ಗದಗ 13 : ಐತಿಹಾಸಿಕ "ಸ್ಥಳ", "ಪರಂಪರೆ"ಪರಿಚಯಕ್ಕೆ ಶಾಶ್ವತ ಚಿತ್ರಾತ್ಮಕ ಮುದ್ರೆ ಹಾಗೂ ಚಿತ್ರ ಅಂಚೆ ಪತ್ರ ಲೋಕಾರೆ್ಣ ನಾಡಿನ ಜನರಿಗೆ ತಲುಪಿಸಿಲು ಸಹಕಾರಿ ಎಂದು ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರಕುಮಾರ್ ಹೇಳಿದರು.
ತಾಲೂಕಿನ ಲಕ್ಕುಂಡಿ ಗದಗ ವಿಭಾಗೀಯ ಅಂಚೆ ಕಚೇರಿ ಹಾಗೂ ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ಅನ್ನದಾನೀಶ್ವರ ಮಠದಲ್ಲಿ ಮಂಗಳವಾರ ನಡೆದ ಬ್ರಹ್ಮ ಜಿನಾಲಯ ದೇವಸ್ಥಾನದ ಶಾಶ್ವತ ಚಿತ್ರಾತ್ಮಕ ಮುದ್ರೆ ಹಾಗೂ ಚಿತ್ರ ಅಂಚೆ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಲಕ್ಕುಂಡಿಯ ದೇವಸ್ಥಾನದ ಕಲ್ಲಿನ ಕರಕುಶಲ ವಾಸ್ತುಶಿಲ್ಪ ಜಾಗತಿಕ ಮಟ್ಟದಲ್ಲಿ ಹೆಸರು ಪ್ರಖ್ಯಾತಿ ಪಡೆದಿದೆ. ಇಂತಹ ಐತಿಹಾಸಿಕ ಹಿನ್ನಲೆ ಮತ್ತು ಆ ಕಾಲಘಟ್ಟದ ಸಂಶೋಧನೆ ಬಗೆಗೆ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಈ ನಾಡಿನ ಸಂಸ್ಕ್ರತಿ, ಐತಿಹಾಸಿಕ ಕೊಡುಗೆ ವೈವಿಧ್ಯಮಯ ಪರಿಸರ ಮತ್ತು ಪರಂಪರೆ ಜನಸಾಮಾನ್ಯರಿಗೆ ತಲುಪಿಸಲು ಅಂಚೆ ಇಲಾಖೆ ಬ್ರಹ್ಮ ಜಿನಾಲಯ ದೇವಸ್ಥಾನದ ಶಾಶ್ವತ ಚಿತ್ರಾತ್ಮಕ ಮುದ್ರೆ ಹಾಗೂ ಚಿತ್ರ ಅಂಚೆ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದರು.ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ ಮಾತನಾಡಿ, ಈಗಾಗಲೇ ಭಾರತೀಯ ಅಂಚೆ ಇಲಾಖೆ ಹೊಸ ತಂತ್ರಜ್ಞಾನ ಜೊತೆಗೆ ವಿವಿಧ ಸೇವೆ ಸಮಾಜ ಕಡೆಯ ವ್ಯಕ್ತಿಗೂ ಲಭಿಸಲು ವಿನೂತನ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಹಾಗಾಗಿ ಜನರು ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಲಕ್ಕುಂಡಿಯ ವಾಸ್ತುಶಿಲ್ಪ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ.ನಾಡಿನ ಪ್ರಖ್ಯಾತ ಪ್ರವಾಸಿ ತಾಣ ಪರಿಚಯಿಸಲು ಮತ್ತು ಗ್ರಾಹಕರಿಗೆ ತಮ್ಮ ನೆಚ್ಚಿನ ಚಿತ್ರ ಕಳುಹಿಸಲು ಉಪಯೋಗಿಸಬಹುದಾಗಿದೆ. ಇತಂಹ ಮಹತ್ವದ ಅಂಚೆ ಚೀಟಿಯಿಂದಾಗಿ ದೇಶದ ಎಲ್ಲೆಡೆ ನಮ್ಮ ನಾಡಿನ ಹೆಮ್ಮೆಯ ಸಾಧಕರ, ಐತಿಹಾಸಿಕ ಮಹತ್ವ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ, ಪ್ರಸಿದ್ಧಿ ಪ್ರಚುರಪಡಿಸಲು ಸಾದ್ಯವಾಗಲಿದೆ ಎಂದರು.ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಲಕ್ಕುಂಡಿ ಐತಿಹಾಸಿಕ ಹಿನ್ನಲೆ ಕುರಿತು ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಜಯದೇವ ಕಡಗಿ ಪ್ರಾಸ್ತವಿಕವಾಗಿ ಮಾತನಾಡಿದರು.ಗ್ರಾಮ ಪಂಚಾಯಿತ ಅಧ್ಯಕ್ಷ ಕೆಂಚಪ್ಪ ಪೂಜಾರ ಅಧ್ಯಕ್ಷಕತೆ ವಹಿಸಿದ್ದರು.
ಗ್ರಾಮ ಪಂಚಾಯಿತ ಉಪಾಧ್ಯಕ್ಷೆ ಪುಪ್ಪಾ ಪಾಟೀಲ, ಅಂಚೆ ಸಂಗ್ರಾಹಕರ ಜೈನ ರಾಷ್ಟ್ರೀಯ ಉಪಾಧ್ಯಕ್ಷ ಮಹಾವೀರ ಕುಂದೂರು, ಲಕ್ಕುಂಡಿ ಉಪ ಅಂಚೆ ಪಾಲಕರಾದ ರವಿ ವರ್ಣಿಕರ, ಅನೀತಾ ಕುರಿ, ಬಸವರಾಜ ಸೇಡದ, ವಿವಿಧ ಜಿಲ್ಲೆಯ ಅಂಚೆ ಸಂಗ್ರಹಾಕರು ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು. ಅಂಚೆ ಇಲಾಖೆಯ ಜಿಲ್ಲಾ ತರಬೇತಿದಾರ ನಿಂಗಪ್ಪ ಹೂಗಾರ ಪ್ರಾರ್ಥಿಸಿ, ನಿರೂಪಿಸಿದರು.**ಗದಗ ಜಿಲ್ಲೆಯ ಲಕ್ಕುಂಡಿ ಅನ್ನದಾನೀಶ್ವರ ಮಠದಲ್ಲಿ ಮಂಗಳವಾರ ನಡೆದ ಬ್ರಹ್ಮ ಜಿನಾಲಯ ದೇವಸ್ಥಾನದ ಶಾಶ್ವತ ಚಿತ್ರಾತ್ಮಕ ಮುದ್ರೆ ಹಾಗೂ ಚಿತ್ರ ಅಂಚೆ ಪತ್ರವನ್ನು ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರಕುಮಾರ್ ಲೋಕಾರ್ಪಣೆ ಮಾಡಿದರು. ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ, ಗದಗ ವಿಭಾಗೀಯ ಅಂಚೆ ಅಧೀಕ್ಷಕ ಜಯದೇಚ ಕಡಗಿ ಚಿತ್ರದಲ್ಲಿ ಇದ್ದಾರೆ.