ಸುಮಾರು 800 ವರ್ಷದ ಹಳೆಯ ಕೆರೆ ಪುನರುಜ್ಜೀವನಗೊಳಿಸಿ ಹಸ್ತಾಂತರ

Our Village Our Lake Project by Dharmasthala Organization

ಧರ್ಮಸ್ಥಳ ಸಂಸ್ಥೆ ವತಿಯಿಂದ ನಮ್ಮೂರು ನಮ್ಮ ಕೆರೆ, ಯೋಜನೆಯಡಿ 

ಕಾಗವಾಡ 23: ಧರ್ಮಸ್ಥಳದ ಡಾ. ವೀರೇಂದ್ರ ಜಿ ಹೆಗಡೆ ಇವರ ನೇತೃತ್ವದಲ್ಲಿಯೇ ಧರ್ಮಸ್ಥಳ ಸಂಸ್ಥೆ ವತಿಯಿಂದ ಕಾಗವಾಡದಲ್ಲಿಯೇ ಸುಮಾರು 800 ವರ್ಷದ ಹಳೆಯ ಕೆರೆ ನಮ್ಮೂರು ನಮ್ಮ ಕೆರೆ, ಯೋಜನೆ ಅಡಿಯಲ್ಲಿ ಕಾಗವಾಡದ 826ನೇ ಕೆರೆ ಪುನರುಜ್ಜೀವನಗೊಳಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ ಸಮಾಜಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದು ಒಂದು ಒಳ್ಳೆಯ ಸಮಾಜ ಸೇವೆ ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು.   

ಶುಕ್ರವಾರ ದಿ.23ರಂದು ಬೆಳಿಗ್ಗೆ ಕೆರೆಗೆ ಪೂಜೆ ಸಸಿಗಳನ್ನು ನಟಿ ಕಾರ್ಯಕ್ರಮ ನೆರವೇರಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕರು ಮಾತನಾಡುತ್ತ  ಕಾಗವಾಡದಲ್ಲಿಯ ಸಮಸ್ತ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ 800 ವರ್ಷದ ಹಳೆಯ ಉನ್ನುವ ಕೆರೆ ಎಂಬ ಹೆಸರಿನ ಕೆರೆಯನ್ನು ಸುಮಾರು 5.50 ಲಕ್ಷ ರೂಪಾಯ್ ವೆಚ್ಚ ಮಾಡಿ ಪುನರುಜ್ಜೀವನಗೊಳಿಸಿದ್ದಾರೆ. ಈ ಕೆರೆ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಿತು.   

ಕೆಲ ರೈತರು ಬೆಳೆದ ಬೆಳೆಗಳು ರಾಸಾಯನಿಕ ಓಷಧಗಳು ಗೊಬ್ಬರಗಳು ಬಳಸುತ್ತಿದ್ದರಿಂದ ಅವು ವಿಷಕಾರಿವಾಗಿವೆ. ಅಲ್ಲದೆ ವಿಷಕಾರಿ ನೀರು ಬಾವಿ ಕೆರೆಗಳಲ್ಲಿ ಸಂಗ್ರಹಿಸಿದ್ದರಿಂದ ನೀರು ವಿಷಕಾರಿವಾಗಿದೆ. ನಾವೆಲ್ಲರೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ಧಾನ್ಯಗಳು, ಆಹಾರಗಳು ಸೇವಿಸಬೇಕು ಎಂದು ಹೇಳಿ 800 ವರ್ಷದ ಇತಿಹಾಸ ಹೊಂದಿರುವ ಈ ಕೆರೆಗೆ ಮರು ಜೀವನ ಪಡೆದಿದೆ ಇದನ್ನು ಎಲ್ಲರೂ ಪಾಲನೆ ಮಾಡಬೇಕು ಈ ಕೆರೆಯ ಮುಂದಿನ ಅಭಿವೃದ್ಧಿ ಕಾಮಗಾರಿಗೆ ನಾನು ಸಹಕರಿಸುತ್ತೇನೆ ಎಂದು ಶಾಸಕರು ಹೇಳಿದರು.   

