ಮೇ.27 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ

Nidhi Aapke Nikat program on May 27

ಕಾರವಾರ 22: ಕ್ಷೇತ್ರೀಯ ಭವಿಷ್ಯನಿಧಿ ಕಾರ್ಯಾಲಯ ಹುಬ್ಬಳ್ಳಿ ವತಿಯಿಂದ ಮೇ.27 ರಂದು ಬೆಳಗ್ಗೆ 9.30 ಗಂಟೆಯಿAದ ಸಂಜೆ 4 ಗಂಟೆಯವರೆಗೆ ಶಿರಸಿಯ ತೋಟಗಾರ್ಸ್ ಎಸ್.ಎಸ್.ಎಚ್ ಕಡ್ವೆ ಇನ್ಸಿ÷್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಪಿಂಚಣಿದಾರರು, ಚಂದಾದಾರರು, ಉದ್ಯೋಗದಾತರು ಹಾಗೂ ಕಾರ್ಮಿಕ ಸಂಘಟನೆಯವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಾರಿಗೆ ಅದಾಲತ್ ಕಾರ್ಯಕ್ರಮಕಾರವಾರ 22: ವ್ಯಾಪ್ತಿಯಲ್ಲಿರುವ ವಾಹನ ಮಾಲೀಕರು, ಚಾಲಕರು ಹಾಗೂ ಸಾರಿಗೆ ಇಲಾಖೆಯ ಸೇವೆ ಪಡೆಯುತ್ತಿರುವ ಸಾರ್ವಜನಿಕರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಮೇ. 28 ರಂದು ಮಧ್ಯಾಹ್ನ 12 ಗಂಟೆಗೆ ಸಾರಿಗೆ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮದಲ್ಲಿ ಸೇವಾ ನ್ಯೂನತೆ ಮತ್ತು ಇನ್ನಿತರ ಸಮಸ್ಯೆಗಳಿದ್ದರೆ ಸಾರ್ವಜನಿಕರು ಖುದ್ದಾಗಿ ಹಾಜರಾಗಿ ಪರಿಹರಿಸಿಕೊಳ್ಳುವಂತೆ ಹಾಗೂ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಬಿ ಮಿಸ್ಕಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೂಲಿಕಾರರಿಗೆ ಕೂಲಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಕಾರವಾರ 22: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಒಳಗೊಳ್ಳದ ಕುಟುಂಬಗಳನ್ನು ಗುರುತಿಸಿ ಅಕುಶಲ ಕೆಲಸಕ್ಕಾಗಿ ನೋಂದಾಯಿಸುವ ದೃಷ್ಟಿಯಿಂದ ಹಮ್ಮಿಕೊಂಡ "ದುಡಿಯೋಣ ಬಾ"ಕಾರ್ಯಕ್ರಮ ದಲ್ಲಿ ದುಡಿಯುವ ಕೈಗಳು ಕೆಲಸದ ಭರದಲ್ಲಿ ಆರೋಗ್ಯ ನಿರ್ಲಕ್ಷಿಸುತ್ತಾರೆ ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೂಲಿಕಾರರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮ ಪಂಚಾಯತ್ ನಲ್ಲಿ ನರೇಗಾದಡಿ ಕಾಲುವೆ ಕೆಲಸ ಸಂಧರ್ಭದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ನಡೆಸಿ ಬಿಪಿ, ಶುಗರ್, ನೆಗಡಿ, ಜ್ವರ ಪರೀಕ್ಷಿಸುವ ಮೂಲಕ ಓಅಆ ಕ್ಯಾಂಪ್ ನಡೆಸಲಾಯಿತು.

ನರೇಗಾ ಸಹಾಯಕ ನಿರ್ದೇಶಕಿ ವಿದ್ಯಾ ದೇಸಾಯಿ ಮಾತನಾಡಿ ನರೇಗಾದಡಿ ಸಿಗುವ ಸೌವಲತ್ತುಗಳು, ಕೂಲಿಕಾರರ ದಿನಗೂಲಿ 349ರೂ ನಿಂದ 370ಕ್ಕೆ ಏರಿಕೆಯಾಗಿರುವುದು, ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಹೆಚ್ಚಿಸುವುದು, ಕೆಲಸದಲ್ಲಿನ ವಿನಾಯಿತಿ, ಯೋಜನೆಯಡಿ ಸಿಗುವ ಸಹಾಯಧನದ ಬಳಕೆ, ಮಹಿಳೆಯರಿಗೆ ಇರುವ ಸೌವಲತ್ತುಗಳು, NNMS ಹಾಜರಾತಿ ಇತ್ಯಾದಿ ವಿಷಯಗಳ ಕುರಿತು ತಿಳಿಸಿದರು.

ಉದ್ಯೋಗ ಖಾತ್ರಿಯಡಿ ಬಚ್ಚಲುಗುಂಡಿ, ಎರೆಹುಳು ತೊಟ್ಟಿ, ಕುರಿ, ಕೋಳಿ ಶೆಡ್, ದನದ ಕೊಟ್ಟಿಗೆ, ತೋಟಗಾರಿಕಾ ಬೆಳೆಗಳಿಗೆ ಸಹಾಯಧನ ಪಡೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ತಿಳಿಸಿದರು. ಹಾಗೂ ವರ್ಷದಲ್ಲಿ ಕುಟುಂಬವೊAದಕ್ಕೆ 100ದಿನಗಳ ಕೆಲಸ ಖಾತ್ರಿ, ಗಂಡು ಹೆಣ್ಣಿಗೆ ಸಮಾನ ಕೂಲಿ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ, ಹಿರಿಯ ನಾಗರಿಕರು, ವಿಶೇಷ ಚೇತನರು, ಗರ್ಭಿಣಿ, ಬಾಂಣAತಿಯರಿಗೆ ಶೇ.50 ರಷ್ಟು ಕೆಲಸದಲ್ಲಿ ವಿನಾಯಿತಿ ಇತರ ವಿಷಯಗಳ ಕುರಿತು ಅರಿವು ಮೂಡಿಸಲಾಯಿತು. ಇನ್ನೂ ನರೇಗಾ ಕೂಲಿಕಾರರನ್ನು PMJJBY ಮತ್ತು PMSBY ಉಳಿತಾಯ ಯೋಜನೆಯ ಸದುಪಯೋಗ ಪಡೆಯುವಂತೆ ತಿಳಿಸಿದರು. ಈ ವೇಳೆ ಕೆಲವು ಕೂಲಿಕಾರರಿಗೆ ಉದ್ಯೋಗ ಚೀಟಿ ನೀಡಿ ಕೆಲಸಕ್ಕೆ ಆಹ್ವಾನ ನೀಡಲಾಯಿತು. ನವೀಕರಣ ಹಾಗೂ ಹೊಸ ಉದ್ಯೋಗ ಚೀಟಿ ಪಡೆಯುವುದು ಸೇರಿದಂತೆ ಉದ್ಯೋಗ ಚೀಟಿಯಲ್ಲಿ ಮರಣ ಹೊಂದಿದವರು ಹಾಗೂ ಮದುವೆಯಾಗಿ ಬೇರೆ ಊರಿಗೆ ಹೋಗಿರುವವರ ಹೆಸರು ರದ್ದು ಮಾಡುವುದು ಕಡ್ಡಾಯ ಎಂಬುದನ್ನ ತಿಳಿಸಿದರು.