ಜನಾಕ್ರೋಶ ಯಾತ್ರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ನಡಹಳ್ಳಿ

Participate in large numbers in the Janakrosha Yatra: Nadahalli

ಲೋಕದರ್ಶನ ವರದಿ 

ಜನಾಕ್ರೋಶ ಯಾತ್ರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ನಡಹಳ್ಳಿ  

ಮುದ್ದೇಬಿಹಾಳ: ರಾಜ್ಯದ ಕಾಂಗ್ರೆಸ್ ಸರಕಾರದ ಬ್ರಷ್ಟಾಚಾರ, ದುರಾಡಳಿತ ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಪಕ್ಷದ ವತಿಯಿಂದ ಇದೆ 17 ರಂದು ವಿಜಯಪುರ ನಗರದಲ್ಲಿನ ದರಬಾರ ಮೈದಾನದಲ್ಲಿ ಸಂಜೆ 4 ಗಂಟೆಗೆ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ ಕಾರಣ ಮತಕ್ಷೇತ್ರದ ಬಿಜೆಪಿ ಪಕ್ಷದ ಮುಖಂಡರು ಬೂತ ಮಟ್ಟ ಪದಾಧಿಕಾರಿಗಳು, ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಕರೆ ನೀಡಿದರು. 

ಪಟ್ಟಣದ ತಮ್ಮ ನಿವಾಸದ ದಾಸೋಹ ನಿಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್  ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಗತಿಸುತ್ತಿವೆ. ಜನಪರ ಆಡಳಿತ ಕಾಣುವುದು ಬರಿ ಕನಸಿನ ಮಾತಾಗಿದೆ. ಸಧ್ಯ ಕಾಂಗ್ರೆಸ್ ಸರಕಾರದಲ್ಲಿ ವ್ಯಾಪಾಕ ಭ್ರಷ್ಟಾಚಾರದಿಂದ ಕೂಡಿದೆ ಎಂದು ಸ್ವತಃ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ರಾಮಯ್ಯನವರ ಆಪ್ತವಲಯದ ಸಲಹಾ ಸಮಿತಿ ಸದಸ್ಯ ಬಸವರಾಜ ರಾಯರೆಡ್ಡಿ ಬಹಿರಂಗವಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. 

ಚುನಾವಣೆ ಪೂರ್ವದಲ್ಲಿ ಇದೇ ಕಾಂಗ್ರೆಸ್ ಪಕ್ಷ ಹಲವಾರು ಜನಪರ ಯೋಜನೆಗಳ ಕುರಿತು ರಾಜ್ಯದ ಜನರಿಗೆ ರೈತರಿಗೆ ಭರವಸೆಗಳನ್ನು ಕೊಟ್ಟಿತ್ತು ಆದರೇ ಅಧಿಕಾರಕ್ಕೆ ಬಂದ ಕೂಡಲೇ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೃಷ್ಣಾಕೊಳ್ಳದ ನಿರಾವರಿ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ನಿರಾವರಿಗೆ ಆದ್ಯತೆ ನೀಡುವುದಾಗಿ, ಆಶಾ ಹಾಗೂ ಅಂಗನಾಡಿ ಕಾರ್ಯಕರ್ತರಿಗೆ ಆಶಾ ಗೋಪರ ಕಟ್ಟಿದರು, ಎಲ್ಲ ನಿಗಮದಲ್ಲಿ ಸರಕಾರಿ ನೌಕರರನ್ನು ತೆಗೆದಕೊಳ್ಳಲಾಗುವುದೆಂದು ಹೇಳಿಕೆ ಸುಳ್ಳಾಯಿತು, ವಿವಿಧ ನಿಗಮಗಳಿಗೆ ಅನುದಾನ ಕೊಡುವುದು ಮಾತ್ರವಲ್ಲದೇ ಇರುವ ಹಣವನ್ನು ಖಾಲಿ ಮಾಡಿದರು. 

