ಧಾರವಾಡ 08: ಇಂದು ನಗರದ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವೀರ ನಾರಿ ರತ್ನ ಪ್ರತಿಷ್ಠಾನ ಸಂಸ್ಥೆಯು ಆಪರೇಷನ್ ಸಿಂಧೂರ ಜೈ ಹೋ ವಿಜಯೋತ್ಸವ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವೀರ ನಾರಿ ರತ್ನ ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ ವೀಣಾ ಬಿರಾದಾರ ಅವರು ಮಾತನಾಡಿ, ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಆಪರೇಷನ್ ಸಿಂಧೂರ್ ನಡೆಸಿ, ಪಾಕ್ ಉಗ್ರರನ್ನು ಸೆದೆ ಬಡಿದು ವಿಜಯಶಾಲಿಯಾಗಿದ್ದಾರೆ. ನಮ್ಮ ಭಾರತೀಯ ಸೈನಿಕರು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ವಿಜಯದ ಸಂಭ್ರಮಾಚರಣೆಯನ್ನು ಇಂದು ಶ್ರೀ ಸಾಯಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವೀರನಾರಿ ರತ್ನ ಪ್ರತಿಷ್ಠಾನದ (ವೀರ ಯೋಧರ ಪತ್ನಿಯರ ಸಂಘ, ಧಾರವಾಡ) ಎಲ್ಲಾ ಸಹೋದರಿಯರು ಸೇರಿ ಆಚರಿಸಿದರು. ಸಿಹಿ ಹಂಚಿ, ಸಂಭ್ರಮಪಟ್ಟರು.ಅಧ್ಯಕ್ಷರಾದ ಅನ್ನಪೂರ್ಣ, ಕಾರ್ಯದರ್ಶಿ ಪುಷ್ಪಾ, ಚೇತನಾ, ಮಂಜುಳಾ, ಹೇಮಾ, ಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.