ಶಿಗ್ಗಾವಿ 13 : ಜನಸೇವೆಯೇ ದೇಶಸೇವೆ ಮತ್ತು ದೇವರ ಸೇವೆ ಎಂದು ನಂಬಿ ಜೀವನವನ್ನೇ ಮುಡಿಪಾಗಿಟ್ಟ ಮಹಿಳೆ ನೈಟಿಂಗೇಲ್ ಎಂದು ತಾಲೂಕ ಆಸ್ಪತ್ರೆ ಶಸ್ತ್ರಚಿಕಿತ್ಸಕ ತಜ್ಞ ವೈದ್ಯೆ ಡಾ.ರೈಸಾ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ ಇಂಟರ್ನ್ಯಾಷನಲ್ ಸಮೂಹ ಸಂಸ್ಥೆಯ ಬಿ.ಎಸ್.ಸಿ ನಸಿಂರ್ಗ್ ಕಾಲೇಜಿನಲ್ಲಿ ಪ್ಲಾರೆನ್ಸ ನೈಟಿಂಗಲ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನೈಟಿಂಗಲ್ ಜನುಮ ದಿನದಂದು ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವುದರ ಜೊತೆಯಲ್ಲೇ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರ ಸೇವೆಯನ್ನೂ ಸ್ಮರಿಸಲಾಗುತ್ತದೆ ಎಂದರು.
ನಸಿಂರ್ಗ್ ಕಾಲೇಜ ಪ್ರಾಂಶುಪಾಲ ಪ್ರಭು ಕೆ ಮಾತನಾಡಿ ಯುದ್ಧದಲ್ಲಿ ಅವರು ಸಲ್ಲಿಸಿರುವ ಶುಶ್ರೂಷಾ ಸೇವೆಯನ್ನು ಮಾನವ ಕುಲ ಮರೆಯಲಾಗದು ಸಾವಿರಾರು ಸೈನಿಕರು ಇಂದಿನ ಮಿಲಿಟರಿ ನಸಿಂರ್ಗ್ ಸೇವೆಗಳಿಗೆ ನೈಟಿಂಗೇಲ್ ಹಾಕಿಕೊಟ್ಟ ಮಾರ್ಗವೇ ಭದ್ರ ಬುನಾದಿಯಾಗಿದೆ ಅಲ್ಲದೇ ಶುಶ್ರೂಷಕರ ಕೊರತೆಯನ್ನು ನಿವಾರಿಸುವಲ್ಲಿ ಸರಕಾರವು ಸರಕಾರಿ ಆಸ್ಪತ್ರೆ, ಸ್ಪೆಷಾಲಿಟಿ ಆಸ್ಪತ್ರೆ, ವಿವಿಧ ತೀವ್ರ ನಿಗಾ ಘಟಕ ಹಾಗೂ ಕ್ರಿಟಿಕಲ್ ಕೇರ್ ವಿಭಾಗಗಳಲ್ಲಿ ಶುಶೂಷಕರಿಗೆ ಅತಿ ಹೆಚ್ಚು ಬೇಡಿಕೆಯಿದೆ. ವಿದೇಶಗಳಲ್ಲಿ ಭಾರತೀಯ ಶುಶ್ರೂಷಕರಿಗೆ ಅತಿಹೆಚ್ಚು ಬೇಡಿಕೆ ಇದೆ ಹಾಗೂ ಹೆಚ್ಚು ಸಂಭಾವನೆ ಇದೆ ಎಂದರು.
ತಾಲೂಕಿನ ಯುವಜನತೆ ಪಿನಿಕ್ಸ ಸಮೂಹ ಸಂಸ್ಥೆಯ ಬಿ.ಎಸ್.ಸಿ ನಸಿಂರ್ಗ್ ಕಾಲೇಜಿನ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿಯಾಗಲು ಒಳ್ಳೆಯ ಅವಕಾಶ. ಡಾ.ರಾಣಿ ತಿರ್ಲಾಪೂರಪಿನಿಕ್ಸ ಸಂಸ್ಥೆ ಕಾರ್ಯದರ್ಶಿಈ ಸಂದರ್ಭದಲ್ಲಿ ಪಿನಿಕ್ಸ ಸಂಸ್ಥೆ ಅಧ್ಯಕ್ಷ ಡಾ.ಎಂ.ಎಂ.ತಿರ್ಲಾಪೂರ, ಉಪಾಧ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ.ರಾಣಿ ತಿರ್ಲಾಪೂರ ಸೇರಿದಂತೆ ನಸಿಂರ್ಗ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಶಾಂಕ ಕೌಜಲಗಿ ಕಾರ್ಯಕ್ರಮ ನಿರ್ವಹಿಸಿದರು.