ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ರಾಜ್ಯಕ್ಕೆ ಐದನೆಯ ರಾ್ಯಂಕ ಪಲ್ಲವಿ ಬಸವನಾಳಗೆ ಐಎಎಸ್ ಆಸೆ
ಮುಧೋಳ 03: ನಿರಂತರ ಓದು ಪರಿಶ್ರಮದಿಂದ ಏನೆಲ್ಲಾ ಸಾಧನೆ ಮಾಡಬಹುದೆಂಬುದಕ್ಕೆ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪಲ್ಲವಿ ಬಸವನಾಳ 625ಕ್ಕೆ 621 ಅಂಕಗಳನ್ನು ಪಡೆದು ರಾಜ್ಯಕ್ಕೆ ಐದನೆಯ ರ್ಯಾಂಕ ಪಡೆದು ಸಾಧನೆ ಮಾಡಿದ್ದು ಉತ್ತಮ ಉದಾಹರಣೆಯಾಗಿದೆ.
ಕನ್ನಡ ಮಾಧ್ಯಮ ಶಾಲೆ ಎಂದರೆ ಮೂಗು ಮುರಿಯುವ ಈ ಸಮಯದಲ್ಲಿ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ರ್ಯಾಂಕ ಪಡೆದ ವಿದ್ಯಾರ್ಥಿನಿ ಬಹುಮುಖ ಪ್ರತಿಭೆಯಾಗಿದ್ದು ಭಾಷಣ, ಚರ್ಚಾ, ಕ್ವೀಜ್, ಸ್ಪರ್ಧೆ, ರಂಗೋಲಿ ಯಾವೂದೇ ಪಠ್ಯೇತರ ಚಟುವಟಿಕೆ ಇರಲಿ ಇವಳು ಭಾಗವಹಿಸಿದರೆ ಅವಳಿಗೆ ಪ್ರಥಮ ಸ್ಥಾನ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿ ವಸತಿ ಶಾಲೆಗೆ ಆಯ್ಕೆಯಾದರೂ ನಾನು ಇದೇ ಶಾಲೆಯಲ್ಲಿ ಇರುತ್ತೇನೆ ಎಂದು ಹಟತೊಟ್ಟು ಈ ಶಾಲೆಯ ಮುಖ್ಯ ಶಿಕ್ಷಕರ ಗುರಿ 625ಕ್ಕೆ 625 ಮಾಡಿ ಸಾಧನೆ ಮಾಡುವದಕ್ಕಾಗಿ ಇಲ್ಲೇ ಓದಿದಲ್ಲದೆ ಯಾವೂದೇ ಟ್ಯೂಷನ್ ಕ್ಲಾಸ್‌ಗೆ ಹೋಗದೆ ಕೇವಲ ಶಾಲಾ ಶಿಕ್ಷಕರು ಹೇಳಿದ ಸೂಚನೆ ಹಾಗೂ ಹೆತ್ತವರ ಪ್ರೋತ್ಸಾಹದಿಂದ ಸಾಧನೆ ಮಾಡಿದ್ದು ಉಳಿದ ನಾಲ್ಕು ಅಂಕಗಳು ಖಂಡಿತಾ ಬರುತ್ತವೇ ಎಂದು ಹೇಳುತ್ತಾಳೆ.
ಕನ್ನಡಕ್ಕೆ 125, ಇಂಗ್ಲೀಷ 99, ಹಿಂದಿ 99, ಗಣಿತ 98, ವಿಜ್ಞಾನ 100, ಸ.ವಿಜ್ಞಾನ 100 ಅಂಕಗಳನ್ನು ಪಡೆದಿದ್ದಾಳೆ. 34 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, 21 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಕನ್ನಡ ನಾಲ್ಕು ವಿದ್ಯಾರ್ಥಿಗಳು 125, ಹಾಗೂ ಹಿಂದಿ ವಿಷಯದಲ್ಲಿ ನಾಲ್ಕು ವಿದ್ಯಾರ್ಥಿಗಳು 100, ಸ.ವಿಜ್ಞಾನ, ವಿಜ್ಞಾನದಲ್ಲಿ ತಲಾ ಓರ್ವ ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದಾರೆ.
ಇವರ ಕುಟಂಬ ಸಿಂದಗಿಗೆ ಹೋಗುವ ಸ್ಥಿತಿಯಲ್ಲಿದ್ದಾಗ ಈ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಗುಡೆಪ್ಪನವರ ಅವಳನ್ನು ಇಲ್ಲೇ ಬಿಡಿ ಅವಳಿಗೆ ವಸತಿ ವ್ಯವಸ್ಥೆ ಮಾಡುವದಾಗಿ ಹೇಳಿದಾಗ ಇಡೀ ವರ್ಷ ಖಾಸಗಿ ಕಾಲೇಜು ಉಪನ್ಯಾಸಕ ಮಲ್ಲಣ್ಣ ಬಸವನಾಳ ಊಟದ ತೊಂದರೆಯ ನಡುವೆಯೂ ಈ ಸಾಧನೆ ಮಾಡಿದ್ದಾಳೆ.