ನಯಾನಗರ ಸರ್ಕಾರಿ ಪ್ರೌಢ ಶಾಲಾ ಎಸ್.ಎಸ್.ಎಲ್.ಸಿ ಫಲಿತಾಂಶ
ಬೈಲಹೊಂಗಲ 03 : ಸಮೀಪದ ನಯಾನಗರ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಅಕ್ಷತಾ ಮಲ್ಲಪ್ಪ ಕಲಭಾವಿ (618) 98.88, ಪ್ರಥಮ. ಅಪೂರ್ವ ದೇಮಪ್ಪ ಚಚಡಿ (600) 96.00 ದ್ವಿತೀಯ. ಸ್ಪೂರ್ತಿ ಈರ್ಪ ಮಾಳಗಿ (597) ತೃತೀಯ, 95.52, ವೈಶಾಲಿ ಲಕ್ಷ್ಮಣ ಸೂರ್ಯವಂಶಿ (574) 91.84 ಚತುರ್ಥ, ಶ್ರೇಯಾ ಶಿವಾಜಿ ಸೂರ್ಯವಂಶಿ (550) 88.00 ಪಂಚಮ. ಜಯಶ್ರೀ ಪ್ರಕಾಶ ದುರ್ವೆ (547) 87.52, ತನುಶ್ರೀ ಉಳವಯ್ಯಾ ಹಿರೇಮಠ (547) 87.52 ಆರನೇಯ, ಆದರ್ಶ ಈರ್ಪ ಉಜ್ಜಿನಕೊಪ್ಪ (533) 85.28 ಎಳನೇಯ ಸ್ಥಾನವನ್ನು ಪಡೆದಿದ್ದಾರೆ. ಒಟ್ಟಾರೆ ಶಾಲೆಯ ಫಲಿತಾಂಶ 51 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 12 ಜನ ಪ್ರಥಮ ದರ್ಜೆಯಲ್ಲಿ, ದ್ವಿತಿಯ ದರ್ಜೆ, ಪಾಸ್ ದರ್ಜೆ ತಲಾ ಒಬ್ಬರು ಒಟ್ಟು 30 ಜನ ಪಾಸಾಗುವ ಮೂಲಕ ಶೇ58.82 ಪಾಸಾಗಿದ್ದಾರೆ. ಬದಲಾದ ಪರೀಕ್ಷೆ ವ್ಯವಸ್ಥೆಯಲ್ಲಿಯೂ ಕೂಡ ಸರ್ಕಾರಿ ಶಾಲೆಯ ಮಕ್ಕಳು ವಯಕ್ತಿಕವಾಗಿ ಉತ್ತಮ ಸಾಧನೆ ಮಾಡಿರುವುದು ಸಂತಸ ತಂದಿದೆ, ಕಾರಣ ಮುಂದಿನ ಸಾಲುಗಳಲ್ಲಿ ಒಟ್ಟಾರೆ ಫಲಿತಾಂಶ ಸುಧಾರಿಸಲು ಗುರು ಬಳಗದ ಶ್ರಮ ಸಹಕಾರದಿಂದ ಸಾಧನೆ ಮಾಡಲಾಗುವುದು. ಎಂದು ಪ್ರೌಢ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಿಕ್ಷಣ ಪ್ರೇಮಿ ನಾರಾಯಣ ನಲವಡೆ ಹಾಗೂ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಯಲ್ಲಪ್ಪ ಏಣಗಿ ಹೇಳಿದರು. ಈ ಪ್ರಕಾರ ಹೆಚ್ಚಿನ ಅಂಕ ಪಡೆದು ಪಾಸಾಗುವ ಮೂಲಕ ಶಾಲೆಗೆ ಕೀರ್ತಿ ತಂದ ಮಕ್ಕಳನ್ನು ಮುಖ್ಯೋಪಾದ್ಯಾಯ ನಾಗೇಶ ಮಾಳನ್ನವರ, ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಎಂ.ಎಂ.ಸಂಗೊಳ್ಳಿ ಮತ್ತು ಸಮಸ್ತ ಗುರುಬಳಗ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳು ಗ್ರಾಮಸ್ಥರು ಅಭಿನಂದಿಸಿದ್ದಾರೆ.