ಮಹಿಳೆಯರಿಗೆ ಗ್ಯಾರಂಟಿ ಯೋಜನೆಯಡಿ ನೀಡುತ್ತಿರುವ ತಿಂಗಳಿಗೆ 2ಸಾವಿರ ರೂಗಳನ್ನು ಜನರನ್ನು ಕಡಿಮೆಗೊಳಿಸುವ ಉದ್ದೇಶದಿಂದ ನಿಜವಾದ ಬಿಪಿಎಲ್ ಕುಟುಂಭಗಳ ಪಡಿತರ ಕಾರ್ಡಗಳನ್ನು ರದ್ದು ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯೂ ಕೂಡ ಸಮರ​‍್ಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಜನರು ಬಳಸುವ ಪ್ರತಿಯೊಂದು ವಸ್ತುಗಳ ಮೇಲೆ ತೆರಿಗೆ ಹೆಚ್ಚಾಗಿಸಿದ್ದಾರೆ ಮಾತ್ರವಲ್ಲದೇ ಹಾಲಿನ ದರ, ಡಿಸೈಲ್ ಪೇಟ್ರೋಲ್ ಸೆಸ್ ದರ ಸೇರಿದಂತೆ ಅನೇಕ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದರಿಂದ ಜನಸಾಮಾನ್ಯರ ಬದುಕು ಇಂದು ದುಸ್ಥರವಾಗಿದೆ ಹಿಗಾಗಿ ರಾಜ್ಯದಲ್ಲಿಂದು ಜನ ಆಕ್ರೋಶಗೊಂಡಿದ್ದಾರೆ ಕಾರಣ ಬಿಜೆಪಿ ಪಕ್ಷ ಜನಾಕ್ರೋಶ ಯಾತ್ರೆ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸರಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಈ ಯಾತ್ರೆ ನಡೆಸಲಾಗುತ್ತಿದೆ 

 ಈ ಹಿಂದೆ ಬಿ ಎಸ್ ಯಡಿಯೂರ​‍್ಪನವರಂತ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರೈತ ಕಿಸಾನ ಸನ್ಮಾನ ಯೋಜನೆಯಡಿಯಲ್ಲಿ ರಾಜ್ಯದಿಂದ ಪ್ರತಿಯೊಬ್ಬ ರೈತರಿಗೆ 4 ಸಾವಿರ ಕೊಡಲಾಗುತ್ತಿತ್ತು, ರೈತ ಮಕ್ಕಳಿಗೆ ವಿದ್ಯಾನಿಧಿ ಎಂದು 2ಸಾವಿರ ಕೊಡುವುದು ಸೇರಿದಂತೆ ಅನೇಕ ನಮ್ಮ ಬಿಜೆಪಿ ಸರಕಾರ ಜನಪ್ರೀಯ ಜನಪರ ಯೋಜನೆಗಳನ್ನು ನಿಲ್ಲಿಸಿದೆ. ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಡಿ ಕೆ ಶಿವಕುಮಾರ ಪ್ರಯತ್ನಿಸುತ್ತಿದ್ದರೆ ಇನ್ನೊಂದು ಕಡೆ ಡಿ ಕೆ ಅವರು ಅಧಿಕಾರಕ್ಕೆ ಕೂರಬಾರದು ಎಂಬ ತಂತ್ರಗಾರಿಕೆಯ ಪ್ರಯತ್ನ ಈ ಸರಕಾರದಲ್ಲಿ ಕಾಣುವಂತಾಗಿದೆ. ಕೇವಲ ಅಧಿಕಾರಕ್ಕಾಗಿ ಕುರ್ಚಿಗಾಗಿ ಬಡಿದಾಡಿಕೊಳ್ಳುವಂತಾಗಿದೆ ವಿನಃ ನಿಜವಾದ ಸಾಮಾಜಿಕ ಜವಾಬ್ದಾರಿ ಜನಪರ ಆಡಳಿತ ಕಾಣಲು ಸಧ್ಯದ ಕಾಂಗ್ರೆಸ್ ಸರಕಾರದಿಂದ ಕಾಣಲು ಸಾಧ್ಯವಿಲ್ಲದಂತಾಗಿದೆ. 

