ದಿ. 25ರಂದು ನೆಟ್‌ಬಾಲ್ ಕ್ರೀಡಾ ಕೂಟ

Netball tournament on the 25th

ವಿಜಯಪುರ 10:  ಅಮೇಚೂರ್ ನೆಟ್ ಬಾಲ್ ಅಸೋಷಿಯೇಷನ್ ಆಫ್ ಕರ್ನಾಟಕ (ರಿ)  ವಿಜಯಪುರ ಜಿಲ್ಲಾ ಅಮೇಚೂರ್ ನೆಟ್‌ಬಾಲ್ ಅಸೋಷಿಯೇಷನ್ (ರಿ) ವತಿಯಿಂದ ಕ್ರೀಡಾಕೂಟವು ಡಾ.ಬಿ.ಆರ್‌. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದಿ. 25ರಂದು ನೆಟ್‌ಬಾಲ್ ಕ್ರೀಡಾ ಕೂಟವನ್ನು ಎರಡು ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ.  

ದಿ. 20ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಕ್ರೀಡಾಕೂಟದಲ್ಲಿ 14 ಹಾಗೂ 16 ವರ್ಷದ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿದೆ. ವಿಜಯಪುರ ಜಿಲ್ಲೆಯ ಎಲ್ಲ ತಾಲೂಕು ತಂಡಗಳು ಭಾಗವಹಿಸುವ ಆಸಕ್ತ ಕ್ರೀಡಾಪಟುಗಳು ಜನ್ಮ ದಾಖಲಾತಿ, ಆಧಾರಕಾರ್ಡ್‌, ಪಿಟನೆಸ್ ಸರ್ಟಿಫಿಕೆಟ್, ಫೋಟೋ, ಬ್ಯಾಂಕ್ ಪಾಸ ಬುಕ್ ತೆಗೆದುಕೊಂಡು ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ ತಾರನಾಳ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಅಧ್ಯಕ್ಷರಾದ ವಿಲಾಸ ವ್ಯಾಸ ತಿಳಿಸಿದ್ದಾರೆ.