ಜಮಖಂಡಿ 19: ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಅಕ್ಕಿಕಾಳನ್ನು ತುಂಬಿದ ಚೀಲಗಳು 336, 17190 ಕೆಜಿ, ಪ್ರತಿ ಕೆಜಿಗೆ 34,60 ರಂತೆ ಸುಮಾರು ಬೆಲೆ ರೂ,594,774 ಪತ್ರಾಸ ಶೆಡ್ಡಿನಲ್ಲಿ ಇರುವ ಅಕ್ರಮದ ಅಕ್ಕಿಯ ಮೇಲೆ ಕಂದಾಯ ಮತ್ತು ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ. ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ನಗರದ ವಿಜಯಪೂರ ರಸ್ತೆಯ ಪಕ್ಕದಲ್ಲಿ ಇರುವ ಹಾಜಿಲಾಲ ಪೈಲ್ವಾನ ಅವರ ಪತ್ರಾಸ ಶೆಡ್ಡಿನಲ್ಲಿ ಸರಕಾರದಿಂದ ಹಂಚಿಕೆಯಾದ ಪಡಿತರ ಅಕ್ಕಿ ಕಾಳುಗಳನ್ನು ಕಡಿಮೆ ಬೆಲೆಗೆ ಪಡೆದುಕೊಂಡು. ಪಕ್ಕದ ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಿದ್ದು.366 ಚೀಲಗಳನ್ನು ತುಂಬಿದ್ದು. 17190 ಕೆಜಿಯ ಪಡಿತರ ಅಕ್ಕಿಯಾಗಿದ್ದು. ಸರಕಾರದ ಬೆಲೆಯಂತೆ ಕೆಜಿಗೆ 36,60 ರಂತೆ ಸುಮಾರು ರೂ,594.774 ಬೆಲೆ ಬಾಳುವ ಅಕ್ಕಿಯ ಮಾಲನ್ನು ಅಕ್ರಮಾವಾಗಿ ಸಂಗ್ರಹಿಸಿದ್ದರು ಎನ್ನಲಾಗಿದೆ.
ಕೂಲಿ ಕಾರ್ಮಿಕರಾದ ಪೈಗಂಬರ ಅಬ್ಬುಸಾಬ ಮಾಹಾಲಿಂಗಪೂರ, ದಾದಾಫೀರ ಸರಾ್ರಜ ಗಲಗಲಿ ತೂಕ ಮಾಡುವ ಸಮಯದಲ್ಲಿ ಅಧಿಕಾರಿಗಳ ದಾಳಿ ವೇಳೆಯಲ್ಲಿ ಸಿಕ್ಕಿದ್ದು. ಅವರು ಹೇಳಿಕೆಯ ಮೇಲೆ ಆರೋಪಿತರಾದ ಹಾಜಿಲಾಲ ಹಾಜಿಅನ್ವರ ಪೈಲವಾನ, ಮುಸ್ತಾಕ ಬಬಲು ಉರ್ಫ ಬಬ್ಬು ರೂಟ್, ರಿಜ್ವಾನ ಹಾಜಿಲಾಲ ಪೈಲವಾನ, ಬಬಲು ಉರ್ಫ ಬಬ್ಬು ರೂಟ್ ಅವರ ಮೇಲೆ ಶಹರ
ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದ್ದು ಬಂದಿದೆ.
ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಅಕ್ಕಿಯ ಶೆಡ್ಡಿನ ಮೇಲೆ ದಾಳಿ ವೇಳೆಯಲ್ಲಿ ಆಹಾರ ನೀರೀಕ್ಷಕ ಆನಂದ ರೇವು ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣಕುಮಾರ ರಾಜಶೇಖರ ಕಾರಾಜಣಗಿ, ಹೆಚ್ಚುವರಿ ಗ್ರಾಮ ಆಡಳಿತಾಧಿಕಾರಿ ಸಾಜೀದ ಜಲಾಲುದ್ದಿನ್ ಹದಲಿ, ಶಹರ ಪೋಲಿಸ್ ಠಾಣೆಯ ಕ್ರೈಂ ಪಿಎಸ್‌ಐ, ಬಿ,ಎಂ, ಕುಂಬಾರ ಸಿಬ್ಬಂಧಿಗಳಾದ ಎಸ್,ಟಿ,ಪಾಟೀಲ, ಎಸ್,ವೈ, ಆಸಂಗಿ, ಎಸ್,ಎಚ್,ಕೋಟಿ, ಎಸ್, ಎಂ, ನಾಯಕ, ರಾಜು ಪೂಜಾರಿ ಇದ್ದರು ಎನ್ನಲಾಗಿದೆ.