ಅಪರೇಷನ್ ಸಿಂಧೂರ ಯಶಸ್ವಿ: ಬಾಗಲಕೋಟೆಯಲ್ಲಿ ಬೃಹತ್ ತಿರಂಗಾ ಯಾತ್ರೆ

Operation Sindhur is a success: A huge Tiranga Yatra takes place in Bagalkot

ಬಾಗಲಕೋಟೆ 20: ದೇಶದ ರಕ್ಷಣೆಗೆಗಾಗಿ ನಮ್ಮೆಲ್ಲರ ನಡೆ ಎಂಬ ದ್ಯೇಯವಾಕ್ಯದೊಂದಿಗೆ ಬೃಹತ ತಿರಂಗಾ ಯಾತ್ರೆ ಯಶಸ್ವಿಯಾಯಿತು. 

ನಗರದ ಬಿ.ವಿ.ವಿ.ಸಂಘದ ಆವರಣದಲ್ಲಿರುವ ಬೀಳೂರ ಅಜ್ಜನ ದೇವಸ್ಥಾನದಿಂದ ಪ್ರಾರಂಭವಾದ ಬೃಹತ ತಿರಂಗಾ ಯಾತ್ರೆ ಪಶು ಆಸ್ಪತ್ರೆ, ಟೀಕಿನ ಮಠದ ರಸ್ತೆ, ಅಡತ ಬಜಾರ, ವಲ್ಲಬಾಯಿ ಚೌಕ,ಪೋಲೀಸ್ ಚೌಕ್ ಮುಖಾಂತರ ಮಹಾತ್ಮಾ ಗಾಂಧಿ ರಸ್ತೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು. 

ನಂತರ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಂಸದ ಪಿ,ಸಿ,ಗದ್ದಿಗೌಡರ ಪಾಕಿಸ್ತಾನದಲ್ಲಿ ಉಗ್ರಗಾಮಿಗಳನ್ನು ತಯಾರು ಮಾಡುವ ನೆಲೆಗಳನ್ನು ಕೇವಲ 27 ಸೆಕೆಂಡಗಳಲ್ಲಿ ನಮ್ಮ ಯೋಧರು ಧ್ವಂಸಗೊಳಿದ್ದಾರೆ, ದೇಶದ ವ್ಯವಸ್ಥೆಯನ್ನು ಬುಡಮೇಲು ಮಾಡುವ ದುರಾಲೋಚನೆ ಇದಕ್ಕೆ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ, ಹಾಗಾಗಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನೀಡಿರುವ ತಕ್ಕ ಉತ್ತರವನ್ನು ಇಡಿ ವಿಶ್ವವೇ ನೋಡಿದೆ ಎಂದರು. 

ಗುಳೆದಗುಡ್ಡದ ಒಪ್ಪತ್ತೇಶ್ವರಮಠದ ಒಪ್ಪತ್ತೇಶ್ವರಸ್ವಾಮಿಗಳು ಮಾತನಾಡಿ ಭಾರತ ಶಾಂತಿಪ್ರೀಯ ದೇಶವಾದರು ನಮ್ಮನ್ನು ತುಳಿಯಲು ಬಂದವರನ್ನು ಸುಮ್ನೆ ಬಿಡುವ ದೇಶವಲ್ಲಾ ಎನ್ನುವ ಎಚ್ಚರಿಕೆಯನ್ನು ಈ ಆಪ್ರೇಶನ ಸಿಂಧೂರ ಮಾಡಿದೆ, ಗುಡಿಯೋಳಗಿನ ದೇವರಗಿಂತ ಗಡಿಯೋಳಗಿನ ದೇವರು ದೊಡ್ಡವ ಎನ್ನುವು ಹಾಗೆ ಗಡಿಯಲ್ಲಿನ ಸೈನಿಕರಿಂದಾಗಿ ನಾವೇಲ್ಲ ಇಂದು ಸುರಕ್ಷಿತವಾಗಿದ್ದೇವೆ, ಅಂಥ ಸೈನಿಕರಿಗೆ ಶಕ್ತಿ ತುಂಬುವ ಇಂಥ ತಿರಂಗಯಾತ್ರೆ ಮಾಡಿದ್ದು ಶ್ಲಾಘನೀಯ ಎಂದರು. 

ತಿರಂಗಾ ಯಾತ್ರೆಯ ನೇತೃತ್ವದ ಸಾನಿದ್ಯ ವಹಿಸಿದ ಚರಂತಿಮಠದ ಪ್ರಭುಸ್ವಾಮಿಗಳು ಮಾತನಾಡಿ ಆಪರೇಶನ ಸಿಂಧೂರ ಇದು ಭಾರತ ಮಹಿಳೆಯರ ಗೌರವದ ಸಿಂಧೂರ, ಬಾರಿ ವ್ಯವಸ್ಥೆಯ ಮೂಲಕ ಜನರನ್ನು ಗುರಿಯಾಗಿಸದೆ ಉಗ್ರರರನ್ನು ಹಾಗೂ ಉಗ್ರರ ನೇಲೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿರುವುದನ್ನು ಇಡಿ ಜಗತ್ತೆ ಮೆಚ್ಚಿಕೊಂಡಿದೆ, ಆಪರೇಶನ ಸಿಂಧೂರದ ಮೂಲಕ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಗೋತ್ತಾಗಿದೆ, ಜೋತಗೆ ಅನೇಕ ದೇಶಗಳಿಗೆ ನಡುಕ ಉಂಟುಮಾಡಿದೆ, ಜಗತ್ತಿನ ಬಹುತೆಕ ದೇಶಗಳು ಭಾರತದ ಬೆಂಬಲಕ್ಕೆ ನಿಂತಿವೆ, ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಬಹಳ ದೂರದೃಷ್ಟಿಯನ್ನು ಇಟ್ಟುಕೊಂಡ ಉತ್ತಮ ಹೆಜ್ಜೆಯನ್ನು ಇಡುತ್ತಿದ್ದಾರೆ, ಅಪರೇಶನ ಸಿಂಧೂರ ಇದು ಭಾರತೀಯರು ಹೆಮ್ಮೆ ಪಡುವಂತಹ ಕೆಲಸವಾಗಿದೆ, ಸೈನಿಕರಿಗೆ ಅತ್ಮಸ್ಥೈರ್ಯ ಶಕ್ತಿಯನ್ನು ತುಂಬುವ ಸಲುವಾಗಿ ಈ ತಿರಂಗಾ ಯಾತ್ರೆ ನೀಜಕ್ಕೂ ಆತ್ಮವಿಶ್ವಾಸವನ್ನು ತುಂಬಿದೆ, ಇಂದಿನ ಯುವಶಕ್ತಿಗೆ ದೇಶಭಕ್ತಿಯ ಅರಿವು ಸಲುವಾಗಿ ವಿದ್ಯಾರ್ಥಿ ದೇಸೆಯಲ್ಲಿ ಎನ,ಸಿ,ಸಿ ಯಲ್ಲಿ ಭಾಗವಹಿಸುವಂತ ಕಾರ್ಯಕ್ಕೆ ಮುಂದಾಗಬೇಕು ಎಂದರು. 

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ಅಮೀನಗಡದ ಮಾತೆ ಮಾಣಿಕೇಶ್ವರಿ ಅಮ್ಮನವರು, ಮಾಜಿ ಶಾಸಕರಾದ ಡಾ. ವೀರಣ್ಣ ಚರಂತಿಮಠ, ನಂದು ಗಾಯಕವಾಡ, ಕ್ಯಾಪ್ಟನ್ ಕೋರಿ,ಸೇರಿದಂತೆ ವೀರ ಯೋಧರು, ನಿವೃತ್ತ ಯೋಧರು ಇದ್ದರು.  

ಗಮನ ಸೆಳೆದ ತಿರಂಗಾ : ಬಾಗಲಕೋಟೆಯಲ್ಲಿ ಬಿಜೆಪಿ ತಿರಂಗಾ ಯಾತ್ರೆಯಲ್ಲಿ ಸುಮಾರು 300 ಅಡಿ ಉದ್ದದ ತಿರಂಗಾ ಧ್ವಜದ ಮನಮೋಹಕ ಯಾತ್ರೆ ಜನರ ಗಮನ ಸೆಳೆಯಿತು. ಬೀಳೂರ ಅಜ್ಜನ ದೇವಸ್ಥಾನದಲ್ಲಿ ಚರಂತಿಮಠದ ಪ್ರಭುಸ್ವಾಮಿಗಳು, ಸಂಸರಾದ ಪಿ.ಸಿ.ಗದಿಗೌಡರ, ರಾಜ್ಯ ಡಾ.ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರು ತಿರಂಗಾ ಯಾತ್ರೆಗೆ ಚಾಲನೆ ನೀಡಿದರು, ತಿರಂಗಾ ಯಾತ್ರೆಯಲ್ಲಿ ಎನ್‌.ಸಿ.ಸಿ ವಿದ್ಯಾರ್ಥಿಗಳು, ಅಕ್ಕನ ಬಳಗದ ಸದಸ್ಯರು, ಮಹಿಳಾ ಸ್ವ ಸಹಾಯ ಸಂಘಗಳಿ, ವಕೀಲರ ಸಂಘ, ವೈಧ್ಯರ ಸಂಘ, ರೋಟರಿ ಹಾಗೂ ಲೈನ್ಸ ಕ್ಲಭ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ 6 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 

ದೂರದೃಷ್ಟಿಯನ್ನು ಇಟ್ಟುಕೊಂಡು ನಡೆಸಿದ ಅಪರೇಶನ ಸಿಂಧೂರದಿಂದ ಇಡಿ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯದ ಅರಿವು ಆಗಿದೆ.  

ಡಾ.ವೀರಣ್ಣ ಚರಂತಿಮಠ ಕಾರ್ಯಾಧ್ಯಕ್ಷರು.ಬಿ.ವಿ.ವಿ.ಸಂಘ