ಸ್ವಚ್ಚತೆಗೂ ದೇಶದಲ್ಲಿ ಕಾನೂನು ಬೇಕೆ..?: ಎಚ್.ಬಿ.ಲಿಂಗಯ್ಯ

ಲೋಕದರ್ಶನವರದಿ

ಬ್ಯಾಡಗಿ:ಸಾರ್ವಜನಿಕರ ಬೇಜವಾಬ್ದಾರಿ ವರ್ತನೆಯಿಂದ ಸ್ವಚ್ಚತೆ ಎಂಬುದು ದೇಶದ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿತವಾ ಗುತ್ತಿರುವುದು ಖೇದವೆನಿಸುತ್ತಿದೆ, ಇದೊಂದು ಸರ್ಕಾರದ  ಕಾರ್ಯಕ್ರಮವಾಗುತ್ತಿರುವುದು ಪ್ರಭುದ್ಧ ನಾಗರಿಕರ ಗೌರವಕ್ಕೆ ಧಕ್ಕೆ ಯಾಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಎಚ್.ಬಿ.ಲಿಂಗಯ್ಯ ಪ್ರಶ್ನಿಸಿದರು.

 ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬಯಲು ಶೌಚ ತಡೆಗಟ್ಟಲು ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ   ಸರ್ಕಾರ ಕಾನೂನುಗಳು ತರಬೇಕೆ..? ಇದರಿಂದ ವಿದೇಶಿ ವಲಯದಲ್ಲಿ ದೇಶದ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದರು. 

ಇನ್ನಾದರೂ ಬೇಜವಾಬ್ದಾರಿ ವರ್ತನೆ ಕೈಬಿಡಿ: ನಮ್ಮೆಲ್ಲರ ಬೇಜವಾಬ್ದಾರಿ ವರ್ತನೆಯಿಂದ ಸ್ವಚ್ಚತೆ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ನಮ್ಮದೇ ತೆರಿಗೆಯ ಸಾವಿರಾರು ಕೋಟಿ ಹಣವನ್ನು ವ್ಯಯ ಮಾಡುತ್ತಿದೆ, ಒಂದು ವೇಳೆ ಸಾರ್ವಜನಿಕರು ಅದರಲ್ಲೂ ವಿದ್ಯಾರ್ಥಿಗಳು  ಮತ್ತು ಗ್ರಾಮೀಣ ಭಾಗದ ಕೃಷಿಕರು ಎಚ್ಚೆತ್ತುಕೊಂಡಿದ್ದೇ ಆದಲ್ಲಿ, ಇಂತಹ ದೊಡ್ಡ ಮೊತ್ತದ ಉಳಿಸಲು ಸಾಧ್ಯವೆಂದರು.ವೇದಿಕೆಯಲ್ಲಿ ಪ್ರಾಚಾರ್ಯ ರಾಮಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕ ಶಿವ್ಯಾನಾಯ್ಕ್, ಎನ್ಎಸ್ಎಸ್ ಸಂಯೋಜಕರಾದ ತಿಪ್ಪಣ್ಣ, ಉಪನ್ಯಾಸಕರಾದ ಚಂದ್ರಪ್ಪ ಶಿವಾನಂದ ಬೆನ್ನೂರ, ಸಿ.ಬಿ.ಮದ್ಯಾಹ್ನದ ಎಲ್.ಎಲ್.ನಾಯ್ಕ್ ಇನ್ನಿತರರು ಉಪಸ್ಥಿತರಿದ್ದರು.