ರಾಷ್ಟ್ರೋತ್ಥಾನ ಪ್ರತಿಯೊಬ್ಬರಿಗೂ ಅವಶ್ಯ, ಅನಿವಾರ್ಯ: ಬಸವರಾಜ
ಮಹಾಲಿಂಗಪುರ 02: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಅದರ ಅಂಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ 60 ವರ್ಷ ತುಂಬಿದ ಈ ಘಳಿಗೆ ಪ್ರತಿಯೊಬ್ಬ ಭಾರತೀಯನಿಗೆ ಅತ್ಯಂತ ಪವಿತ್ರ ಕ್ಷಣ, ಈ ಕ್ಷಣವನ್ನು ಕೇವಲ ಒಂದು ದಿನದ ಆಚರಣೆಯನ್ನಾಗಿಸದೇ ಇಡೀ ವರ್ಷವನ್ನು ವ್ಯಕ್ತಿ ಪರಿವರ್ತನೆಯ ಮೂಲಕ ಸ್ವಸ್ಥ-ಸುಸ್ಥಿರ ಸಮಾಜದ ನಿರ್ಮಾಣದೊಂದಿಗೆ ದೇಶದ ಪರಿವರ್ತನೆ ಮತ್ತು ಅಭಿವೃದ್ಧಿಗೆ ಸರ್ವರೂ ಕೈಜೋಡಿಸಬೇಕೆಂದು ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿಯ ರಾಜ್ಯ ಸಂಚಾಲಕ ಬಸವರಾಜ ಟಿ.ಎಸ್., ಹೇಳಿದರು.
ಪ್ರಬುದ್ಧರ ಮೂಲಕ ವ್ಯಕ್ತಿ ಪರಿವರ್ತನ ಹಾಗೂ ಸಮಾಜ ಪರಿವರ್ತನೆಯಾಗಬೇಕೆಂದ ಅವರು, ಮಹಾಲಿಂಗಪುರ, ಸೈದಾಪುರ, ತೇರದಾಳ, ರಬಕವಿ-ಬನಹಟ್ಟಿ ಪಟ್ಟಣಗಳ ಪ್ರಬುದ್ಧರನ್ನು ಭೇಟಿಮಾಡಿ, ರಾಷ್ಟ್ರೋತ್ಥಾನ ಪರಿಷತ್ ಸಾಹಿತ್ಯ, ಶಿಕ್ಷಣ, ಆರೋಗ್ಯ, ಸೇವೆ ಎಂಬ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಮಾಡುತ್ತಿರುವ ಸೇವಾ ಕಾರ್ಯ ವಿವರಿಸುತ್ತಾ, ಸಾಹಿತ್ಯ ವಿಭಾಗದಲ್ಲಿ 173 ರಾಷ್ಟ್ರೋತ್ಥಾನ ಸಾಹಿತ್ಯ, 129 ಸಾಹಿತ್ಯ ಸಿಂಧು ಪ್ರಕಾಶನ, 610ಭಾರತ-ಭಾರತಿ(ಕನ್ನಡ), 225 ಭಾರತ-ಭಾರತಿ(ಇಂಗ್ಲೀಷ್) ಪ್ರಕಟಣೆಗಳು, 26 ಶಾಲೆಗಳನ್ನು ಹೊಂದಿದ್ದು ಶಿಕ್ಷಣ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಾಧನಾ ಮತ್ತು ತಪಸ್ ಮೂಲಕ ಪ್ರತಿಭಾವಂತ ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು 134 ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ, 103 ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ,ಆರೋಗ್ಯ ವಿಭಾಗದಲ್ಲಿ 23 ಯೋಗಕೇಂದ್ರಗಳು, 6ಸಾವಿರ ರಕ್ತದಾನ ಶಿಬಿರಗಳ ಮೂಲಕ 5 ಲಕ್ಷಕ್ಕೂ ಅಧಿಕ ರಕ್ತದಾನಿಗಳಿಂದ 11.50 ಕ್ಕೂ ಅಧಿಕ ಲಕ್ಷ ಯೂನಿಟ್ ರಕ್ತ ಸಂಗ್ರಹ ಮಾಡಿ 4 ಲಕ್ಷಕ್ಕೂ ಅಧಿಕ ಫಲಾನುಭವಿಳಿಗೆ ತಲುಪಿಸಿದ ಹಿರಿಮೆ, 400ಕ್ಕೂ ಅಧಿಕ ಮಕ್ಕಳಿಗೆ ತಲಸ್ಸೆಮಿಯಾ ಉಚಿತ ಚಿಕಿತ್ಸೆ, 162 ಹಾಸಿಗೆಗಳ ಸಮಗ್ರ ಚಿಕಿತ್ಸಾ ಆಸ್ಪತ್ರೆಗಳ ಮೂಲಕ ಸ್ವಸ್ಥ ಸಮುದಾಯಗಳ ಪೋಷಣಾ ಕಾರ್ಯ, ಸೇವಾ ವಿಭಾಗದಲ್ಲಿ ಬೆಂಗಳೂರಿನ ಕೊಳಗೇರಿಗಳಲ್ಲಿ 205 ಸೇವಾ ವಸತಿಗಳಲ್ಲಿ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸೇವೆ, 650ಕ್ಕೂ ಅಧಿ ಗೋಸಂಕ್ಷಣೆ, 15 ಸಾವಿರಕ್ಕೂ ಅಧಿಕ ವೃಕ್ಷಾರೋಪಣ, 30 ಸೇವಾ ವಸತಿಗಳ 360 ಶಿಕ್ಷಣ ಕೇಂದ್ರಗಳಲ್ಲಿ 6 ಸಾವಿರಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ, 10 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಸ್ವಾವಲಂಬನ ತರಬೇತಿ, 200ಸ್ವಸಹಾಯ ಗುಂಪುಗಳ ಮೂಲಕ 30ಸಾವಿಕ್ಕೂ ಅಧಿಕ ಫಲಾನುಭವಿಗಳಿಗೆ ಸ್ವಾಸ್ಥ್ಯ ಚಟುವಟಿಕಾ ತರಬೇತಿ, 34 ವೃತ್ತಿ ತರಬೇತಿ ಕೇಂದ್ರಗಳ ಮೂಲಕ 10ಸಾರಕ್ಕೂ ಅಧಿಕ ಫಲಾನುಭವಿಗಳಿಗೆ ವೃತ್ತಿ ತರಬೇತಿ ನೀಡಲಾಗುತ್ತಿದೆ.
