ಕಲಾದಗಿ(ತಾ.ಬಾಗಲಕೋಟೆ): ವಿದ್ಯಾರ್ಥಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸುವುದು ಉನ್ನತ ಶಿಕ್ಷಣದ ಮೂಲ ಉದ್ದೇಶ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಆದ್ದರಿಂದ ನೀವು ಇಲ್ಲಿ ಮೂರು ವರ್ಷದ ಬಿಎ ಪದವಿಯನ್ನು ಸರಿಯಾಗಿ ಕಲಿತರೆ ಮುಂದಿನ ವರ್ಷ ನೌಕರಿ ಹಿಡಿಯಬಹುದು ಎಂದು ಶ್ರೀಮತಿ ಈರಮ್ಮ ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಮದುರ್ಗ ಮಹಾವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಅಶೋಕ ಹುಲ್ಲಳ್ಳಿ ಅವರು ಹೇಳಿದರು.
ಕಲಾದಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ’ರಾಜ್ಯ ಪರಿಕಲ್ಪನೆ ಹುಟ್ಟು ಬೆಳವಣಿಗೆ’ ಎಂಬ ವಿಷಯ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ವಿಷಯ ಪಾಲಿಟಿಕ್ಸ್ ಅಲ್ಲ ಪೊಲಿಟಿಕಲ್ ಸೈನ್ಸ್ ಎಂಬುವುದು ನಮಗೆ ಸ್ಪಷ್ಟವಾದ ಅರಿವಿರಬೇಕು. ರಾಜ್ಯದ ಪರಿಕಲ್ಪನೆಯನ್ನು ತತ್ವಜ್ಞಾನಿಗಳಾದ ಪ್ಲೇಟೋ, ಅರಿಸ್ಟಾಟಲ್, ಸಾಕ್ರೆಟಿಸ್ ಸರಿಯಾಗಿ ಅರ್ಥೈಸಿದ್ದಾರೆ. ರಾಜ್ಯ ಎಂದರೆ ನಮ್ಮಿಂದ ನಮಗಾಗಿ ರೂಪಿಸುವುದು ಎಂದರ್ಥ. ಪ್ಲೇಟೋನ ಆದರ್ಶ ಸಿದ್ಧಾಂತ, ನ್ಯಾಯ ಪರಿಕಲ್ಪನೆ, ಶಿಕ್ಷಣ ಮಾದರಿಯಾದದ್ದು. ಶಿಕ್ಷಣದ ಉದ್ದೇಶ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾದರೆ ನ್ಯಾಯದ ಉದ್ದೇಶ ವ್ಯಕ್ತಿ ಇತರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡದಿರುವುದು. ಒಂದು ರಾಜ್ಯದ ಪರಿಕಲ್ಪನೆಯಲ್ಲಿ ಇವೆಲ್ಲವೂ ಇರಬೇಕು. ಹಾಗೆಯೇ ಅರಿಸ್ಟಾಟಲ್ ಮತ್ತು ಸಾಕ್ರೆಟಿಸ್ ನಂತಹ ಮಹಾಮೇಧಾವಿಗಳು ನಮ್ಮ ಏಳಿಗೆಗೆ ಕಾರಣ ಭೂತರಾಗಿದ್ದಾರೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಚ್. ಬಿ. ಮಹಾಂತೇಶ ಅವರು ರಾಜ್ಯ ಪರಿಕಲ್ಪನೆ ಎಂದರೆ ಏಳಿಗೆ ಮತ್ತು ಪ್ರಗತಿಯ ಸ್ವರೂಪವನ್ನು ಹೊಂದಿರುತ್ತದೆ. ರಾಜನಾದವನು ತತ್ವಜ್ಞಾನಿಯಾಗಿರಬೇಕು ಎಲ್ಲಾ ಬಂಧನಗಳಿಂದ ಮುಕ್ತಿ ಆಗಿರಬೇಕು. ಅದು ರಾಜ ಮತ್ತು ರಾಜ್ಯದ ಪರಿಕಲ್ಪನೆ ಎಂದು ತಾವು ಈ ಪೂರ್ವದಲ್ಲಿ ವ್ಯಾಸಂಗದ ದಿನಗಳಲ್ಲಿ ಓದಿದ ಅಂಶಗಳನ್ನು ಮೆಲುಕು ಹಾಕಿದರು. ರಾಜ್ಯ ಎಂಬ ಪರಿಭಾಷೆಗೆ ಒಂದು ವಿಶೇಷ ಸಂಕಲ್ಪವಿದೆ ಅದು ಪ್ರಗತಿಯ ಸಂಕೇತ. ಉದಾಹರಣೆ ಕರ್ನಾಟಕ ಸರ್ಕಾರ ಕೈಗೊಂಡ ಶಕ್ತಿ ಯೋಜನೆಯನ್ನು ಕುರಿತು ಹೆಚ್ಚು ಮಾತನಾಡುತ್ತೇವೆ. ಅದರ ಒರತಾಗಿ ಗೃಹಜ್ಯೋತಿ, ಯುವ ನಿಧಿ, ಗೌಣವಾಗಿವೆ. ನಿಜಕ್ಕೂ ಶಕ್ತಿ ಯೋಜನೆ ಮಹಿಳಾ ಸಬಲೀಕರಣದ ಒಂದು ಭಾಗವಾಗಿದೆ ಎಂದು ಹೇಳಿದರು.
ಪ್ರಾಸ್ತಾನಿಕ ನುಡಿಯನ್ನು ನುಡಿದ ಕು. ಯಂಕಮ್ಮರವರು ರಾಜ್ಯಶಾಸ್ತ್ರ, ಮನುಷ್ಯನ ಹುಟ್ಟಿನಿಂದಲೂ ಕೂಡ ಜೊತೆ ಜೊತೆಯಾಗಿ ಬೆಳೆದು ಬಂದಿದೆ. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ರಾಜ್ಯಶಾಸ್ತ್ರದ ಪರಿಕಲ್ಪನಯನ್ನು ಅರ್ಥಮಾಡಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.
ಪ್ರಾರ್ಥನೆಯನ್ನು ವಿದ್ಯಾರ್ಥಿನಿ ಸರಸ್ವತಿ ಉದಗಟ್ಟಿ ಮತ್ತು ತಂಡ, ನಿರೂಪಣೆಯನ್ನು ಗಂಗಮ್ಮ, ವಂದನಾರೆ್ಣಯನ್ನು ಲಕ್ಷ್ಮಿ ಸಿರಗುಂಪಿ, ಸ್ವಾಗತವನ್ನು ಡಾ. ಪುಂಡಲೀಕ ಹುನ್ನಳ್ಳಿ, ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಡಾ. ಸರೋಜಿನಿ ಹೊಸಕೇರಿ, ಮೌಲಾಸಾಬ ಮುಲ್ಲಾ, ಡಾ. ಎಲ್ಲಪ್ಪ. ಜಿ, ಡಾ. ಬಿಂದು. ಎಚ್. ಎ, ಶ್ರೀದೇವಿ ಮುಂಡಗನೂರು, ಸಿ. ವೈ. ಮೆಣಸಿನಕಾಯಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.