ಕಾಗವಾಡ ತಹಸಿಲ್ದಾರ ರಾಜೇಶ ಬುರ್ಲಿ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಸಮಾಜ ಸೇವೆ ಬಗ್ಗೆ ಕೊಂಡಾಡಿದರು. ರಾಜ್ಯದಲ್ಲಿ ಅನೇಕ ಗ್ರಾಮಗಳಲ್ಲಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ, ಕೆರೆ ಹೂಳು ಎತ್ತುವುದು, ಸ್ಮಶಾನ ಭೂಮಿಗಳನನು ಊರ್ಜಿತ್ ಗೊಳಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಮುಂತಾದ ಸೇವೆ ನೀಡಿದ್ದಾರೆ. ಡಾಕ್ಟರ್ ವೀರೇಂದ್ರ ಜಿ ಹೆಗಡೆ, ದೇಶದಲ್ಲಿಯೇ ಮಾದರಿ ಸಮಾಜ ಸೇವಕರು ಎಂದು ಹೇಳಿದರು.   

ಧರ್ಮಸ್ಥಳ ಯೋಜನೆಯ ಅಥಣಿ ಜಿಲ್ಲಾ ವಲಯದ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ ಧರ್ಮಸ್ಥಳದ ಪೂಜೆ ವೀರೇಂದ್ರ ಜಿ ಹೆಗಡೆ ಇವರ ಆದೇಶ ಮೇರೆಗೆ ಈವರೆಗೆ 825 ಕೆರೆಗಳು ಪುನರ್ಜೀವನಗೊಳಿಸಿದ್ದು ಕಾಗವಾಡದ ಕೆರೆ 826ನೆ ಆಗಿದೆ. ಅಂತರಜಲ ಮಟ್ಟ ಹೆಚ್ಚಿಸಲು ಹೂಳು ಎತ್ತಿ ಕೆರೆಗಳ ಪುನರಜೀವನ ಮಾಡಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಳಿಸಿ ಇವತ್ತು ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿದ್ದೇವೆ ಮುಂದಿನ ಅಭಿವೃದ್ಧಿ ಕಾಮಗಾರಿ ಕೈಗೊಂಡು ಒಂದು ಮಾದರಿಕೆರೆ ಮಾಡಲಾಗುವುದು ಎಂದು ಹೇಳಿದರು.   

ಧರ್ಮಸ್ಥಳದ ಸಂಘ ಪ್ರತಿನಿಧಿಗಳು ಯೋಜನಾಧಿಕಾರಿಗಳು ಕಳೆದ ಅನೇಕ ದಿವಸಗಳಿಂದ ಸಹಕರಿಸಿ ಕಾರ್ಯಕ್ರಮ ಕೈಗೊಂಡಿದ್ದಾರೆ. ಕೆರೆ ಪುನರ್ಜೀವನ ಸಮಿತಿ ಅಧ್ಯಕ್ಷ ನ್ಯಾಯವಾದಿ ಸ್ವಪ್ನಿಲ್ ಪಾಟೀಲ, ಅಮರ್ ಶಿಂದೆ,  ಬಾಳಗೌಡ ಪಾಟೀಲ, ಧರ್ಮಸ್ಥಳದ ಸಂಜೀವ್ ಮರಾಠ ಲಿಂಗರಾಜ್ ಮಡಿವಾಳ ಅಭಿಯಂತರದ ಶಿವಪ್ಪ ಸೂಪರಮಟ್ಟಿ ಇವರನ್ನು ಸನ್ಮಾನಿಸಲಾಯಿತು.   

ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ  ಜ್ಯೋತಿಕುಮಾರ ಪಾಟೀಲ, ಬಾಬು ಸಯ್ಯದ್, ರೈತ ಸಂಸ್ಥೆಯ ಅಧ್ಯಕ್ಷ ಶಾಂತಿನಾಥ್ಕ ಕೆಲವ,ಪದ್ಮಾಕರ್ ಕರವ ಅರುಣ ಜೋ ಮಹಿಳಾ ಪ್ರತಿನಿಧಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.