ಮಾಧವ ಸೃಷ್ಠಿ : 2006 ರಲ್ಲಿ ಗುರೂಜಿ ಗೋಲ್ವಾಲ್ಕರ್ ಜನ್ಮಶತಮಾನೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹಣ್ಯ ದೇವಾಲಯದ ಸಮೀಪ ಮಾಧವ ಸೃಷ್ಠಿ-ಗೋಶಾಲೆ, ದೇಶೀ ಜಾನುವಾರು ತಳಿ ಸಂರಕ್ಷಣಾ ಕೇಂದ್ರ ಹಾಗೂ ವೃಂದಾವನ, ಸುಸ್ಥಿರ ಕೃಷಿ ಅರಣ್ಯ ಸಾಗುವಳಿ ಕೇಂದ್ರದಿಂದ ಕೃಷಿಕರಿಗೆ ಮತ್ತು ಸಾಮಾನ್ಯರಿಗೆ ಸಾವಯವ ಕೃಷಿ ತರಬೇತಿ. 110 ಎಕರೆ ವಿಸ್ತಾರದಲ್ಲಿ 600 ಕ್ಕೂ ಅಧಿಕ ಗೋವುಗಳು, 35 ಎಕರೆಯಲ್ಲಿ 15ಸಾವಿರಕ್ಕೂ ಅಧಿಕ ಮರಗಳು,500 ಕೃಷಿಕರಿಗೆ ಎತ್ತುಗಳ ಕೊಡುಗೆ, ಗಿರ್, ಸಾಹಿವಾಲ್, ಕಾಂಕೇಜ್, ಥಾರ್‌ಪಾರ್ಕರ್, ದೇವನಿ, ಹಳ್ಳಿಕಾರ್, ಮಲೆನಾಡು ಗಿಡ್ಡ, ಓಂಗೋಲ್, ಅಮೃತಮಹಲ್ ಮುಂತಾದ ಸ್ಥಳೀಯ ತಳಿಗಳನ್ನು ಸಂರಕ್ಷಿಸಲಾಗುತ್ತಿದೆ. ಈ ರೀತಿ ಹತ್ತು ಹಲವಾರು ಸೇವಾ ಕಾರ್ಯಗಳ ಮೂಲಕ ಪ್ರತಿಯೊಬ್ಬರಿಗೂ ರಾಷ್ಟ್ರೋತ್ಥಾನ ಅವಶ್ಯ ಮತ್ತು ಅನಿವಾರ್ಯವೆನಿಸಿದೆ ಎಂದರು.
ಶಾಸಕ ಸಿದ್ದು ಸವದಿ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಲಾಯಿತು. ಸಮಿತಿ ಸದಸ್ಯೆ ರೇವತಿ ಎಚ್., ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ, ಜಿಲ್ಲಾ ಸಂಯೋಜಕ ಹನಮಂತ, ಸಂಪನ್ಮೂಲ ವ್ಯಕ್ತಿಗಳಾದ ನಾರನಗೌಡ ಉತ್ತಂಗಿ, ಶಿವಲಿಂಗ ಸಿದ್ನಾಳ, ಸಪ್ನಾ ಅನಿಗೋಳ ಇತರಿದ್ದರು.
ಬಾಕ್ಸ್ : ರಾಷ್ಟ್ರೋತ್ಥಾನ ಪ್ರಕಟಿತ ಸಾಹಿತ್ಯ ಅತ್ಯಂತ ಮೌಲ್ಯವುಳ್ಳದ್ದಾಗಿದ್ದು, 2 ಲಕ್ಷ ರೂ.ಮೌಲ್ಯದ ರಾಷ್ಟ್ರೋತ್ಥಾನ ಪುಸ್ತಕಗಳನ್ನು ಖರೀದಿಸಿ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿತರಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ತಲುಪಿಸಲಾಗುವುದು