ಪ್ಯಾರಿಸ್, ಸೆ 14 ವಿಶ್ವ ಫುಟ್ಬಾಲ್ ಶ್ರೇಷ್ಠ ಆಟಗಾರ ನೇಯ್ಮಾರ್ ಅವರು ಪ್ಯಾರೀಸ್ ಸೇಂಟ್ ಜರ್ಮನ್ ತಂಡ ಸೇರ್ಪಡೆಯಾಗಿದ್ದು ಇಂದು ನಡೆಯುವ ಸ್ಟ್ರಾಸ್ಬರ್ಗ್ ವಿರುದ್ಧದ ಫ್ರೆಂಚ್ ಲೀಗ್ -1 ತವರು ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಪಿಎಸ್ಜಿ ಕೋಚ್ ಥಾಮಸ್ ಟಚೆಲ್ ಶುಕ್ರವಾರ ಈ ಕುರಿತು ಮಾಹಿತಿ ನೀಡಿದ್ದು, ಇಂದು ನಡೆಯುವ ಪಂದ್ಯಕ್ಕೆ ನೇಯ್ಮಾರ್ ಲಭ್ಯರಿದ್ದಾರೆಂದು ಸ್ಪಷ್ಟತೆ ನೀಡಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ 27ರ ಪ್ರಾಯದ ಸ್ಟಾರ್ ಸ್ಟ್ರೈಕರ್ ಬ್ರೆಜಿಲ್ ತಂಡದ ಪರ ಆಡಿದ್ದರು. ಆದರೆ, ಪಿಎಸ್ಜಿ ಪರ ಆಡಿರಲಿಲ್ಲ. ಏಕೆಂದರೆ, ಪಿಎಸ್ಜಿ ತಂಡದಿಂದ ಮತ್ತೇ ಬಾರ್ಸ್ಲೋನಾ ತಂಡಕ್ಕೆ ಬೇಸಿಗೆಯಲ್ಲಿ ವರ್ಗಾವಣೆಯ ಭರದಲ್ಲಿದ್ದರು. ಹಾಗಾಗಿ, ಅವರು ಪಿಎಸ್ಜಿ ಪರ ಇಷ್ಟು ದಿನ ಕಣಕ್ಕೆ ಇಳಿದಿದ್ದಾರೆ. ಎರಡು ವರ್ಷಗಳ ಹಿಂದೆ ನೇಯ್ಮಾರ್ ಅವರನ್ನು ವಿಶ್ವ ದಾಖಲೆ 222 ದಶಲಕ್ಷ ಯುರೋಗಳಿಗೆ (246 ದಶಲಕ್ಷ ಯುಎಸ್ ಡಾಲರ್) ಮಾರಾಟ ಮಾಡಿದ ಪಿಎಸ್ಜಿ ಮತ್ತು ಬಾರ್ಸ್ಲೋನಾ, ಸುದೀರ್ಘ ಮಾತುಕತೆಯ ನಂತರ ಅವರ ವಗರ್ಾವಣೆಯ ಬಗ್ಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ನೇಯ್ಮಾರ್ ಈಗ ಫ್ರೆಂಚ್ ಚಾಂಪಿಯನ್ನೊಂದಿಗೆ ಮೂರನೇ ಋತುವನ್ನು ಪ್ರಾರಂಭಿಸುತ್ತಿದ್ದಾರೆ. ಪಿಎಸ್ಜಿ ತಂಡದ ಎಡಿಸನ್ ಕವಾನಿ ಹಾಗೂ ಕೈಲಿನ್ ಎಂಬಾಪೆ ಅವರು ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