ವಿಜಯಪುರ 06: ಮುಂಬರುವ ದಿನಗಳಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಲು ಸನ್ನದ್ಧಗೊಳ್ಳುವ ಜೊತೆಗೆ ನಗರದಲ್ಲಿ ಕೋವಿಡ್-19 ಆಸ್ಪತ್ರೆಯಾಗಿ ಪರಿವತರ್ಿಸಲು ಬೇಕಾದ ಅವಶ್ಯಕತೆಗಳ ಬಗ್ಗೆ ಖರ್ಚು ವೆಚ್ಚದ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಗರದಲ್ಲಿ ಕೋವಿಡ್-19 ಆಸ್ಪತ್ರೆ ಕುರಿತಂತೆ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ವಹಿಸಿದ್ದು, ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವತರ್ಿಸುವ ಕುರಿತಂತೆ ಬೇಕಾದ ಸೌಲಭ್ಯಗಳ ಕುರಿತು ಖಚರ್ುವೆಚ್ಚದ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಮುಂಬರುವ ದಿನಗಳಲ್ಲಿ ಪಾಸಿಟಿವ್ ಪ್ರಕರಣ ಬಂದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನಚ್ಚರಿಕೆಗಳ ಬಗ್ಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು. ಖಾಸಗಿ ತಜ್ಞವೈದ್ಯರ ಸೇವೆ ಪಡೆಯುವ ಬಗ್ಗೆಯು ಕ್ರಮ ಕೈಗೊಳ್ಳಬೇಕು. ಎಸ್ಡಿಆರ್ಎಫ್ ಅನುದಾನದಡಿ ಕೋವಿಡ್-19 ಆಸ್ಪತ್ರೆಯಾಗಿ ಜಿಲ್ಲಾಸ್ಪತ್ರೆ ಪರಿವತರ್ಿಸುವ ಬಗ್ಗೆ ಅಗತ್ಯ ಸೌಕರ್ಯಗಳ ಬಗ್ಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಇಂದು ಪೂವರ್ಾಹ್ನವರೆಗೆ 416 ಜನರು ವಿದೇಶ ಹಾಗೂ ಇತರ ಕಡೆಗಳಿಂದ ಬಂದ ಬಗ್ಗೆ ವರದಿಯಾಗಿದೆ. 216 ಜನ 28 ದಿನಗಳ ಅವದಿ ಪೂರ್ಣಗೊಳಿಸಿದ್ದಾರೆ. 162 ಜನ 15 ರಿಂದ 28 ದಿನಗಳ ರಿಪೋಟರ್ಿಂಗ್ ಅವದಿಯಲ್ಲಿದ್ದಾರೆ. 38 ಜನ ಹೋಮ್ಕ್ವಾರಂಟೈನ್ದಲ್ಲಿದ್ದಾರೆ. ಇನ್ನು 9 ಜನ ಸಕರ್ಾರಿ ಆಸ್ಪತ್ರೆ ಮತ್ತು ಹೋಮ್ಕ್ವಾರಂಟೈನ್ದಲ್ಲಿದ್ದಾರೆ. ಈವರೆಗೆ ಕಳುಹಿಸಲಾದ 57 ಜನರ ಪೈಕಿ 54 ಜನರ ಸ್ವ್ಯಾಬ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಮೂವ್ವರ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಹೇಳಿದರು.
ಘೋಷಿತ, ಅಘೋಷಿತ ಅಸಂಘಟಿತ ಕಾಮರ್ಿಕರಿಗೆ ಮಾತ್ರ ಹಾಲು ವಿತರಣೆ: ಘೋಷಿತ ಅಘೋಷಿತ ಅಸಂಘಟಿತ ಕಾಮರ್ಿಕರು ಮತ್ತು ನಿರಾಶ್ರಿತ ಶಿಬಿರದಲ್ಲಿರುವವರಿಗೆ ಮಾತ್ರ ಒಂದು ಲೀಟರ್ ಹಾಲು ವಿತರಣೆ ಯೋಜನೆಯಿದ್ದು, ಅದರನ್ವಯ ಹಾಲನ್ನು ವಿತರಿಸಲಾಗಿದೆ. ಒಟ್ಟು 25 ಸಾವಿರ ಲೀಟರ್ ಹಾಲನ್ನು ಜಿಲ್ಲೆಯಾದ್ಯಂತ ವಿತರಿಸಲಾಗುತ್ತಿದ್ದು, ಮೇಲ್ಕಂಡವರನ್ನು ಹೊರತುಪಡಿಸಿ ಇತರರನ್ನು ಹಾಲನ್ನು ನೀಡಲಾಗುತ್ತಿಲ್ಲ. ಕಾರಣ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಐತಿಹಾಸಿಕ ಸ್ಮಾರಕ ಗೋಲಗುಂಬಜ್ ವ್ಯಾಪ್ತಿಯ ನವಿಲುಗಳಿಗೂ ಆಹಾರ ಧಾನ್ಯ: ನಗರದಲ್ಲಿ ಬಿಡಾಡಿ ದನಗಳಿಗೆ ಉಚಿತವಾಗಿ ಮೇವನ್ನು ಮತ್ತು ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಪಶುಸಂಗೋಪನೆ ಇಲಾಖೆ ಉಪ ನಿದರ್ೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ನಗರದಲ್ಲಿರುವ ಐತಿಹಾಸಿಕ ವಿಶ್ವವಿಖ್ಯಾತ ಗೋಲಗುಂಬಜ್ ಆವರಣದಲ್ಲಿರುವ ನವಿಲುಗಳಿಗೂ ಆಹಾರದ ಕೊರತೆಯಾಗದಂತೆ ನಿಗಾವಹಿಸಲು ಆಹಾರ-ಧಾನ್ಯ ಹಾಕಲು ನಿರ್ಧರಿಸಲಾಗಿದ್ದು, ದಿನಕ್ಕೆ ಎರಡು ಬಾರಿ ಈ ಅವಕಾಶ ಕಲ್ಪಿಸಲು ಪ್ರಾಚ್ಯವಸ್ತು ಮತ್ತು ಸವರ್ೇಕ್ಷಣಾ ಇಲಾಖೆಗೆ ಸೂಚಿಸುವಂತೆ ಪಶು ಸಂಗೋಪನೆ ಇಲಾಖೆ ಉಪ ನಿದರ್ೇಶಕರು ಸಭೆಯ ಗಮನಕ್ಕೆ ತಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಜಿಲ್ಲೆಯಾದ್ಯಂತ ಚೆಕ್ಪೋಸ್ಟ್ಗಳಲ್ಲಿ ತೀವ್ರ ನಿಗಾ ಇಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಪಡಿತರ ವಿತರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಾದ್ಯಂತ ವಾಡರ್್ವಾರು, ದಿನಾಂಕವಾರು ಪಡಿತರ ಹಂಚಿಕೆ ವೇಳಾಪಟ್ಟಿ ಅನ್ವಯ ಪಡಿತರ ಹಂಚಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಡಾ.ಸರ್ಜನ್ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿದರ್ೇಶಕಿ ಕುಮಾರಿ ಸುರೇಖಾ, ಜಿಲ್ಲಾ ಸವರ್ೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ. ಧಾರವಾಡಕರ, ಡಾ. ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಪ್ರಾಣೇಶ ಜಾಹಗೀರದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.