ಬಡತನ ಅನಕ್ಷರತೆ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಅಡ್ಡಿ ನೈತಿಕ ಅಪರಾಧ: ವೀರಣ್ಣ ಒಡ್ಡೀನ

ಧಾರವಾಡ 19: ಮಕ್ಕಳು ಮಾನವ ಸಂಪನ್ಮೂಲದ ಬುನಾದಿ ಮತ್ತು ದೇಶದ ಅಮೂಲ್ಯ ಆಸ್ತಿ ಎಂದು ಕರೆಯಲ್ಪಟ್ಟಿದ್ದು, ಬಡತನ ಹಾಗೂ ಅನಕ್ಷರತೆ ಅವರ ವ್ಯಕ್ತಿತ್ವ ವಿಕಾಸಕ್ಕೆ ಅಡ್ಡಿಯಾಗಿರುವುದು ನೈತಿಕ ಅಪರಾಧ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ವೀರಣ್ಣ ಒಡ್ಡೀನ ಹೇಳಿದರು. 

ಕರ್ನಾಟಕ  ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ``ವಿಶ್ವ ಮಕ್ಕಳ ಹಕ್ಕು ದಿನಾಚರಣೆ'' ಅಂಗವಾಗಿ ಇಲ್ಲಿಯ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಆಯೋಜಿಸಿದ ``ವ್ಯಕ್ತಿತ್ವ ವಿಕಸನದಲ್ಲಿ ಮಕ್ಕಳ ಹಕ್ಕುಗಳ ಪ್ರಸ್ತುತತೆ' ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಇಂದು ಜಗತ್ತು ಮುನ್ನಡೆಯುತ್ತಿರುವುದು ಮಕ್ಕಳ ಹೆಜ್ಜೆಗಳ ಮೇಲೆ. ಜಗತ್ತಿನ ಯಾವದೇ ಮಗು ಅಕ್ಷರ, ಅನ್ನ, ಅಕ್ಕರೆಯಿಂದ ವಂಚಿತವಾಗಬಾರದೆಂದು ವಿಶ್ವಸಂಸ್ಥೆ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ  1989 ರಲ್ಲಿ ತನ್ನದೇ ಆದ ಮಕ್ಕಳ ಹಕ್ಕುಗಳನ್ನು ಸಿದ್ಧಪಡಿಸಿತು. ಈ ಮಕ್ಕಳ ಹಕ್ಕುಗಳು ಯಾವುದೇ ತಾರತಮ್ಯವಿಲ್ಲದೇ ಜಗತ್ತಿನ ಎಲ್ಲಾ ಮಕ್ಕಳಿಗೂ ಸಮಾನವಾಗಿ ನೀಡಲ್ಪಟ್ಟಿವೆ ಎಂದರು.

