ಗದಗ 11 : 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಾಣಿಜ್ಯ ಮತ್ತು ವಿಜ್ಙಾನ ವಿಭಾಗದಿಂದ ಒಟ್ಟು 438 ವಿದ್ಯಾರ್ಥಿಗಳು ಹಾಜರಾಗಿದ್ದು , 421 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ ಸರಾಸರಿ 96.33ಅ ಫಲಿತಾಂಶ ತಂದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಸದರಿ ಫಲಿತಾಂಶದಲ್ಲಿ 81 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 340 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಆದಿತ್ಯ ಗೊರವರ 568 (94.66ಅ) ಪ್ರಥಮ, ಸುನಿತಾ ಸಾಸ್ವಿಹಳ್ಳಿ 563 (94.33ಅ) ದ್ವಿತೀಯ, ಪವಿತ್ರಾ ಗರ್ಜಪ್ಪನವರ 561 (93.50ಅ) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಿಖಿತಾ ಪಟ್ಟಣಶೆಟ್ಟಿ 573 (95.50ಅ ) ಪ್ರಥಮ, ವಿನೋದ ನಾಯಕ 564 (94.00ಅ) ದ್ವಿತೀಯ, ಸಹಿರಾಬಾನು ಮುಲ್ಲಾನವರ 562( 93.67ಅ) ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಙಾನ ವಿಭಾಗದಲ್ಲಿ ಉಷಾ ತಳವಾರ 566 (94.33ಅ) ಪ್ರಥಮ, ಯಮನಪ್ಪ ಕಂಪ್ಲಿ 560 (93.33ಅ ) ದ್ವಿತೀಯ, ಸಹನಾ ಕರಿಗಾರ 559 (93.17ಅ) ತೃತೀಯ ಸ್ಥಾನ ಪಡೆದಿದ್ದಾರೆ. ಮಹೋನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಎಲ್ಲಾ ಉಪನ್ಯಾಸಕ ಭಾಂದವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಪ್ರಾಚಾರ್ಯರು ಅಭಿನಂದಿಸಿದ್ದಾರೆ.