ ಹುಬ್ಬಳ್ಳಿ ಪುರಸಭೆ ಉಪಾಧ್ಯಕ್ಷರು, ಮಾತನಾಡಿ ಈ ಕಾರ್ಯಕ್ರಮದಿಂದ ಜನರಿಗೆ ಡೆಂಗ್ಯೂ ರೋಗದ ಬಗ್ಗೆ ಪೌರ ಕಾರ್ಮಿಕರು ಸಮುದಾಯದವರಿಗೆ ಈ ರೋಗದ ಬಗ್ಗೆ ಒಳ್ಳೆಯ ತಿಳುವಳಿಕೆಯನ್ನು ನೀಡಬೇಕು ಈ ತಿಳುವಳಿಕೆಯಿಂದ ಎಲ್ಲಾ ಕಾರ್ಮಿಕರು ತಮ್ಮ ತಮ್ಮ ಮನೆಯ ಸುತ್ತ-ಮುತ್ತ ಸ್ವಚ್ಚವಾಗಿ ಇಟ್ಟುಕೊಳ್ಳಿರಿ ಎಂದು ತಿಳಿಸಿ ಹೇಳಿದರು.ಎಮ್ ಎಸ್ ಮ್ಯಾಗೇರಿ ಆರೋಗ್ಯ ನೀರೀಕ್ಷಣಾಧಿಕಾರಿ ವಂದನಾರೆ​‍್ಣ ಮಾಡಿದರು, ಸ್ವಾಗತ್ಘಪುಷ​‍್ಸಮರೆ್ಪಣ ಕಾಳಪ್ಪ ಬಡಿಗೇರ ಹಿ.ಪು.ಆ.ಸ ಮುಖ್ಯಅತಿಥಿಗಳು ರಫಿಕ್ ಮುಲ್ಲಾನವರ ಪುರಸಭೆ ಸ್ಥಾಯಿ ಸಮಿತಿಯ ಚೆರಮೇನ್‌ರು, ಅಧ್ಯಕ್ಷತೆ ನಾಗೇಶ ಹುಬ್ಬಳ್ಳಿ ಪುರಸಭೆ ಉಪಾಧ್ಯಕ್ಷರು, ಮುಂಡರಗಿ ಪ್ರಾಸ್ಥಾವಿಕ ಭಾಷಣ ವಂದನಾರೆ​‍್ಣ ಎಮ್ ಎಸ್ ಮ್ಯಾಗೇರಿ ಆರೋಗ್ಯ ನೀರೀಕ್ಷಣಾಧಿಕಾರಿ ಪುರಸಭೆ,  ಪುರಸಭೆಯ ಎಲ್ಲಾ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು  ಎಲ್ಲರೂ ಭಾಗವಹಿಸಿದ್ದರು.