ತೆರೆದ ಬಾವಿಗಳು ಮುಚ್ಚಿಹಾಕಬೇಕು: ಜನರ ಆಗ್ರಹ

ಲೋಕದರ್ಶನ ವರದಿ

ಸಂಬರಗಿ 18: ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ರಸ್ತೆಬದಿಗೆ ಹಾಗೂ ಗ್ರಾಮದ ಮದ್ಯೆ ತೆರೆದ ಬಾವಿ ಇದ್ದರೆ ತಂತಿಬೇಲಿ ಹಾಕಬೇಕೆಂದು ಆದೇಶ ಹೊರಡಿಸಿದೆ. ಆದರೆ ಗಡಿ ಗ್ರಾಮಗಳಲ್ಲಿ ಇನ್ನೂವರೆಗೆ ಗ್ರಾಮದ ಮದ್ಯೆ ರಸ್ತೆಬದಿಗೆ ತೆರೆದ ಬಾವಿಗಳಿಗೆ ಯಾವುದೇ ಸುರಕ್ಷತೆ ಇಲ್ಲದ ಕಾರಣ ಜನರಿಗೆ ತೀರಾ ಸಮಸ್ಯೆಯಾಗಿದೆ. 

ಕಳೆದ 2008ರಲ್ಲಿ ಗಣೇಶ ಉತ್ಸವ ಕಾಲದಲ್ಲಿ ಪಾರ್ಥನಹಳ್ಳೀ ಗ್ರಾಮದಲ್ಲಿ ರಸ್ತೆಬದಿಯಿರುವ ತೆರೆದ ಬಾವಿಯಲ್ಲಿ ಬಸ್ ಬಿದ್ದು 4 ವಿದ್ಯಾರ್ಥಿಗಳು ಮೃತಪಟ್ಟಿದ್ದು ಆಹೊತ್ತಿಗೆ ರಾಜ್ಯ ಸರ್ಕಾರ ರಸ್ತೆಬದಿಗಿರುವ ತೆರೆದ ಬಾವಿಗಳು ಹಾಗೂ ಗ್ರಾಮದ ಮದ್ಯೆ ಇರುವ ತೆರೆದ ಬಾವಿಗಳು ತಂತಿ ಬೇಲಿ ಹಾಕಬೇಕೆಮದು ಆದೇಶ ಮಾಡಿದೆ. ಆನಂತರ 2017ರಲ್ಲಿ ಝೂಂಜುರವಾಡ ಗ್ರಾಮದ ಹೊರವಲಯದ ಕೊಳವೆ ಬಾವಿಯಲ್ಲಿ ಒಂದು ಬಾಲಕಿ ಬಿದ್ದು ಮೃತ ಪಟ್ಟಿದೆ. ಇಂತಹ ಘಟನೆಗಳು ಆದರೂ ಸಹ ಇನ್ನೂ ಗಡಿ ಭಾಗದ ಗ್ರಾಮಗಳಲ್ಲಿ ಹಾಗೂ ರಸ್ತೆಬದಿಗೆ ಇರುವ ತೆರೆದ ಬಾವಿಗಳು ಅಸುರಕ್ಷಿತವಾಗಿವೆ. ಜಂಬಗಿ, ಸಂಬರಗಿ, ಶಿರೂರ, ಸೇರಿದಂತೆ ಈ ಭಾಗದಲ್ಲಿ ಗ್ರಾಮದ ಮದ್ಯೆ ಇರುವ ಹಿಂದಿನ ಕಾಲದ ತೆರೆದ ಬಾವಿಗಳು ಹಾಗೆಯೆ ಇವೆ. ಗ್ರಾ ಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಿ ಆದೇಶವನ್ನು ಗಾಳಿಗೆ ತೂರಿ ಈ ಭಾಗದ ಹಲವರು ಗ್ರಾಮಗಳಲ್ಲಿ ರಸ್ತೆ ಬದಿಗೆ ತೆರೆದ ಬಾವಿಗಳು ಹಾಗೆಯೇ ಕಾಣುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ರಸ್ತೆಬದಿಗೆ ಅಸುರಕ್ಷಿತವಾಗಿರುವ ತೆರೆದ ಬಾವಿಗಳು ಮುಚ್ಚಿಹಾಕಬೇಕು. ಇಲ್ಲವಾದರೆ ತಂತಿ ಬೇಲಿ ಬಡಿದು ಸುರಕ್ಷತೆ ಕಾಪಾಡಬೇಕೆಂದು ಜನರ ಆಗ್ರಹಿಸಿದ್ದಾರೆ. 

ತಾಲೂಕಾ ಪಂಚಾಯತ ಕಾರ್ಯನನಿರ್ವಾಹಕ ಅಧಿಕಾರಿಗಳಾದ ರವಿ ಬಂಗಾರೆಪ್ಪನವರ ಇವರನ್ನು ಸಂಪರ್ಕಿಸಿದಾಗ ಗ್ರಾಮೀಣ ಪ್ರದೇಶದ ಯಾವ ಗ್ರಾಮದಲ್ಲಿ ಅಸುರಕ್ಷಿತವಾದ ತೆರೆದ ಬಾವಿಗಳು ಇವೆ ಆ ಪಿ.ಡಿ.ಓ ಗಳಿಗೆ ಸೂಚನೆ ನೀಡಿ ತಕ್ಷಣ ತಂತಿ ಬೇಳಿ ಬಡಿಸಲು ಸೂಚಿಸಲಾಗುವುದೆಂದು ಅವರು ಹೇಳಿದರು.