ಬ್ಯಾಡಗಿ 03: ತಾಲೂಕಿನ ಛತ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಖಾಸಗಿ ಬಸ್ ಕೆ ಎ:47. 7787 ಶ್ರೀ ಕುಮಾರ ಟ್ರಾವೆಲ್ಸ್ ಬೆಂಗಳೂರಿನಿಂದ ಶಿರಸಿ ಸಿದ್ದಾಪುರ ವರೆಗೆ ಹೋಗುವ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾಗಿದ್ದು ಸದರಿ ಬಸ್ ನಲ್ಲಿ 14 ಜನ ಪ್ರಯಾಣಿಕರಿದ್ದು ಅದರಲ್ಲಿ 04ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದರಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು 4 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸದರಿಯವರನ್ನು ರಾಣೆಬೆನ್ನೂರು ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.