ಯತ್ನಾಳ ಬಗ್ಗೆ ಮಾತನಾಡಲ್ಲ ಸಧ್ಯ ಅವರು ನಮ್ಮ ಪಕ್ಷದಲ್ಲಿಲ್ಲ ಅವರ ಜತೆ ಬಹುತೇಕರು ಪಕ್ಷದಿಂದ ಉಚ್ಚಾಟನೆಗೊಂಡಿದ್ದಾರೆ. ಇದರಿಂದ ಬಿಜೆಪಿ ಪಕ್ಷ ಸಂಪೂರ್ಣ ಸ್ವಚ್ಛವಾಗಿದೆ ಅದರ ಬಗ್ಗೆ ಹೆಚ್ಚಿಗೆ ನಾನು ಮಾತನಾಡುವುದಿಲ್ಲ. ಯಾರೇ ಹೋರಾಟ ಮಾಡಲಿ ನಾನೂ ಕೂಡ ಲಿಂಗಾಯತ ಹಿಂದೂ ಗೌಡನೆ ಇದ್ದೇನೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಲು ಸಮಯಕ್ಕಾಗಿ ಕಾಯತ್ತೇನೆ ಇದು ಎಚ್ಚರಿಕೆ ಅಲ್ಲ. ಪಂಚಮಸಾಲಿ ಸಮಾಜಕ್ಕೆ ನಾನ್ಯಾವತ್ತು ಅನ್ಯಾಯ ಮಾಡಿಲ್ಲ. ಮತಕ್ಷೇತ್ರದಲ್ಲಿ ಅತಿಹೆಚ್ಚು ಪಂಚಮಸಾಲಿ ಸಮಾಜ ಬಾಂಧವರು ನಮ್ಮ ಬಿಜೆಪಿಯಲ್ಲಿದ್ದಾರೆ. ಅವರ ಆಶಿರ್ವಾದ ನನ್ನ ಮೇಲಿದೆ ಕಾರಣ ಕೆಲ ಕಾಂಗ್ರೆಸ್ ಮುಖಂಡರ ಮಾತುಗಳನ್ನು ಕೇಳಿ ಹೋರಾಟ ಮಾಡಿದ್ದಾರೆ ಇದರಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಜನರ ಸೇವೆಯನ್ನೇ ಮಾಡುವ ಮೂಲಕ ಜನರ ಆಶೀರ್ವಾದ ಮೂಲಕ ಬೆಳೆದುಬಂದಿದ್ದೇನೆ ಎಲ್ಲ ಸಮಾಜದವರನ್ನು ಅತ್ಯಂತ ಗೌರವದಿಂದ ಕಂಡಿದ್ದೇನೆ ಇದರಲ್ಲಿ ಮುಸ್ಲಿಂ ಸಮಾಜಕ್ಕೂ ಗೌರವಿಸಿದ್ದೇನೆ ಎಂದರು. 

ತಾಲೂಕಾ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡರಾದ ಎಂ ಎಸ್ ಪಾಟೀಲ, ಗಂಗಾಧರ ನಾಡಗೌಡ, ಕೆಂಚಪ್ಪ ಬಿರಾದಾರ ಮಲಕೇಂದ್ರಾಯಗೌಡ ಪಾಟೀಲ, ಪ್ರಭು ಕಡಿ, ಚನ್ನಪ್ಪ ಕಮಠಿ, ಸೋಮನಗೌಡ ಬಿರಾದಾರ, ಮಲ್ಲಯ್ಯಸ್ವಾಮಿ ಚೊಂಡಿ, ರಾಜಶೇಖರ ಹೊಳಿ, ವಿಜಯಕುಮಾರ ಬಡಿಗೇರ, ಶ್ರೀಶೈಲ ದೊಡಮನಿ, ದೇವರಳ್ಳಿ, ಪ್ರೀತಿ ಕಂಬಾರ, ಗಿರಿಶಗೌಡ ಪಾಟೀಲ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಪ್ರೇಮಶಿಂಗ ಚವ್ಹಾಣ, ಸಂಜು ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು.