ದೇವರಹಿಪ್ಪರಗಿ 17: ಸಿಂದಗಿ 110 ಕೆ.ವ್ಹಿ ಉಪ ಕೇಂದ್ರದಿಂದ ಹೊರ ಹೋಗುವ 33ಕೆ.ವ್ಹಿ ಗೋಲಗೇರಿ ಹಾಗೂ ಕಲಕೇರಿ ಮಾರ್ಗಗಳಲ್ಲಿ ದಿ.18.05.2025 ರಂದು ಭಾನುವಾರ ಆಹೇರಿ ವಿದ್ಯುತ್ ಸ್ವಿಕರಣ ಕೇಂದ್ರದಲ್ಲಿ ತುರ್ತು ಕಾರ್ಯದ ಸಲುವಾಗಿ ಬೆಳಿಗ್ಗೆ 9ಗಂಟೆಯಿಂದ ಸಾಯಂಕಾಲ 6ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸಿಂದಗಿ ಪಟ್ಟಣದ 110/11ಕೆವ್ಹಿ ಮಾರ್ಗದಿಂದ ಹೊರಹೋಗುವ 33ಕೆ.ವ್ಹಿ ಉಪ ಕೇಂದ್ರಗಳಾದ ಗೋಲಗೇರಿ ಹಾಗೂ ಕಲಕೇರಿ ಮಾರ್ಗದಲ್ಲಿ ಬೆಳಿಗ್ಗೆ 9:00 ರಿಂದ 6:00ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು. ಆದ್ದರಿಂದ ಸದರಿ ಉಪ ಕೇಂದ್ರದಿಂದ ಹೊರ ಹೋಗುವ ಎಲ್ಲಾ 11ಕೆವ್ಹಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.