ಬದುಕುವ ಹಕ್ಕು, ಆರೋಗ್ಯದ ಹಕ್ಕು, ಶಿಕ್ಷಣದ ಹಕ್ಕು, ಆಟವಾಡುವ ಹಕ್ಕು, ಶೋಷಣೆ ಹಾಗೂ ನಿಂದನೆಯ ವಿರುದ್ಧದ ಹಕ್ಕುಗಳು ಸೇರಿದಂತೆ ಒಟ್ಟು 12 ಹಕ್ಕುಗಳನ್ನು ನೀಡಿದೆ. ಭಾರತದ ಸಂವಿಧಾನವೂ ಸಹ ತನ್ನ ನಿರ್ದೇಶಕ ತತ್ವಗಳಲ್ಲಿ ಮಗುವಿನ ಶಿಕ್ಷಣಕ್ಕಾಗಿ ಉಚಿತ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಿದ್ದು, 2009 ರಲ್ಲಿ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು, ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ತಂದಿದೆ. ಈ ಹಕ್ಕುಗಳು ಪ್ರತಿ ಮಗುವಿಗೆ ಸಿಗಬೇಕಾದವು ಹಾಗೂ ಯಾರೂ ತಡೆಯಲಾರದವುಗಳಾಗಿವೆ. ಮಕ್ಕಳು ಚಿಕ್ಕವರೆಂದು ಭಾವಿಸಿ ಅವರನ್ನು ತಾತ್ಸಾರ ಮಾಡುವುದು ಸಲ್ಲದು. ಅವರ ಬೌದ್ಧಿಕ ಶಾರೀರಿಕ ದೈಹಿಕ ವಿಕಾಸಕ್ಕೆ ಹಕ್ಕುಗಳು ಅತ್ಯಗತ್ಯವಾಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿ ಸಾಮಾಜಿಕ ಪರಿಸರದ ಪ್ರಭಾವ ಅಪಾರವಾಗಿದೆ. ವಿದ್ಯಾಥರ್ಿಗಳು ತಮಗಿರುವ ಹಕ್ಕುಗಳ ಜೊತೆಗೆ ನೀವು ದೇಶಕ್ಕಾಗಿ, ಸಮಾಜಕ್ಕಾಗಿ ಮಾಡಬೇಕಾದ ಕರ್ತವ್ಯವು ಮುಖ್ಯ. ಜೀವನದಲ್ಲಿ ಉತ್ತಮ ಆಹಾರ, ಸಚ್ಚಾರಿತ್ರ್ಯವುಳ್ಳ ನಡೆ-ನುಡಿ, ಜ್ಞಾನಸಂಸ್ಕಾರ, ಬೌದ್ಧಿಕ ಸಂಸ್ಕಾರದ ಮೂಲಕ ಆದರ್ಶ ನಾಗರಿಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಜ್ಜನರ ಸಹವಾಸ ಬೆಳೆಸಿಕೊಂಡು ಸದಾಚಾರ ಸಂಪನ್ನರಾಗಬೇಕು. ಅಂದಾಗ ನಿಮ್ಮ ಶಿಕ್ಷಣಕ್ಕೊಂದು ಬೆಲೆ ಎಂದು ಹೇಳಿ, ಮುರುಘಾಮಠದ ಪೂಜ್ಯಮಹಾಂತ ಸ್ವಾಮಿಗಳು ತಮ್ಮ ಬಾಲ್ಯದ ದಿನಗಳಲ್ಲಿ ತಮಗೆ ಆಶೀವರ್ಾದ ಮಾಡಿದ್ದನ್ನು ಸ್ಮರಿಸಿಕೊಂಡರು. ಸುಂದರ ಕನಸು ಕಾಣುವ, ಓದುವ, ಆಟವಾಡುವ, ಈ ವಯಸ್ಸು ಹಾಳಾಗಬಾರದು. ನೆಮ್ಮದಿಯ ನಾಳೆಗಾಗಿ ವಿದ್ಯಾಥರ್ಿಗಳು ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣ, ಆರೋಗ್ಯ ವ್ಯಕ್ತಿ ಜೀವನದಲ್ಲಿ ಅತಿ ಮುಖ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಕ.ವಿ.ವ.ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ) ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಬಗ್ಗೆ ಈ ಉಪನ್ಯಾಸ ನೀಡಿದ್ದನ್ನು ಸ್ಮರಿಸುತ್ತಾ, ಮಕ್ಕಳು ಹಕ್ಕುಗಳೊಂದಿಗೆ, ಕರ್ತವ್ಯಗಳನ್ನೂ ಪಾಲನೆ ಮಾಡುವ ಅವಶ್ಯಕ. ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಉದಾರಣೆಯಾಗಿ ಬೀಜ ಬೆಳೆಯಲು ಉತ್ತಮ ಸಂಸ್ಕಾರದ ಇದ್ದರೆ ಮಾತ್ರ ಉತ್ತಮ ಫಲ ಪಡೆಯಲು ಸಾಧ್ಯವಾಗುವುದು ಎಂದು ಹೇಳಿ, ರೈತ ಹಿಡಿಕಾಳು ಬಿತ್ತಿ ಪಡಿ ಕಾಳು ಪಡೆಯುವ ಹಾಗೆ ಒಳ್ಳೆಯ ಸಂಸ್ಕಾರವಂತರಾಗಿ ಜ್ಞಾನಾರ್ಜನೆ ಪಡೆದುಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕೆಂದು ಹೇಳಿ ಮಕ್ಕಳೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. 

ಮುರುಘಾಮಠದ ಆಡಳಿತ ಮಂಡಳಿಯ ಸದಸ್ಯ ನಾಗರಾಜ ಪಟ್ಟಣಶೆಟ್ಟಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ಹಾಗೂ ಶಿ. ಮ. ರಾಚಯ್ಯನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಶಿಕ್ಷಣ ಮಂಟಪದ ಸಂಚಾಲಕ ಶಾಂತೇಶ ಗಾಮನಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಎಸ್. ಕೆ. ಅಸುಂಡಿ ಸ್ವಾಗತಿಸಿದರು. ಚಂದ್ರಶೇಖರ ಮಹಾಜನಶೆಟ್ಟರ ವಂದಿಸಿದರು. ರೂಪಾ ಶಿರಕೋಳ ನಿರೂಪಿಸಿದರು. 

ಶಾಲೆಯವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು.