ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಡಿ. 5 ಗುರುವಾರ ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. 495 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2180 ಸಿಬ್ಬಂದಿಗಳನ್ನು ಮತದಾನ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಶಾಂತಿಯುತ, ಪಾರದರ್ಶಕ ಹಾಗೂ ಸುಗಮ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಉಪ ಚುನಾವಣೆ ಮತದಾನ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಮಾಧ್ಯಮಗೋಷ್ಠಿಯಲ್ಲಿ ಡಿ.4 ರಿಂದ ರಾಣೇಬೆನ್ನೂರು ನಗರದ ಸೇಂಟ್ ಲಾರೆನ್ಸ್ ಪ್ರೌಢಶಾಲೆ ಹಾಗೂ ಹಿರೇಕೆರೂರಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಿಂದ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಬೆಳಿಗ್ಗೆಯಿಂದಲೇ ಕ್ಷೇತ್ರದ ಮತಗಟ್ಟೆಗಳಿಗೆ ಇ.ವಿ.ಎಂ. ಯಂತ್ರಗಳೊಂದಿಗೆ ನಿಯೋಜಿತ ಸಿಬ್ಬಂದಿಗಳು ತೆರಳಲಿದ್ದಾರೆ ಎಂದು ಹೇಳಿದರು.
100 ಸೂಕ್ಷ್ಮ ಮತಗಟ್ಟೆಗಳು: ಸುಗಮ ಮತದಾನಕ್ಕಾಗಿ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ 229 ಮತ್ತು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳನ್ನು ಹೊಂದಿದ್ದು, ಇವುಗಳ ಪೈಕಿ 100 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈ ಪೈಕಿ 54 ಮತಗಟ್ಟೆಗಳು ರಾಣೆಬೆನ್ನೂರು ಕ್ಷೇತ್ರದಲ್ಲಿ ಹಾಗೂ 46 ಮತಗಟ್ಟೆಗಳು ಹಿರೇಕೆರೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಈ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೋಲೀಸ್ ಸಿಬ್ಬಂದಿಗಳ ಜೊತೆಗೆ ಎಲ್ಲ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್ರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಸಖಿ ಮತಗಟ್ಟೆ: ಹಿರೇಕೆರೂರು ಪಟ್ಟಣದ ಮತಗಟ್ಟೆ ಸಂಖ್ಯೆ 144 (ಪಟ್ಟಣ ಪಂಚಾಯತಿ ಕಚೇರಿ ಹಾಲ್) ಹಾಗೂ ತಾಲೂಕಿನ ದೂದಿಹಳ್ಳಿ ಗ್ರಾಮದ 156ನೇ ಮತಗಟ್ಟೆ (ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ)ಯನ್ನು ಸಖಿ ಮತಗಟ್ಟೆ ಎಂದು, ಹಿರೇಕೆರೂರು ಪಟ್ಟಣದ 151ನೇ ಮತಗಟ್ಟೆ(ತಾಲೂಕು ಪಂಚಾಯತಿ ಸಾಮಥ್ರ್ಯ ಸೌಧ)ಯನ್ನು ಮಾದರಿ ಮತಗಟ್ಟೆ ಹಾಗೂ ಶ್ರೀರಾಮನಕೊಪ್ಪ 40ನೇ ಮತಗಟ್ಟೆ(ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ) ವಿಕಲಚೇತನರ ಮತಗಟ್ಟೆ ಎಂದು ಗುರುತಿಸಲಾಗಿದೆ.
2180 ಸಿಬ್ಬಂದಿ ನೇಮಕ: ಮತದಾನ ಕಾರ್ಯಕ್ಕಾಗಿ ಪ್ರತಿ ಮತಗಟ್ಟೆಗೆ 4 ಸಿಬ್ಬಂದಿಗಳಂತೆ ಒಟ್ಟು 2180 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ಸಿಬ್ಬಂದಿಗಳಿಗೆ 2 ಹಂತಗಳಲ್ಲಿ ಪೂರ್ಣ ಪ್ರಮಾಣದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
103 ವಾಹನ ಬಳಕೆ: ಸಿಬ್ಬಂದಿಯು ತಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರಗಳನ್ನು ತಲುಪಲು ಹಾವೇರಿ, ಹಾನಗಲ್, ಸವಣೂರು ತಾಲೂಕುಗಳಿಂದ 24 ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
1,83,481 ಮತದಾರರು: ಉಪ ಚುನಾವಣೆಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳಸಿದ ಮತದಾರರ ಪಟ್ಟಿಯನ್ನೇ ಬಳಸಲಾಗುವುದು. ಸದರಿ ಚುನಾವಣೆಗೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 118627 ಪುರುಷ, 114497 ಮಹಿಳಾ ಹಾಗೂ 13 ಇತರೇ ಮತದಾರರು ಸೇರಿ ಒಟ್ಟು 233137 ಮತದಾರರಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 94474 ಪುರುಷ, 89003 ಮಹಿಳಾ ಹಾಗೂ 04 ಇತರೇ ಮತದಾರರು ಸೇರಿ ಒಟ್ಟು 183481 ಮತದಾರರಿದ್ದಾರೆ ಎಂದು ತಿಳಿಸಿದರು.
37 ಅಂಚೆ ಮತಪತ್ರ: ಮತದಾನ ಕಾರ್ಯಕ್ಕಾಗಿ ನಿಯೋಜಿತರಾದ ಸಿಬ್ಬಂದಿಗಳು ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಲ್ಲಿ ಅವರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಅಂಚೆ ಮತ ಪತ್ರ ಮತ್ತು ಚುನಾವಣಾ ಕರ್ತವ್ಯ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಎರಡು ಕ್ಷೇತ್ರಗಳು 37 ಸಿಬ್ಬಂದಿಗಳಿಗೆ ಅಂಚೆ ಮತ ಪತ್ರಗಳನ್ನು ಹಾಗೂ 466 ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಜೊತೆಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ 298 ಯೋಧರಿಗೆ ಅಂಚೆ ಮತ ಪತ್ರಗಳನ್ನು ಕಳುಹಿಸಲಾಗಿದೆ.
ಮಸ್ಟರಿಂಗ್:
ನೋಡಲ್ ಅಧಿಕಾರಿಗಳು: ವ್ಯವಸ್ಥಿತ ಚುನಾವಣೆಗಾಗಿ 25 ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, 144 ಸೆಕ್ಟೆರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅದೇ ರೀತಿ 6 ವಿಡಿಯೋ ಪರಿಶೀಲನಾ ತಂಡಗಳು, 18 ಫ್ಲಾಯಿಂಗ್ ಸ್ಕ್ವಾಡ್ಗಳು, 4 ವೆಚ್ಚ ಪರಿಶೀಲನಾ ತಂಡಗಳು, 2 ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಪರೀಕ್ಷಾರ್ಥ ಐ.ಎ.ಎಸ್. ಅಧಿಕಾರಿಗಳಾದ ಕುಮಾರಿ ನೇಹಾ ಜೈನ್ ಹಾಗೂ ಈಶ್ವರಕುಮಾರ ಕಾಂದೂ, ಅಬಕಾರಿ ಅಧೀಕ್ಷಕರಾದ ನಾಗಶಯನ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು. ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಡಿ. 5 ಗುರುವಾರ ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. 495 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2180 ಸಿಬ್ಬಂದಿಗಳನ್ನು ಮತದಾನ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಶಾಂತಿಯುತ, ಪಾರದರ್ಶಕ ಹಾಗೂ ಸುಗಮ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಉಪ ಚುನಾವಣೆ ಮತದಾನ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಮಾಧ್ಯಮಗೋಷ್ಠಿಯಲ್ಲಿ ಡಿ.4 ರಿಂದ ರಾಣೇಬೆನ್ನೂರು ನಗರದ ಸೇಂಟ್ ಲಾರೆನ್ಸ್ ಪ್ರೌಢಶಾಲೆ ಹಾಗೂ ಹಿರೇಕೆರೂರಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಿಂದ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಬೆಳಿಗ್ಗೆಯಿಂದಲೇ ಕ್ಷೇತ್ರದ ಮತಗಟ್ಟೆಗಳಿಗೆ ಇ.ವಿ.ಎಂ. ಯಂತ್ರಗಳೊಂದಿಗೆ ನಿಯೋಜಿತ ಸಿಬ್ಬಂದಿಗಳು ತೆರಳಲಿದ್ದಾರೆ ಎಂದು ಹೇಳಿದರು.
100 ಸೂಕ್ಷ್ಮ ಮತಗಟ್ಟೆಗಳು: ಸುಗಮ ಮತದಾನಕ್ಕಾಗಿ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ 229 ಮತ್ತು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳನ್ನು ಹೊಂದಿದ್ದು, ಇವುಗಳ ಪೈಕಿ 100 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈ ಪೈಕಿ 54 ಮತಗಟ್ಟೆಗಳು ರಾಣೆಬೆನ್ನೂರು ಕ್ಷೇತ್ರದಲ್ಲಿ ಹಾಗೂ 46 ಮತಗಟ್ಟೆಗಳು ಹಿರೇಕೆರೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಈ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೋಲೀಸ್ ಸಿಬ್ಬಂದಿಗಳ ಜೊತೆಗೆ ಎಲ್ಲ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್ರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಸಖಿ ಮತಗಟ್ಟೆ: ಹಿರೇಕೆರೂರು ಪಟ್ಟಣದ ಮತಗಟ್ಟೆ ಸಂಖ್ಯೆ 144 (ಪಟ್ಟಣ ಪಂಚಾಯತಿ ಕಚೇರಿ ಹಾಲ್) ಹಾಗೂ ತಾಲೂಕಿನ ದೂದಿಹಳ್ಳಿ ಗ್ರಾಮದ 156ನೇ ಮತಗಟ್ಟೆ (ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ)ಯನ್ನು ಸಖಿ ಮತಗಟ್ಟೆ ಎಂದು, ಹಿರೇಕೆರೂರು ಪಟ್ಟಣದ 151ನೇ ಮತಗಟ್ಟೆ(ತಾಲೂಕು ಪಂಚಾಯತಿ ಸಾಮಥ್ರ್ಯ ಸೌಧ)ಯನ್ನು ಮಾದರಿ ಮತಗಟ್ಟೆ ಹಾಗೂ ಶ್ರೀರಾಮನಕೊಪ್ಪ 40ನೇ ಮತಗಟ್ಟೆ(ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ) ವಿಕಲಚೇತನರ ಮತಗಟ್ಟೆ ಎಂದು ಗುರುತಿಸಲಾಗಿದೆ.
2180 ಸಿಬ್ಬಂದಿ ನೇಮಕ: ಮತದಾನ ಕಾರ್ಯಕ್ಕಾಗಿ ಪ್ರತಿ ಮತಗಟ್ಟೆಗೆ 4 ಸಿಬ್ಬಂದಿಗಳಂತೆ ಒಟ್ಟು 2180 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ಸಿಬ್ಬಂದಿಗಳಿಗೆ 2 ಹಂತಗಳಲ್ಲಿ ಪೂರ್ಣ ಪ್ರಮಾಣದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
103 ವಾಹನ ಬಳಕೆ: ಸಿಬ್ಬಂದಿಯು ತಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರಗಳನ್ನು ತಲುಪಲು ಹಾವೇರಿ, ಹಾನಗಲ್, ಸವಣೂರು ತಾಲೂಕುಗಳಿಂದ 24 ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
1,83,481 ಮತದಾರರು: ಉಪ ಚುನಾವಣೆಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳಸಿದ ಮತದಾರರ ಪಟ್ಟಿಯನ್ನೇ ಬಳಸಲಾಗುವುದು. ಸದರಿ ಚುನಾವಣೆಗೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 118627 ಪುರುಷ, 114497 ಮಹಿಳಾ ಹಾಗೂ 13 ಇತರೇ ಮತದಾರರು ಸೇರಿ ಒಟ್ಟು 233137 ಮತದಾರರಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 94474 ಪುರುಷ, 89003 ಮಹಿಳಾ ಹಾಗೂ 04 ಇತರೇ ಮತದಾರರು ಸೇರಿ ಒಟ್ಟು 183481 ಮತದಾರರಿದ್ದಾರೆ ಎಂದು ತಿಳಿಸಿದರು.
37 ಅಂಚೆ ಮತಪತ್ರ: ಮತದಾನ ಕಾರ್ಯಕ್ಕಾಗಿ ನಿಯೋಜಿತರಾದ ಸಿಬ್ಬಂದಿಗಳು ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಲ್ಲಿ ಅವರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಅಂಚೆ ಮತ ಪತ್ರ ಮತ್ತು ಚುನಾವಣಾ ಕರ್ತವ್ಯ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಎರಡು ಕ್ಷೇತ್ರಗಳು 37 ಸಿಬ್ಬಂದಿಗಳಿಗೆ ಅಂಚೆ ಮತ ಪತ್ರಗಳನ್ನು ಹಾಗೂ 466 ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಜೊತೆಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ 298 ಯೋಧರಿಗೆ ಅಂಚೆ ಮತ ಪತ್ರಗಳನ್ನು ಕಳುಹಿಸಲಾಗಿದೆ.
ಮಸ್ಟರಿಂಗ್:
ನೋಡಲ್ ಅಧಿಕಾರಿಗಳು: ವ್ಯವಸ್ಥಿತ ಚುನಾವಣೆಗಾಗಿ 25 ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, 144 ಸೆಕ್ಟೆರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅದೇ ರೀತಿ 6 ವಿಡಿಯೋ ಪರಿಶೀಲನಾ ತಂಡಗಳು, 18 ಫ್ಲಾಯಿಂಗ್ ಸ್ಕ್ವಾಡ್ಗಳು, 4 ವೆಚ್ಚ ಪರಿಶೀಲನಾ ತಂಡಗಳು, 2 ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಪರೀಕ್ಷಾರ್ಥ ಐ.ಎ.ಎಸ್. ಅಧಿಕಾರಿಗಳಾದ ಕುಮಾರಿ ನೇಹಾ ಜೈನ್ ಹಾಗೂ ಈಶ್ವರಕುಮಾರ ಕಾಂದೂ, ಅಬಕಾರಿ ಅಧೀಕ್ಷಕರಾದ ನಾಗಶಯನ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು.