ಲೋಕದರ್ಶನ ವರದಿ
ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ
ಬಾಗಲಕೋಟೆ 27: ನಗರದ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ ಜರುಗಿತು.
ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎನ್.ರಾಂಪೂರ ಅವರು ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ, ಶಕ್ತಿ, ಯೋಜನೆಯ ಕುರಿತು ಅನುಷ್ಠಾ ಇಲಾಖೆಯ ಅಧಿಕಾರಿಗಳಿಂದ ಪ್ರಗತಿ ವರದಿ ಹಾಗೂ ಕುಂದು ಕೊರತೆಗಳು ನಿವಾರಣಾ ಕ್ರಮಗಳು ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಪರೀಶೀಲನೆ ನಡೆಸಿದರು. ಅರ್ಹ ಫಲಾನುಭವಿಗಳು ಸರಕಾರದ ಯೋಜನೆಗಳಿಂದ ವಂಚಿತರಾಗದಂತೆ ಕ್ರಮವಹಿಸಲು ತಿಳಿಸಿದರು.
ಹೊಸದಾಗಿ ಸದಸ್ಯರಾಗಿ ಆಯ್ಕೆಯಾದ ಇರ್ಫಾನ ಮುದ್ನಾಳ ರವೀಂದ್ರ ಅನವಾಲ ರವರನ್ನ ಅಧ್ಯಕ್ಷರು ಅಭಿನಂದಿಸಿ, ಸನ್ಮಾನಿಸಲಾಯಿತು. ಸಭೆಯಲ್ಲಿ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರಾದ ರೇಣುಕಾ ನ್ಯಾಮಗೌಡ, ರಂಗಪ್ಪ ಮಳ್ಳಿ, ಜಟ್ಟೆಪ್ಪ ಮಾದಾಪೂರ, ಹನಮಂತ ಪೂಜಾರಿ, ಚನ್ನವೀರ್ಪ ಅಂಗಡಿ ರವೀಂದ್ರ ಅನವಾಲ ಮಹ್ಮಮದ ಇರ್ಫಾನ ಮುದ್ನಾಳ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಎಸ್.ಸಂಪಗಾವಿ, ಯೋಜನೆಯ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
********
ಪ್ಯಾನೆಲ್ ವಕೀಲರ ನೇಮಕಕ್ಕೆ ಅರ್ಜಿ
ಬಾಗಲಕೋಟೆ: ಜಿಲ್ಲಾ ಮತ್ತು ತಾಲೂಕಾ ಕಾನೂನು ಸೇವೆಗಳ ಪ್ರಾಧಿಕಾರದ ಸೇವಾ ಸಮಿತಿಗಳಾದ ಬನಹಟ್ಟಿ, ಜಮಖಂಡಿ, ಮುಧೋಳ, ಬೀಳಗಿ, ಹುನಗುಂದ ಮತ್ತು ಬಾದಾಮಿಯಲ್ಲಿ ಕಾರ್ಯನಿರ್ವಹಿಸಲು ಸಮಿತಿಯ ನ್ಯಾಯವಾದಿಗಳನ್ನಾಗಿ (ಪ್ಯಾನೆಲ್ ವಕೀಲರನ್ನು) ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 3 ವರ್ಷಕ್ಕೂ ಹೆಚ್ಚು ವಕೀಲ ವೃತ್ತಿಯನ್ನು ಸಂಬಂದಪಟ್ಟ ವಕೀಲರ ಸಂಘದಲ್ಲಿ ಸದಸ್ಯತ್ವವನ್ನು ಪಡೆದಿರತಕ್ಕದ್ದು. ಅಭ್ಯರ್ಥಿಯು ಮುಖ್ಯವಾಗಿ ಸೇವಾ ಮನೋಭಾವನೆಯನ್ನು ಹೊಂದರಬೇಕು. ಅರ್ಜಿ ನಮೂನೆಯನ್ನು ಜಿಲ್ಲಾ ಹಾಗೂ ಆಯಾ ತಾಲೂಕಿನ ಕಾನೂನು ಸೇವಾ ಪ್ರಧಿಕಾರದ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಮೇ 2 ರಂದು ಮಧ್ಯಾಹ್ನ 2 ಗಂಟೆಯೊಳಗಾಗಿ ಸಲ್ಲಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.